ದಿಲ್ ದಾರ್ ಶ್ರೇಯಸ್ ಮಂಜು
ಪಡ್ಡೆಹುಲಿ ಚಿತ್ರದ ಮೂಲಕ ಪ್ರೇಕ್ಷಕರ ಸೆಳೆದಿದ್ದ ಶ್ರೇಯಸ್ ಮಂಜು ಈಗ ‘ದಿಲ್ ದಾರ್ ’ ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡವು ಶ್ರೇಯಸ್ ಅವರ ಲುಕ್ ಟೀಸರ್ ಬಿಡುಗಡೆಗೊಳಿಸಿದೆ. ಈ ಟೀಸರ್ ನಾಯಕ ಶ್ರೇಯಸ್ ಮಂಜು ಅವರ ಖಡಕ್ ಲುಕ್ ಅನ್ನು ಸ್ಪಷ್ಟವಾಗಿ ಅನಾವರಣಗೊಳಿಸಿದೆ.
‘ಇಂದಿನ ಯುವ ಪೀಳಿಗೆಗೆ ನೇರವಾಗಿ ಕನೆಕ್ಟ್ ಆಗುವ ವಿಶಿಷ್ಟ ಕಥೆ ಈ ಚಿತ್ರದಲ್ಲಿದೆ’ ಎಂದಿದ್ದಾರೆ ನಿರ್ದೇಶಕ ಮಧು ಗೌಡ ಗಂಗೂರ್ .
ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ತಾರಾಗಣದಲ್ಲಿಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್ , ಚಿಲ್ಲರ್ ಮಂಜು ಮುಂತಾದವರಿದ್ದಾರೆ.‘ಕೆಜಿಎಫ್ ’ ಖ್ಯಾತಿಯ ಆಂಡ್ರೊ ಅವಿನಾಶ್ , ಭಜರಂಗಿ ಲೋಕಿ ಮತ್ತು ಅರ್ಪಿತ್ ಖಳನಟರಾಗಿ ಅಬ್ಬರಿಸಿದ್ದಾರೆ.

