ಸ್ಟ್ರಾಂಗ್ ರೂಮ್ ಗೆ ಇವಿಎಂ

Contributed byraviraj.galagali@timesgroup.com|Vijaya Karnataka

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಮತಯಂತ್ರಗಳನ್ನು ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಟ್ರಾಂಗ್‌ ರೂಂಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಗ್ರಾಮೀಣ ಭಾಗದ ಮತಯಂತ್ರಗಳ ಆಗಮನಕ್ಕೆ ಕೊಂಚ ವಿಳಂಬವಾದರೂ ಮಧ್ಯರಾತ್ರಿಯವರೆಗೆ ಸ್ವೀಕಾರ ಕಾರ್ಯ ನಡೆಯಿತು. ಈ ಬಾರಿ ಶೇ.68.74 ರಷ್ಟು ಮತದಾನವಾಗಿದೆ. ಇದು ಕಳೆದ ಬಾರಿಯ ಮತದಾನಕ್ಕಿಂತ ಕೊಂಚ ಹೆಚ್ಚಳವಾಗಿದೆ.

arrival of evms for bagalkote by election

ಸ್ಟ್ರಾಂಗ್ ರೂಮ್ ಗೆ ಇವಿಎಂ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತದಾನದ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತಯಂತ್ರಗಳು ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಟ್ರಾಂಗ್ ರೂಂ ತಲುಪಿದವು.

ಪ್ರಕ್ರಿಯೆ ಪೂರೈಸಿದ ಸಿಬ್ಬಂದಿ ನಿಗದಿತ ವಾಹನಗಳಲ್ಲಿಮತಯಂತ್ರಗಳನ್ನು ತಂದರು. ನಗರ ಪ್ರದೇಶದ ಯಂತ್ರಗಳು ಸಂಜೆಯವರೆಗೆ ಕೇಂದ್ರಕ್ಕೆ ಬಂದವು. ಗ್ರಾಮೀಣ ಪ್ರದೇಶದ ಮತ ಯಂತ್ರಗಳ ಆಗಮನ ಕೊಂಚ ವಿಳಂಬವಾಯಿತು. ಮಧ್ಯರಾತ್ರಿಯವರೆಗೂ ಮತಯಂತ್ರಗಳ ಸ್ವೀಕಾರ ಕಾರ್ಯ ನಡೆಯಿತು. 2023ರ ಚುನಾವಣೆಯಲ್ಲಿಶೇ.68.54 ರಷ್ಟು ಮತದಾನವಾಗಿತ್ತು. 68.74 ರಷ್ಟು ಮತದಾನ ಆಗುವ ಮೂಲಕ ಕಳೆದ ಬಾರಿಗಿಂತ ಈ ಬಾರಿ ಕೊಂಚ ಹೆಚ್ಚಳ ಕಂಡುಬಂದಿದೆ.