ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ಗೋಧಿಪಿಧಿನಾಥ್ ನಿಧನ

Contributed bymanjunath.gowda@timesgroup.com|Vijaya Karnataka

ಭಾರತದ ಹಿರಿಯ ಟೆಸ್ಟ್‌ ಕ್ರಿಕೆಟಿಗ ಸಿ.ಡಿ.ಗೋಪಿನಾಥ್‌ ಅವರು 96ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರು ಭಾರತದ ಮೊದಲ ಟೆಸ್ಟ್‌ ಗೆಲುವಿನ ತಂಡದ ಸದಸ್ಯರಾಗಿದ್ದರು. ಗೋಪಿನಾಥ್‌ ಅವರು 8 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 1951ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು 1960ರಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ್ದರು. ಭಾರತೀಯ ಕ್ರಿಕೆಟ್‌ ಲೋಕಕ್ಕೆ ಇದು ದೊಡ್ಡ ನಷ್ಟವಾಗಿದೆ.

veteran indian cricketer godeepidhnath passes away a heartbreak for the cricketing world

ಹೊಸದಿಲ್ಲಿ: ಭಾರತದ ಮೊದಲ ಟೆಸ್ಟ್ ಗೆಲುವಿನ ತಂಡದ ಸದಸ್ಯ ಸಿ.ಡಿ.ಗೋಪಿನಾಥ್ (96) ಚೆನ್ನೈನಲ್ಲಿಗುರುವಾರ ನಿಧನರಾಗಿದ್ದಾರೆ. ಅವರು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಆಸ್ಪ್ರೇಲಿಯಾದ ನೀಲ್ ಹಾರ್ವೆ ನಂತರ ವಿಶ್ವದಾದ್ಯಂತ 2ನೇ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. 1930ರ ಮಾರ್ಚ್ 1ರಂದು ಜನಿಸಿದ ಗೋಪಿನಾಥ್ ಅವರು ಭಾರತ ಮತ್ತು ಮದ್ರಾಸ್ ಪರ ಕ್ರಮವಾಗಿ 8 ಟೆಸ್ಟ್ ಮತ್ತು 83 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 1951 ರಲ್ಲಿಬ್ರಬೋರ್ನ್ ಕ್ರೀಡಾಂಗಣದಲ್ಲಿಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದ ಅವರು, 1960ರಲ್ಲಿಈಡನ್ ಗಾರ್ಡನ್ಸ್ ನಲ್ಲಿಆಸ್ಪ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.