ಇ-ಪೌತಿ ಖಾತಾ ಆಂದೋಲನ ಯಶಸ್ವಿಗೊಳಿಸಿ

Contributed byparashurammkerehalli@gmail.com|Vijaya Karnataka

ಇ-ಪೌತಿ ಖಾತಾ ಆಂದೋಲನವು ಯಶಸ್ವಿಯಾಗಿದ್ದು, ಮರಣ ಹೊಂದಿದ ಯಜಮಾನನ ಹೆಸರಿನಲ್ಲಿರುವ ಜಮೀನಿನ ಖಾತಾ ಬದಲಾವಣೆಯಿಂದ ಕುಟುಂಬ ಸದಸ್ಯರಿಗೆ ಅನುಕೂಲವಾಗಲಿದೆ. ಕಂದಾಯ ಸಚಿವರ ಮಾರ್ಗದರ್ಶನದಲ್ಲಿ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಖಾತಾ ಬದಲಾವಣೆಯಿಂದ ಬೆಳೆವಿಮೆ, ಪರಿಹಾರ, ಸಾಲ ಸೌಲಭ್ಯ ಹಾಗೂ ಇತರ ಸರಕಾರಿ ಸವಲತ್ತುಗಳು ದೊರೆಯಲಿವೆ. ಸರಳೀಕೃತ ನಿಯಮಗಳೊಂದಿಗೆ ಖಾತೆ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ.

e paathi account movement surveys and solutions

ವಿಕ ಸುದ್ದಿಲೋಕ ರಿಪ್ಪನ್ ಪೇಟೆ ಮರಣ ಹೊಂದಿದ ಯಜಮಾನನ ಹೆಸರಿನಲ್ಲಿದ್ದ ಜಮೀನಿನ ಖಾತಾ ಬದಲಾ ವಣೆಯಿಂದ ಕುಟುಂಬ ಸದಸ್ಯರಿಗೆ ಉಪಯೋಗವಾಗುತ್ತದೆ ಎಂದು ತಹಸೀಲ್ದಾರ್ ಭರತ್ ರಾಜ್ ಹೇಳಿದರು. ಪಟ್ಟಣದ ಗ್ರಾ.ಪಂ. ಸಭಾಂಗಣದಲ್ಲಿಬುಧವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಇ-ಪೌತಿ ಖಾತಾ ಆಂದೋಲನದ ಮಾಹಿತಿ ಕಾರ್ಯಕ್ರಮ ದಲ್ಲಿಅವರು ಮಾತನಾಡಿದರು. ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಖಾತಾ ಬದಲಾವಣೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕಂದಾಯ ಸಚಿವ ಕೃಷ್ಣಬೈರೇಗೌಡರು ಆಂದೋಲನ ರೂಪಿಸಿ ಸಮಯ ನಿಗದಿಗೊಳಿಸಿದ್ದಾರೆ. ಅದರಂತೆ ಕಂದಾಯ ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ಸಂಬಂಧಿತ ದಾಖಲೆ ಪಡೆದುಕೊಂಡು ಖಾತಾ ಬದಲಾವಣೆ ಪ್ರಕ್ರಿಯೆ ಮಾಡುತ್ತಿದ್ದೇವೆ. ಆದರೂ ಕೆಲವರು ಆಸಕ್ತಿ ತೋರಿಸುತ್ತಿಲ್ಲಎಂದರು. ಮರಣ ಹೊಂದಿದ ವ್ಯಕ್ತಿಯಿಂದ ಇತರ ಸದಸ್ಯರ ಹೆಸರಿಗೆ ಖಾತಾ ಬದಲಾವಣೆಯಾಗದಿದ್ದಲ್ಲಿಬೆಳೆವಿಮೆ, ಪರಿಹಾರ, ಸಾಲ ಸೌಲಭ್ಯ ಇನ್ನಿತರ ಸರಕಾರಿ ಸವಲತ್ತುಗಳು ದೊರೆಯು ವುದಿಲ್ಲ. ಆದ್ದರಿಂದ ನಿಯಮದಲ್ಲಿಸರಳೀಕರಣ ಮಾಡಲಾಗಿದ್ದು, ಮೃತನ ಮರಣ ಪತ್ರವನ್ನು ಸ್ಥಳ ಮಹಜರಿ ನೊಂದಿಗೆ ದಾಖಲಿಸಿಕೊಂಡು, ಸದಸ್ಯ ರಿಂದ ವಂಶವೃಕ್ಷ, ಒಟಿಪಿ ಪಡೆದು ಕುಟುಂಬದ ಎಲ್ಲಸದಸ್ಯರಿಗೂ ಜಂಟಿ ಖಾತೆ ಮಾಡುತ್ತೇವೆ. ಕುಟುಂಬದ ಆಸ್ತಿ ವ್ಯಾಜ್ಯಗಳಿದ್ದರೆ ನಂತರ ಬಗೆಹರಿಸಿಕೊಳ್ಳ ಬಹುದು ಎಂದು ತಿಳಿಸಿದರು. ಗ್ರಾಮಸ್ಥರಿಂದ ಬಂದ ಅಭಿಪ್ರಾಯ ಆಲಿಸಿದ ತಹಸೀಲ್ದಾರ್ , ನಮ್ಮ ಇಲಾಖೆಯಲ್ಲಿಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಅಗತ್ಯವಿಲ್ಲ. ಕಚೇರಿಯಲ್ಲಿರುವಾಗ ನೇರವಾಗಿ ಬಂದು ತಮ್ಮ ಅಹವಾಲು ಸಲ್ಲಿಸಿ, ಇತ್ಯರ್ಥಪಡಿಸಿಕೊಳ್ಳಬಹುದು ಎಂದರು. ಗ್ರಾ.ಪಂ. ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಟ್ಟೆ ಮಂಜುನಾಥ್ , ಉಪ ತಹಸೀಲ್ದಾರ್ ಗೌತಮ್ , ವಿಎ ಮಂಜುನಾಥ್ ಮತ್ತಿತರರು ಹಾಜರಿದ್ದರು.