ವಿಕ ಸುದ್ದಿಲೋಕ ಉಡುಪಿ
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ವತಿಯಿಂದ ಸರಳ ವಿವಾಹ ಉತ್ತೇಜಿಸುವ ಮತ್ತು ಆಡಂಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿಆಯೋಜಿಸಿದ್ದ 17ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ11 ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ.
ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿಗುರುವಾರ ಸಂಜೆ ಗೋಧೂಳಿ ಲಗ್ನ ಮುಹೂರ್ತದಲ್ಲಿನಡೆದ ಕಾರ್ಯಕ್ರಮದಲ್ಲಿಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹಾಗೂ ಅವರ ಪತ್ನಿ ಶಾಲಿನಿ ಜಿ.ಶಂಕರ್ ಅವರು ನವ ಜೋಡಿಗಳಿಗೆ ಶುಭ ಹಾರೈಸಿ ತಾಳಿ ಸರವನ್ನು ಹಸ್ತಾಂತರಿಸಿದರು. ಅರ್ಚಕರ ಮಂತ್ರ, ವೇದ ಘೋಷದೊಂದಿಗೆ ಮಂಗಳವಾದ್ಯ ನುಡಿಸಿದ ಬಳಿಕ ನವ ಜೋಡಿಗಳು ಮಾಂಗಲ್ಯಧಾರಣೆ ಮಾಡಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಮಾತನಾಡಿ, ಮದುವೆ ಹೆಸರಿನಲ್ಲಿದುಂದುವೆಚ್ಚ ಮಾಡಿ ಸಾಲದ ಸುಳಿವಿನಲ್ಲಿಸಿಲುಕಿ ಸಂಕಷ್ಟದಲ್ಲಿಜೀವನ ನಡೆಸಬಾರದೆನ್ನುವ ಉದ್ದೇಶಕ್ಕೆ ಸಾಮೂಹಿಕ ಸರಳ ವಿವಾಹವನ್ನು ಹಮ್ಮಿಕೊಂಡಿದ್ದೇವೆ. ದೈವದೇವರ ಆಶೀರ್ವಾದದಿಂದ ಸಾಮೂಹಿಕ ವಿವಾಹವಾಗಿರುವ ಪ್ರತಿ ಜೋಡಿಯೂ ಉತ್ತಮ ಜೀವನ ನಡೆಸುತ್ತಿದ್ದಾರೆ. ಇದು ನಮಗೆ ಖುಷಿ ನೀಡುತ್ತದೆ ಎಂದರು.
ಹೊಂದಾಣಿಕೆಯೇ ಜೀವನ: ಸತಿಪತಿಗಳೆಂದರೆ ಮೇಲು ಕೀಳು ಎನ್ನುವುದಲ್ಲ. ಪ್ರತಿ ವಿಷಯಕ್ಕೂ ವಾದ ವಿವಾದ, ಜಗಳವಾಡುವುದಕ್ಕಿಂತ ಹೊಂದಾಣಿಕೆಯಲ್ಲಿಸಾಮರಸ್ಯದ ಜೀವನ ನಡೆಸುವುದೇ ದಾಂಪತ್ಯದ ಒಗ್ಗಟ್ಟಿನ ಗುಟ್ಟು. ಹೀಗಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ದಂಪತಿ ಹೊಂದಾಣಿಕೆಯಲ್ಲಿದ್ದು, ಒಳ್ಳೆಯ ರೀತಿಯಲ್ಲಿಸಂಸಾರವನ್ನು ಸಾಗಿಸಬೇಕು ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮಾತನಾಡಿ, ಕಳೆದ 17 ವರ್ಷಗಳಿಂದ 11 ಜೋಡಿ ಸಹಿತ ಈ ತನಕ 409 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೈವ ದೇವರ ಅನುಗ್ರಹದಿಂದ ಈ ಕೆಲಸ ಸಾಂಗವಾಗಿ ನಡೆಯುತ್ತಿದೆ ಎಂದರು.
ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, 11 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇದು ನಿಜಕ್ಕೂ ಶ್ಲಾಘನೀಯ. ದಾಂಪತ್ಯ ಜೀವನ ಸುಖಕರವಾಗರಲಿ. ಈ ಜೋಡಿ ಸಮಾಜಕ್ಕೆ ಮಾದರಿಯಾಗಲಿ ಎಂದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್ . ಕೊರವಡಿ, ಶ್ಯಾಮಿಲಿ ನವೀನ್ , ವಿನಯ… ಕರ್ಕೇರ, ಶನಾಯ, ಶಾನ್ವಿಕ, ಉದಯ ಹಟ್ಟಿಯಂಗಡಿ, ಸತೀಶ್ ಅಮೀನ್ ಬಾರ್ಕೂರು, ಶಿವರಾಮ ಕೆ.ಎಂ.ಕೋಟ, ಸತೀಶ್ ಎಂ.ನಾಯ್ಕ…, ಸಮಾಜದ ಗುರಿಕಾರರು, ಹೋಬಳಿ ಮುಖಂಡರು ಉಪಸ್ಥಿತರಿದ್ದರು.
09ಎಸ್ ಆರ್ ಬಿ ಎಂಯುಎಸ್

