ವಿಕ ಸುದ್ದಿಲೋಕ ಗೋಕಾಕ
ಪೋಷಕರು ತಮ್ಮ ಮಕ್ಕಳಿಗೆ ಶಿಸ್ತು ಹಾಗೂ ಸಂಸ್ಕಾರ ಕಲಿಸಿದರೆ, ಬದುಕಿನಲ್ಲಿಅವರು ಆದರ್ಶ ಪ್ರಜೆಗಳಾಗುತ್ತಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೊಡಿ ಜಿಲ್ಲಾಅಧ್ಯಕ್ಷ ಹಾಗೂ ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್ .ಎಂ. ಲೋಕನ್ನವರ ಹೇಳಿದರು.
ಮೂಡಲಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ಬೆಟಗೇರಿಯ ಕೃಷ್ಣಶರ್ಮ ಚೈತನ್ಯ ಶಾಲೆ ಹಾಗೂ ಚೈತನ್ಯಮಯಿ ಸತ್ತೇವ್ವ ದೇಯನ್ನವರ ಆಂಗ್ಲಮಾಧ್ಯಮ ಶಾಲೆಯ 19ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಹ ಶಿಕ್ಷಕ ಪ್ರಕಾಶ ಕುರಬೇಟ ಮಾತನಾಡಿ, ‘‘ಅಕ್ಷರದಾಸೋಹಿ ದಿ. ಸಿದ್ದಣ್ಣ ಹೊರಟ್ಟಿ 2006ರಲ್ಲಿಬೆಟಗೇರಿಯಲ್ಲಿಆರಂಭಿಸಿದ ಚೈತನ್ಯ ಶಾಲೆ ವಿದ್ಯಾರ್ಥಿಗಳು ಇಂದು ವೈದ್ಯಕೀಯ, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ’’, ಎಂದರು.
ಆಡಳಿತಾಧಿಕಾರಿ ರವಿ ಭರಮನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಸಂಸ್ಥೆಯ ಪರವಾಗಿ ಸತ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಿಕ್ಷಣ ಪ್ರೇಮಿ ಈರಪ್ಪ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಗುರುಮಾತೆ ಕಮಲಾಕ್ಷಿ ನಾಯ್ಕ, ಎಸ್ .ವೈ. ಪಾಟೀಲ, ರಮೇಶ ನಾಯ್ಕ, ಎಂ.ಬಿ. ನಾಯ್ಕರ, ಸುಧಾ ಪಾಟೀಲ, ಭಾರತಿ ಕಲಿವಾಳ, ಬಿ.ಎಂ. ಅಂಗಡಿ, ಎಸ್ .ಬಿ. ಪಾಟೀಲ, ಬಾಳೇಶ ಫಕೀರಪ್ಪನವರ, ಕಾವೇರಿ ಹೊಸಮಠ, ವಿದ್ಯಾಶ್ರೀ ಜನ್ಮಟ್ಟಿ, ಜನೇಟ್ ಪೌಲ್ , ನಬಿಸಾಬ ನದಾಫ್ , ಸುಮನ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಫೋಟೊ:
( 31 ಜಿಕೆಕೆ-3): ಬೆಟಗೇರಿಯ ಕೃಷ್ಣಶರ್ಮ ಚೈತನ್ಯ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿಎಸ್ .ಎಂ. ಲೋಕನ್ನವರ ಮಾತನಾಡಿದರು.

