ದಿನಭವಿಷ್ಯ 11 ಏಪ್ರಿಲ್ 2026
ಶ್ರೀಪತಿ ಭಟ್ | ಬೆಂಗಳೂರು
---------------
(ವೃಷಭ, ಸಿಂಹ, ವೃಶ್ಚಿಕ ಈ ಮೂರು ರಾಶಿಯವರಿಗೆ ಪಂಚ ಗ್ರಹ ಯೋಗ)
------
ಮೇಷ : ತುಂಬ ವಿಶ್ವಾಸವಿರುವಂತಹ ವ್ಯಕ್ತಿಗಳು ಅಥವಾ ಸಂಬಂಧಿಗಳು ಮನೆಗೆ ಆಗಮಿಸುವಂಥ ಸಾಧ್ಯತೆಗಳಿವೆ. ಗಳಿಕೆಯ ಬಗ್ಗೆ ಚಿಂತಿಸಬೇಡಿ, ಕೆಲಸದಲ್ಲಿಅಸ್ತಿತ್ವವನ್ನು ಕಾಪಾಡಿಕೊಳ್ಳಿ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕಂದು)
------
ವೃಷಭ : ಕತ್ತಲೆಯ ಪ್ರಪಂಚದಲ್ಲಿರುವ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳನ್ನು ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಆದಾಯ ವೃದ್ಧಿಯಾಗುತ್ತದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)
------
ಮಿಥುನ : ಮಿತ್ರರಲ್ಲಿಸ್ನೇಹವು, ಬಂಧುಗಳಲ್ಲಿಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂ ಒಳಿತು ಉಂಟು ಮಾಡುತ್ತದೆ. ಕಚೇರಿಯ ಕೆಲಸಗಳನ್ನು ಪೂರೈಸುವ ಅಭ್ಯಾಸ ಮಾಡಿಕೊಳ್ಳಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಬೂದು)
----------
ಕರ್ಕ: ಪ್ರಮುಖ ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ಸಿಕ್ಕಿಕೊಂಡ ಸಮಯ ಬರಬಹುದು. ಚಾಣಾಕ್ಷತೆ ಮೆರೆಯುವಿರಿ. ಈಶ್ವರ ಆರಾಧನೆ ಶುಭ ತರಲಿದೆ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಳದಿ)
---------
ಸಿಂಹ : ಬಂಡವಾಳ ಹೂಡಿಕೆ, ಷೇರು ಖರೀದಿ ವಿಚಾರಗಳತ್ತ ಆಸಕ್ತಿ ಹೆಚ್ಚಲಿದೆ. ಕಾರ್ಖಾನೆಯಲ್ಲಿರಾತ್ರಿ ಪಾಳಿ ಕೆಲಸವನ್ನು ಬದಲಾಯಿಸಿಕೊಳ್ಳುವ ಪ್ರಯತ್ನವನ್ನು ನಡೆಸಬಹುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಿತ್ತಳೆ)
------------
ಕನ್ಯಾ : ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಉತ್ತಮ ಆದಾಯ ಬರುವುದು. ದೈಹಿಕವಾಗಿ ಬಲಾಢ್ಯರಾಗಿದ್ದರೂ ಮಾನಸಿಕವಾಗಿ ದೊಡ್ಡ ಹೊಡೆತ ಬೀಳುವ ಸಂಭವವಿದೆ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಖಾಕಿ)
-----------------
ತುಲಾ :ಎಲ್ಲರೀತಿಯ ದವಸ-ಧಾನ್ಯ ಮತ್ತು ಮಸಾಲ ಸಾಮಗ್ರಿಗಳ ರಫ್ತು ವ್ಯಾಪಾರಿಗಳು ಹಾಗೂ ಏಜೆಂಟರಿಗೆ ಅನುಕೂಲವಾಗುವುದು. ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕಪ್ಪು)
-----------------
ವೃಶ್ಚಿಕ : ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯವಹಾರಕ್ಕೆ ಸಹಾಯವಾಗುವಂತಹ ವಾಹನ ಖರೀದಿಯ ಬಗ್ಗೆ ಗಮನ ಹರಿಸಿ. ತಾಳಿದವನು ಬಾಳಿಯಾನು ಎಂಬಂತೆ ದುಡುಕದೇ ಸಮಾಧಾನದಿಂದ ವ್ಯವಹರಿಸಿ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕೆಂಪು)
--------
ಧನು :ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜೊತೆಗೆ ಉನ್ನತ ಜವಾಬ್ದಾರಿ ಸಿಗಲಿದೆ. ಸ್ಥಾನಮಾನ ಮತ್ತು ಇತರರು ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಗಮನದಲ್ಲಿಇಟ್ಟುಕೊಳ್ಳಿ.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಆಕಾಶನೀಲಿ)
--------------
ಮಕರ: ಕೈಗೊಳ್ಳಲಿರುವ ನಿರ್ಧಾರಗಳು ನಿಮ್ಮ ಮನೆಯವರಿಗೆ ಅಗತ್ಯವಾಗಿ ತಿಳಿದಿರಲಿ. ಸಾಲ ಕೊಡುವಾಗ ಸರಿಯಾಗಿ ಯೋಚಿಸಿ. ಕರಕುಶಲಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಹೊಸ ಅವಕಾಶಗಳು ಸಿಗಲಿವೆ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಕೇಸರಿ)
------------
ಕುಂಭ : ರಾಜಕಾರಣಿಗಳು ಉತ್ತಮ ಭಾಷಣ ಮಾಡಿ ಜನರ ಮನ ಗೆಲ್ಲುವ ಅವಕಾಶವಿದೆ. ಯಾವುದೇ ವಾದಗಳು ಕಾರ್ಯಕ್ಕೆ ಅಡ್ಡಿ ಮಾಡದಂತೆ ಗಮನಹರಿಸಿ.
(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಗಾಢ ನೇರಳೆ)
---------------
ಮೀನ : ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡು ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದಕ್ಕೆ ಅವಿಶ್ರಾಂತವಾಗಿ ದುಡಿಯುವಿರಿ. ಕುಟುಂಬದ ಸಹಕಾರ ಸಿಗುತ್ತದೆ.
(ಶುಭ ಸಂಖ್ಯೆ 9: , ಅದೃಷ್ಟ ಬಣ್ಣ : ಗುಲಾಬಿ)
----------------

