ವಿಕ ಸುದ್ದಿಲೋಕ ಕಲಬುರಗಿ ರಸಗೊಬ್ಬರ ಅಂಗಡಿಯಲ್ಲಿಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಪುತ್ರಿ ಕಾಮರ್ಸ್ ವಿಭಾಗದಲ್ಲಿರಾಜ್ಯಕ್ಕೆ ಮೂರನೇ ರಾರ ಯಂಕ್ ಪಡೆದು ಗಮನ ಸೆಳೆದಿದ್ದಾಳೆ. ಶ್ರೀ ದಾಮೋದರ್ ರಘೋಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರೇಮಾ ರಾಜಕುಮಾರ ರಾಜ್ಯಕ್ಕೆ ಮೂರನೇ ರಾರ ಯಂಕ್ ಪಡೆದಿದ್ದಾಳೆ. ತಂದೆ ರಾಜಕುಮಾರ ರಸಗೊಬ್ಬರ ಅಂಗಡಿಯಲ್ಲಿಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಪದ್ಮಾವತಿ ಗೃಹಿಣಿಯಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿಪ್ರೇಮಾ 600 ಅಂಕಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಗಿಟ್ಟಿಸಿದ್ದಾಳೆ. ಅರ್ಥಶಾಸ್ತ್ರ, ಬಿಸಿನೆಸ್ ಸ್ಟಡಿ, ಅಕೌಂಟೆನ್ಸಿ, ಸ್ಟ್ಯಾಟೆಸ್ಟಿಕ್ಸ್ ವಿಷಯಗಳಲ್ಲಿ100ಕ್ಕೆ 100 ಅಂಕ ಪಡೆದಿದ್ದಾಳೆ. ಜತೆಗೆ ಕನ್ನಡದಲ್ಲಿ99, ಇಂಗ್ಲಿಷ್ ನಲ್ಲಿ98 ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ಪಡೆದು ಕೀರ್ತಿ ತಂದಿದ್ದಾಳೆ. ಮೂಲತಃ ರಟಕಲ್ ಗ್ರಾಮದವರಾದ ಇವರು ಪ್ರಸ್ತುತ ನಗರದ ಕಾಕಡೆ ಚೌಕ್ ನಲ್ಲಿವಾಸಿಸುತ್ತಿದ್ದಾರೆ. ದಿನಕ್ಕೆ 4 ಗಂಟೆ ವಿದ್ಯಾಭ್ಯಾಸ: ಪ್ರತಿ ದಿನ ಕಾಲೇಜಿಗೆ ಹೋಗುವುದು ಅಷ್ಟೇ ಅಲ್ಲದೆ
ಮನೆಯಲ್ಲಿಯೂ ಕನಿಷ್ಠ 4 ಗಂಟೆ ವಿದ್ಯಾಭ್ಯಾಸ ಪ್ರೇಮಾ ಮಾಡುತ್ತಿದ್ದಳು. ನಿರಂತರ ಟೆಸ್ಟ್ ಬರೆದಿದ್ದು, ಪ್ರಶ್ನೆಪತ್ರಿಕೆಗಳು ಬಿಡಿಸಿರುವುದು, ಪ್ರಮುಖ ಪಠ್ಯದ ಚಾಪ್ಟರ್ ಗಳನ್ನು ವಿಭಾಗ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿರುವುದು ಅನುಕೂಲವಾಗಿದೆ. ಜತೆಗೆ ಕ್ಲಾಸ್ ನಲ್ಲಿಉಪನ್ಯಾಸಕರ ಪಾಠ, ಮನನ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ ಎಂದು ಪ್ರೇಮಾ ಹೇಳುತ್ತಾಳೆ. ಸಿಎಸ್ ಮಾಡುವ ಇಂಗಿತ: ಮುಂದೆ ಸಿಎಸ್ (ಕಂಪನಿ ಸೆಕ್ರೆಟರಿ ) ಮಾಡಬೇಕು ಎಂದುಕೊಂಡಿದ್ದೇನೆ ಎಂದು ತನ್ನ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.

