ವಿಕ ಸುದ್ದಿಲೋಕ ಮಂಗಳೂರು
ವಿಶ್ವ ಹಿಂದೂ ಪರಿಷತ್ ಮಂಗಳೂರು ಉಳ್ಳಾಲ ಪ್ರಖಂಡದಿಂದ ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಏ.12ರಂದು ಬೆಳಗ್ಗೆ 6ರಿಂದ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಪ್ರಚಾರ ಪ್ರಸಾರ ಸಹಪ್ರಮುಖ್ ಪ್ರದೀಪ್ ಸರಿಪಲ್ಲಹೇಳಿದರು.
ನಗರದ ಕದ್ರಿ ವಿಶ್ವಶ್ರೀಯಲ್ಲಿಗುರುವಾರ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ದೃಢಸಂಕಲ್ಪವನ್ನು ಹೊಂದಿದೆ. ಅದೇ ರೀತಿ ಸಾಮೂಹಿಕ ಪ್ರಾರ್ಥನೆ, ಪಾದಯಾತ್ರೆಯ ಮೂಲಕ ಜನರಲ್ಲಿಆಸ್ತಿಕತೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಪ್ರಮುಖ್ ನವೀನ್ ಕೋಣಾಜೆ, ಸಂತೋಷ್ ಕದ್ರಿ, ಜಿಲ್ಲಾಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾಸಂಪರ್ಕ ಪ್ರಮುಖ್ ದೀಪಕ್ ಮರೋಳಿ, ಪ್ರವೀಣ್ ಕುತ್ತಾರ್ ಉಪಸ್ಥಿತರಿದ್ದರು.
ಖರ್ಗೆ ವಿರುದ್ಧ ಕ್ರಮಕ್ಕೆ ಒತ್ತಾಯ (ಬಾಕ್ಸ್ )
ಆರೆಸ್ಸೆಸ್ , ಬಿಜೆಪಿ ವಿಷಕಾರಿ ಹಾವುಗಳಂತೆ, ನಮಾಜ್ ಅರ್ಧಕ್ಕೆ ನಿಲ್ಲಿಸಿ ಅವರನ್ನು ಹೊಡೆದು ಕೊಲ್ಲಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡನೀಯವಾದುದು. ಇದು ಗುಂಪು ಹತ್ಯೆಗೆ ಪ್ರಚೋದನೆ ನೀಡಿದಂತೆ ಮಾತ್ರವಲ್ಲದೆ ಅಲ್ಪಸಂಖ್ಯಾತರಲ್ಲಿಭಯವನ್ನು ಹುಟ್ಟಿಸುತ್ತಿದೆ. ಇದು ಹಿಂದೂಗಳಿಗೆ ಮಾಡಿದ ಅವಮಾನವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಹಿಂಪ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

