ಚಿಕ್ಕಮುದುಗೆರೆ ಗ್ರಾಪಂಗೆ ನೂತನ ಅಧ್ಯಕ್ಷರ ಆಯ್ಕೆ

Contributed bypaddu.thippasandara@gmail.com|Vijaya Karnataka

ಮಾಗಡಿ ತಾಲೂಕಿನ ಚಿಕ್ಕಮುದುಗೆರೆ ಗ್ರಾಮ ಪಂಚಾಯಿತಿಗೆ ಎಸ್‌.ಕುಮಾರ್‌ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್‌.ಕುಮಾರ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷರಾಗಿ ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು. ಸರಕಾರಿ ಅನುದಾನ ಹಾಗೂ ಮನರೇಗಾ ಯೋಜನೆಗಳ ಮೂಲಕ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

s kumar elected as the new president of chikkamudugere grama panchayat a new chapter in development

ಮಾಗಡಿ ಗ್ರಾಮಾಂತರ: ತಾಲೂಕಿನ ಚಿಕ್ಕಮುದುಗೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಸ್ .ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಭವ್ಯ ವೆಂಕಟೇಶ್ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಎಸ್ .ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಸಾಮಾಜಿಕ ವಲಯ ಅರಣ್ಯಾಧಿಕಾರಿ ರವಿಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಎಸ್ .ಕುಮಾರ್ ಮಾತನಾಡಿ, ಮಾಗಡಿ ಶಾಸಕರ ಸೂಚನೆ ಮೇರೆಗೆ ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಪ್ರಮುಖ ಪಾತ್ರ ವಹಿಸಲಿದೆ. ಗ್ರಾಮ ಪಂಚಾಯಿತಿಗೆ ಸರಕಾರದಿಂದ ವಿಶೇಷವಾದ ಅನುದಾನ ಹಾಗೂ ಮನರೇಗಾ ಯೋಜನೆ ಇರುವುದರಿಂದ ಗ್ರಾಮಗಳನ್ನು ಸರ್ವತೋಮುಖ ಅಭಿವೃದ್ಧಿಪಡಿಸಬಹುದು, ಪ್ರತಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಗಳ ಸಮಸ್ಯೆಯ ಜತೆಗೆ ಸ್ಥಳದಲ್ಲೇ ಇ ಖಾತೆ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.

ಪಿಡಿಒ ಶಿವಕುಮಾರ್ , ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪಿಎಲ್ ಡಿ ಬ್ಯಾಂಕ್ ಅದ್ಯಕ್ಷ ರವೀಶ್ , ತಾಪಂ ಮಾಜಿ ಅಧ್ಯಕ್ಷ ಶಿವರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಗೋವಿಂದಯ್ಯ, ಗಂಗರಾಜು, ಪ್ರಮೀಳ ರಾಜಣ್ಣ, ರಂಗನಾಥ್ , ನಾಗೇಶ್ , ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಕೆ.ಆರ್ .ರವಿಕುಮಾರು, ಪ್ರೇಮಾವತಿ, ಗಂಗಾಧರಯ್ಯ, ಪಾರ್ವತಮ್ಮ, ನರಸಮ್ಮ, ಲಕ್ಷತ್ರ್ಮಮ್ಮ, ಭವ್ಯ, ತಿಪ್ಪಸಂದ್ರ ಹರೀಶ್ , ಸುರೇಶ್ ಇತರರು ಇದ್ದರು.

30ಎಸ್ ಎಲ್ ಆರ್ 2

ಚಿಕ್ಕಮುದುಗೆರೆ ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಎಸ್ .ಕುಮಾರ್ ಅವಿರೋಧ ಆಯ್ಕೆಯಾದರು.