ವಿಕ ಸುದ್ದಿಲೋಕ ಕಲಬುರಗಿ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿಸಣ್ಣ ಹೋಟೆಲ್ ನಡೆಸುವವರ ಮಗಳು ರಾಜ್ಯಕ್ಕೆ ಪ್ರಥಮ ರಾರ ಯಂಕ್ ಪಡೆದು ಸಾಧನೆ ಮಾಡಿದ್ದಾಳೆ. ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಜಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿನಾಥ ದ್ವಿತೀಯ ಪಿಯುಸಿಯಲ್ಲಿ600 ಅಂಕಕ್ಕೆ 598 ಅಂಕಗಳನ್ನು ಪಡೆದು ಸಾಧನೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ100ಕ್ಕೆ 100 ಅಂಕ ಪಡೆದಿದ್ದಾಳೆ. ಇನ್ನು ಇಂಗ್ಲಿಷ್ ಮತ್ತು ಇತಿಹಾಸದಲ್ಲಿ99 ಅಂಕಗಳನ್ನು ಪಡೆದು ರಾಜ್ಯದ ಗಮನ ಸೆಳೆದಿದ್ದಾಳೆ. ನಗರದ ಗಾಜಿಪುರ ಬಡಾವಣೆಯ ನಿವಾಸಿಯಾಗಿರುವ ಇವರು, ತಂದೆ ಮಲ್ಲಿನಾಥ ರಿಂಗ್ ರಸ್ತೆಯ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ತಾಯಿ ಸವಿತಾ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಇಷ್ಟು ಅಂಕ ನಿರೀಕ್ಷೆ ಇರಲಿಲ್ಲ: ದ್ವಿತೀಯ ಪಿಯುಸಿಯಲ್ಲಿಉತ್ತಮ ಅಂಕ ಪಡೆದಿದ್ದಕ್ಕಾಗಿ ಸೃಷ್ಟಿ ಮಲ್ಲಿನಾಥ ಖುಷಿ ಹಂಚಿಕೊಂಡಳು, 598 ಅಂಕಗಳು ಬರುತ್ತದೆ ಎಂದು ನಿರೀಕ್ಷೆ ಇರಲಿಲ್ಲ. ಅದರಲ್ಲೂರಾಜ್ಯಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದಕ್ಕೆ ತುಂಬಾ ತುಂಬಾ ಖುಷಿಯಾಗಿದೆ. ತಂದೆ-ತಾಯಿ, ಉಪನ್ಯಾಸಕರ ಆಶೀರ್ವಾದ, ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸೃಷ್ಟಿ ಹೇಳುತ್ತಾಳೆ. ಕ್ಲಾಸ್ ಪಾಠ, ಹೆಚ್ಚು ಟೆಸ್ಟ್ ಅನುಕೂಲ: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾರ್ಡ್ ವರ್ಕ್ಗಿಂತ ಪ್ರತಿದಿನ ಕಾಲೇಜಿಗೆ ಹೋಗಿ ಉಪನ್ಯಾ ಸಕರು ಹೇಳುವ ಪಾಠ ಚನ್ನಾಗಿ ಕೇಳಿ, ಮನೆಗೆ ಬಂದು ಅದನ್ನೇ ರಿವಿಸನ್ ಮಾಡುತ್ತಿದ್ದೆ. ಜತೆಗೆ ಕಾಲೇಜಿನಲ್ಲಿಟೆಸ್ಟ್ ಗಳು, ಪ್ರಿಪರೇಟರಿ ಪರೀಕ್ಷೆ, ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಪರೀಕ್ಷೆಗೆ ತುಂಬಾ ಸಹಕಾರಿಯಾಗಿದೆ ಎಂದು ಸೃಷ್ಟಿ ಹೇಳುತ್ತಾಳೆ. ಯುಪಿಎಸ್ಸಿ ಪರೀಕ್ಷೆ ತಯಾರಿ: ಮುಂದೆ ಬಿಎ ಪದವಿ ಮಾಡಬೇಕೆಂದುಕೊಂಡಿದ್ದು, ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದುಕೊಂಡಿದ್ದೇನೆ ಎಂದು ಹೇಳುತ್ತಾಳೆ. ಪದವಿ ಓದುತ್ತಲೇ ಯುಪಿಎಸ್ಸಿಗೆ ತಯಾರಿ ನಡೆಸಬೇ ಕೆಂದುಕೊಂಡಿದ್ದೇನೆ ಎಂದು ಸೃಷ್ಟಿ ಹೇಳುತ್ತಾಳೆ.

