ಅಮ್ಮನ ಅಗಲಿಕೆ ನಡುವೆ ಪರೀಕ್ಷೆ ಬರೆದ ದಿಶಾ ರಾಜ್ಯಕ್ಕೆ ಟಾಪರ್

Contributed bymahesha.gopalakrishna@timesgroup.com|Vijaya Karnataka

ದಿಶಾ ಅವರು ತಾಯಿಯ ಅಗಲಿಕೆಯ ನೋವಿನ ನಡುವೆಯೂ ಪರೀಕ್ಷೆ ಬರೆದಿದ್ದಾರೆ. ಕಾಲೇಜಿನ ಶುಲ್ಕ ಪಾವತಿಸಿದ ಉಪನ್ಯಾಸಕರ ನಂಬಿಕೆಯನ್ನು ಉಳಿಸಿಕೊಳ್ಳುವ ಛಲ ಅವರಲ್ಲಿತ್ತು. ಈ ಎಲ್ಲ ಸಂದಿಗ್ಧತೆಯ ನಡುವೆಯೂ ದಿಶಾ ಅವರು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ. ಮುಂದೆ ಸಿಎ ಪರೀಕ್ಷೆ ಬರೆದು ಲೆಕ್ಕಪರಿಶೋಧಕಿಯಾಗುವ ಗುರಿ ಹೊಂದಿದ್ದಾರೆ.

disha secures 600 marks amid mothers loss state topper

ಮೂಡುಬಿದಿರೆ: ಪರೀಕ್ಷೆ ಬರೆಯುವಾಗಲೇ ಅಮ್ಮನ ಅಗಲಿಕೆಯ ನೋವು, ಕಾಲೇಜಿನ ಕೋಚಿಂಗ್ ಶುಲ್ಕ ಪಾವತಿಸಿದ ಉಪನ್ಯಾಸಕರು ತನ್ನ ಮೇಲೆ ಇಟ್ಟ ನಂಬಿಕೆ ಹುಸಿಗೊಳಿಸಬಾರದೆಂಬ ತೊಳಲಾಟ, ಬದುಕಿನಲ್ಲಿಏನನ್ನಾದರೂ ಸಾಧಿಸಬೇಕೆಂಬ ಛಲ, ಈ ಎಲ್ಲಸಂದಿಗ್ಧತೆಯಲ್ಲೇ ಪರೀಕ್ಷೆ ಬರೆದ ದಿಶಾ ವಾಣಿಜ್ಯ ವಿಭಾಗದಲ್ಲಿ600ಕ್ಕೆ 600 ಅಂಕ ಗಳಿಸುವ ಮೂಲಕ ರಾಜ್ಯಕ್ಕೇ ಟಾಪರ್ ಆಗಿದ್ದಾರೆ.

ಎಂತಹ ಒತ್ತಡ, ಆತಂಕ ಎದುರಾದರೂ ವಿಚಲಿತಲಾಗದೇ ಏಕಾಗ್ರತೆಯಿಂದ ಓದುತ್ತಿದ್ದೆ. ಓದಿಗೆ ನಿರ್ದಿಷ್ಟ ಸಮಯ ಗೊತ್ತುಪಡಿಸದೆ ಸಿಕ್ಕಿದ ಸಮಯವನ್ನು ಸಮರ್ಪಕವಾಗಿ ಬಳಸುತ್ತಿದ್ದೆ. ನನ್ನ ಈ ಸಾಧನೆಯ ಹಿಂದೆ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಬಹಳಷ್ಟಿದೆ. ಮುಂದೆ ಸಿಎ ಪರೀಕ್ಷೆ ಬರೆದು ಲೆಕ್ಕಪರಿಶೋಧಕಿಯಾಗುವ ಗುರಿ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ ದಿಶಾ.