ರೋಟರಿ ಮುಳಬಾಗಲು ಸೆಂಟ್ರಲ್ ವತಿಯಿಂದ ಹಸುಗಳ ವಿತರಣೆ

Contributed byprk.k73@gmail.com|Vijaya Karnataka

ಮುಳಬಾಗಲು ನಗರದಲ್ಲಿ ರೋಟರಿ ಸೆಂಟ್ರಲ್‌ ವತಿಯಿಂದ 13 ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಸುಧಾರಣೆಗೆ ಇದು ಉತ್ತಮ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರಿಗೆ ಹಸುಗಳನ್ನು ನೀಡಲಾಗುವುದು ಎಂದು ತಿಳಿಸಿದರು. ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಿದೆ.

rotary mulbagal central free cattle distribution to more women

ವಿಕ ಸುದ್ದಿಲೋಕ ಮುಳಬಾಗಲು

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ರೋಟರಿ ಮುಳಬಾಗಲು ಸೆಂಟ್ರಲ್ ವತಿಯಿಂದ 13 ಮಂದಿಗೆ ಹಸುಗಳನ್ನು ವಿತರಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾಗೌರ್ನರ್ ಶ್ರೀಧರ್ ತಿಳಿಸಿದರು.

ನಗರದ ರೋಟರಿ ಭವನದಲ್ಲಿರೋಟರಿ ಮುಳಬಾಗಲ್ ಸೆಂಟ್ರಲ್ ವತಿಯಿಂದ 13 ಮಂದಿ ಮಹಿಳೆಯರಿಗೆ ಹಸುಗಳನ್ನು ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿಹೆಚ್ಚಿನ ಮಹಿಳೆಯರು ಜೀವನ ನಡೆಸುವುದು ತುಂಬ ತೊಂದರೆಯಾಗುತ್ತಿದ್ದು ಅವರಿಗೆ ಹಸುಗಳನ್ನು ನೀಡಿದರೆ ಇದರಿಂದ ಹಾಲು ಸಂಗ್ರಹಿಸಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಡರಾಗಬಹುದು ಎಂದು ತಿಳಿಸಿದರು.

ರೋಟರಿ ಮುಳಬಾಗಳ್ ಸೆಂಟ್ರಲ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ, ತಾಲೂಕಿನಲ್ಲಿ60 ಮಂದಿ ಮಹಿಳೆಯರಿಗೆ ಮೊದಲ ಹಂತದಲ್ಲಿಉಚಿತವಾಗಿ ಹಸುಗಳನ್ನು ನೀಡಲಾಗುವುದು. ಇಂದು ಸಾಂಕೇತಿಕವಾಗಿ 13 ಮಂದಿಗೆ ಹಸುಗಳನ್ನು ವಿತರಣೆ ಮಾಡಿದ್ದು ಮುಂದಿನ ದಿನಗಳಲ್ಲಿಇನ್ನೂ ಹೆಚ್ಚಿನ ಮಹಿಳೆಯರನ್ನು ಗುರುತಿಸಿ ಹಸುಗಳನ್ನು ನೀಡಲಾಗುವುದು. ರೋಟರಿ ಸಂಸ್ಥೆಯು ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಿದೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ರೋಟರಿ ಮುಳಬಾಗಲ್ ಸೆಂಟ್ರಲ್ ಮಾಜಿ ಅಧ್ಯಕ್ಷ ಪಿ.ಎಸ್ .ರಮೇಶ್ , ನಗವಾರ ಸತ್ಯಣ್ಣ, ಸರಿತಾ ಬಾಲಾಜಿ, ಜಿಲ್ಲಾಕಾರ್ಯದರ್ಶಿ ಎನ್ .ರವೀಂದ್ರನಾಥ್ , ರೋಟರಿ ಬೆಂಗಳೂರು ಮಿಡ್ ಟೌನ್ ಅಧ್ಯಕ್ಷ ಶ್ರೀನಿವಾಸಲು, ರೋಟರಿ ನಂದಿನಿ ಕ್ಲಬ್ ಅಧ್ಯಕ್ಷ ಬೇವಹಳ್ಳಿ ಶಂಕರ್ , ರೋಟೇರಿಯನ್ ಗಳಾದ ರೇಖಾ, ಕಾರ್ ಶಂಕರ್ , ಜಯಪ್ಪ, ಭಾಸ್ಕರ್ ರೆಡ್ಡಿ, ಚಂದ್ರಶೇಖರ್ , ಆರ್ .ಕೆ.ಸುದರ್ಶನ್ ಬಾಬು, ಇದ್ದರು.

10ಎಂಬಿಎಲ್ ಫೋಟೊ 1 ಮುಳಬಾಗಲು ನಗರದ ರೋಟರಿ ಭವನದಲ್ಲಿರೋಟರಿ ಮುಳಬಾಗಲು ಸೆಂಟ್ರಲ್ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ವಿತರಿಸಲಾಯಿತು.