ಮೃತ್ಯು ದೇವತೆ ಮೃತ್ಯು ದೇವತೆ

Contributed byshubha.hegde@timesgroup.com|Vijaya Karnataka

ಮೃತ್ಯು ದೇವತೆ ಚಿತ್ರವು ಮಹಿಳೆಯರ ನೋವು ಮತ್ತು ಆವೇಶದ ಕಥೆಯನ್ನು ಹೇಳುತ್ತದೆ. ಸಮಾಜದ ಕಿರುಕುಳಕ್ಕೆ ಒಳಗಾದಾಗ ಒಬ್ಬ ಮುಗ್ಧ ಹುಡುಗಿ ಹೇಗೆ ಮೃತ್ಯುದೇವತೆಯಾಗಿ ಬದಲಾಗುತ್ತಾಳೆ ಎಂಬುದನ್ನು ಚಿತ್ರ ತೋರಿಸುತ್ತದೆ. ನಾಯಕಿ ಆರತಿ ಪಾತ್ರದಲ್ಲಿ ಸಾರಿಕಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಉತ್ತಮ ಸಂದೇಶವಿದೆ. ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆದಿವೆ.

the story of death goddess adventures and events of girls

ಸಿಡಿದೆದ್ದ ಹೆಣ್ಣುಮಕ್ಕಳ ಕಥೆ ಮೃತ್ಯು ದೇವತೆ

ಹೆಣ್ಣು ಮಕ್ಕಳ ನೋವು, ಆವೇಶದ ಕಥೆ ‘ಮೃತ್ಯು ದೇವತೆ’. ನವೀನ್ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.

ಮಹಿಳಾ ಪ್ರಧಾನ ಚಿತ್ರ

ಸಮಾಜದ ಕಿರುಕುಳ ಅತಿರೇಕಕ್ಕೆ ಹೋದಾಗ, ಒಬ್ಬ ಮುಗ್ಧ ಹುಡುಗಿ ಹೇಗೆ ಮೃತ್ಯುದೇವತೆ ಅಥವಾ ಚಂಡಿ-ಚಾಮುಂಡಿ ಅವತಾರ ತಾಳುತ್ತಾಳೆ ಎಂಬುದೇ ಈ ಚಿತ್ರದ ಸಾರಾಂಶ. ‘ಹೆಣ್ಣುಮಕ್ಕಳು ಎಷ್ಟೇ ಬುದ್ಧಿವಂತರಾದರೂ, ಸುಶಿಕ್ಷಿತರಾದರೂ ಕೆಲವೊಮ್ಮೆ ಅರಿವಿಲ್ಲದೆಯೇ ಸಂಚಿನ ಬಲೆಗೆ ಬೀಳುತ್ತಾರೆ. ಅಂತಹ ಸನ್ನಿವೇಶಗಳನ್ನು ಈ ಚಿತ್ರದಲ್ಲಿಹೇಳುವ ಪ್ರಯತ್ನ ಮಾಡಿದ್ದೇನೆ’ಎಂದಿದ್ದಾರೆ ನವೀನ್ .

ಚಿತ್ರದ ನಾಯಕಿ ಸಾರಿಕಾ, ‘ಈ ಚಿತ್ರದಲ್ಲಿನನ್ನದು ಆರತಿ ಎಂಬ ಪಾತ್ರ. ಆಕೆ ಮುಗ್ಧ ಹುಡುಗಿ. ಅವಳನ್ನು ಕೆಣಕಿದಾಗ ಏನಾಗುತ್ತದೆ ಎಂದು ತೋರಿಸುವ ಪಾತ್ರ ನನ್ನದು. ಈ ಚಿತ್ರದಲ್ಲಿಮೊದಲ ಬಾರಿಗೆ ಫೈಟಿಂಗ್ ಮಾಡಿದ್ದೇನೆ. ಹಲವು ದಿನಗಳ ಕಾಲ ರಾತ್ರಿ ಕಾಡಿನಲ್ಲಿಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ.

ಹಿರಿಯ ನಟಿ ವಿನಯಾ ಪ್ರಸಾದ್ , ‘ಗುಡ್ಡ-ಬೆಟ್ಟ, ಹಿಮ ಹೀಗೆ ಚೆಂದದ ವಾತಾವರಣದಲ್ಲಿಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದಲ್ಲಿಉತ್ತಮ ಸಂದೇಶ ಇದೆ’ ಎಂದು ಹೇಳಿದ್ದಾರೆ.

ಚಿತ್ರದಲ್ಲಿಹಿಮಶ್ರೀ, ಡಯಾನಾ, ಮಾಹಿನ್ ಕುಬೇರ, ಸೂರ್ಯ, ಪವನ್ , ವರ್ಷಿತಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅನಿರು¨್ಧ… ಛಾಯಾಗ್ರಹಣ, ಶಿವಪ್ರಸಾದ್ ಸಂಗೀತವಿದ್ದು, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಹಾಗೂ ಚಿಟ್ಟ ಜಾಧವ್ ಅವರ ಸಾಹಸ ನಿರ್ದೇಶನ ಮತ್ತು ವಿಕ್ರಮಾದಿತ್ಯ ಸಂಕಲನವಿದೆ.