ಭದ್ರಾವತಿಯಲ್ಲಿಇಂದಿನಿಂದ ಹೆಲ್ಮೆಟ್ , ಸೀಟ್ ಬೆಲ್ಟ್ ಕಡ್ಡಾಯ

Contributed byn.babubhadravathi@gmail.com|Vijaya Karnataka

ಭದ್ರಾವತಿ ತಾಲೂಕಿನಲ್ಲಿ ಜ.1ರಿಂದ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಬೇಕು. ಸಂಚಾರ ನಿಯಮ ಉಲ್ಲಂಘಿಸಿದರೆ ಜಿಪಿಎಸ್ ಕ್ಯಾಮೆರಾ ಮೂಲಕ ಪ್ರಕರಣ ದಾಖಲಿಸಲಾಗುವುದು. ಅಪಘಾತ ತಡೆಯಲು ಈ ಕ್ರಮ ಜಾರಿಗೆ ತರಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು.

helmet and seat belt mandatory in bhadravati public notice

ವಿಕ ಸುದ್ದಿಲೋಕ ಭದ್ರಾವತಿ ತಾಲೂಕಿನಲ್ಲಿಜ.1ರಿಂದಲೇ ದ್ವಿಚಕ್ರ ವಾಹನ ಹಿಂಬದಿ ಸವಾರರು ಹೆಲ್ಮೆಟ್ ಮತ್ತು ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ. ತಾಲೂಕಿನಲ್ಲಿವಾಹನ ಸಂಚಾರ ದಟ್ಟಣೆಯಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ಅಪಘಾತಗಳನ್ನು ತಪ್ಪಿಸಲು ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸ್ ಉಪ ವಿಭಾಗವು ನಗರ ವೃತ್ತ ಮತ್ತು ಸಂಚಾರ ಪೊಲೀಸ್ ಠಾಣೆಯಿಂದ ಸಂಚಾರ ನಿಯಮವನ್ನು ರೂಪಿಸಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಡಿವೈಎಸ್ ಪಿ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಕಂಡು ಬಂದರೆ ಜಿಪಿಎಸ್ ಕ್ಯಾಮೆರಾ ಮೂಲಕ ಪೋಟೊ ಸೆರೆ ಹಿಡಿದು ಐಟಿಎಂಎಸ್ (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ ) ಮೂಲಕ ಐಎಂವಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಕಟಣೆಯಲ್ಲಿಎಚ್ಚರಿಸಿದ್ದಾರೆ.