ವಿಕ ಸುದ್ದಿಲೋಕ ಶ್ರೀನಿವಾಸಪುರ
ಮನುಷ್ಯನಾಗಿ ಹುಟ್ಟುವುದೇ ಹೆಮ್ಮೆ, ಆದುದರಿಂದ ಸುಸಂಸ್ಕೃತರಾಗಿ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಬ್ರಾಹ್ಮೀ ಮುಹೂರ್ತದಲ್ಲಿಎದ್ದು ಯೋಗ ಮಾಡುವುದರಿಂದ ನಮ್ಮ ಸಂಕಲ್ಪಗಳು ಈಡೇರಿತ್ತವೆ ಎಂದು ಬೈರವೇಶ್ವರ ನಿರ್ದೇಶಕ ಎ.ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ಯೋಗ ಮಂದಿರದಲ್ಲಿಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ ಮಕ್ಕಳ ವಸಂತ ಶಿಬಿರ ಉದ್ಘಾಟನೆ ಮತ್ತು 97ನೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಶಿಬಿರದ ಭಾರತ ಮಾತಾ ಪೂಜಾ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲ್ಲಸಾಧನೆಗಳಿಗೆ ಶರೀರವೇ ಮೂಲ ಎನ್ನುವುದನ್ನು ಅರಿತು ಕ್ಷೇತ್ರ, ಕ್ಷೇತ್ರಜ್ಞ ಮೂಲಕ ಶರೀರ ರಕ್ಷಿಸಿಕೊಳ್ಳಬೇಕು. ನಾವು ಸಂಪಾದನೆ ಮಾಡಿರುವ ಆಸ್ತಿ, ಸಂಪತ್ತು ಆರೋಗ್ಯ ರಕ್ಷಣೆಗೆ ಬರುವುದಿಲ್ಲ. ಶಾರೀರಿಕವಾಗಿ ಸಾಧನೆ ಮಾಡಿ ಸನಾತನ ಧರ್ಮ ಸಂಸ್ಕಾರ, ಋುಷಿ ಪರಂಪರೆ ಮೈಗೂಡಿಸಿಕೊಳ್ಳಿ. ನಮ್ಮ ದೇಹದಲ್ಲಿರುವ ಆತ್ಮ, ಮನಸ್ಸನ್ನು ಬುದ್ಧಿಯೊಂದಿಗೆ, ಬುದ್ಧಿ ಮನಸ್ಸಿನೊಂದಿಗೆ ಸೇರಿಸುವುದರಿಂದ ಇಂದ್ರಿಯಗಳು ಯೋಗ್ಯವಾಗಿರುತ್ತವೆ. ಸ್ವಾಮಿ ವಿವೇಕಾನಂದರಂತೆ ಜನರನ್ನು ಸಂಘಟನೆ ಮಾಡಿ ಸತ್ಕಾರ್ಯಗಳು ಮಾಡುವ ಕೆಲಸ ನಮ್ಮಿಂದ ಆಗಬೇಕೆಂದು ತಿಳಿಸಿದರು.
ಬೆಳಗ್ಗೆ ಎದ್ದು ದೇವರನ್ನು ಸ್ಮರಿಸುವವರಿಗೆ ಯಾರ ಉಪದೇಶವೂ ಬೇಕಾಗಿಲ್ಲ. ಪರಿಸರವೇ ನಮಗೆ ಎಲ್ಲವನ್ನೂ ಕಲಿಸುತ್ತದೆ. ತಂತ್ರಜ್ಞಾನ ಬೆಳೆದ ಸಮಾಜದಲ್ಲಿಶೈಕ್ಷಣಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ, ಆದಿದೈವಿಕವಾಗಿ ಸ್ಮರಿಸುವುದರಿಂದಲೇ ನಾವು ಸರಸ್ವತಿ ಪುತ್ರರಾಗುತ್ತೇವೆ. ತಾಮಸಿಕ ಆಹಾರ ಸೇವನೆಯಿಂದ ಬುದ್ಧಿ ಮಂದವಾಗುತ್ತದೆ. ಸಾತ್ವಿಕ ಆಹಾರ ಸೇವಿಸಿದರೆ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಂತೆ ದೈವ ಭಕ್ತರಾಗಿ ಯಾರ ನೆರವೂ ಇಲ್ಲದೆ ಜೀವನದ ವಿಧಾನಗಳು ಕಂಡುಕೊಂಡು ಬದುಕುತ್ತೇವೆ. ಯೋಗಾಭ್ಯಾಸ ಮಾಡುವ ಯೊಗಿಗಳಿಗೆ ಇದು ಸಿದ್ಧಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಯೋಗ ಶಿಕ್ಷಣ ಪ್ರಮುಖ ಚೌಡಪ್ಪ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುವಲ್ಲಿಜಾಗೃತರಾಗಿರಬೇಕು. ಯೋಗ ಎಂದರೆ ದೇಹ ದಂಡಿಸುವುದಲ್ಲ. ನಿತ್ಯ ಜೀವನದಲ್ಲಿನಡೆಯುವ ನಡವಳಿಕೆಗಳೇ ಯೋಗ. ಸಮಾಜದಿಂದ ಪಡೆದ ಯೋಗ ಶಿಕ್ಷಣಕ್ಕೆ ಸಮಾಜ ನಿಧಿ ಅರ್ಪಿಸುವ ಮೂಲಕ ಸಾಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಸಹ ಶಿಕ್ಷಕಿ ಲಕ್ಷಿತ್ರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿನಾವು ಆನಂದವಾಗಿರಲು ದೈಹಿಕ, ಮಾನಸಿಕ ನೆಮ್ಮದಿಗೆ ಯೋಗಾಭ್ಯಾಸ ಕಲಿತು ಶರೀರದಲ್ಲಿನ ನಿಶ್ಶಕ್ತಿ ದೂರ ಮಾಡಿ. ಯೋಗ ಮಾಡಿದರೆ ನಾನಾ ಕಾಯಿಲೆಗಳು ನಮ್ಮಿಂದ ದೂರವಾಗಿ ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ನಮ್ಮ ಪುರಾತನ ಜೀವನ ವಿಧಾನ ನಮ್ಮ ಜೀವನಕ್ಕೆ ಪೂರಕವಾಗಿದೆ. ಪೂರ್ವಜರ ಬಾಲ್ಯ ಜೀವನ ಉತ್ತಮವಾಗಿತ್ತು. ನೀವೋಬ್ಬರು ಕಲಿತರೆ ಸಾಲದು ಇಡೀ ಕುಟುಂಬ ಯೋಗ ಕಲಿತರೆ ಆರೋಗ್ಯವಾಗಿರುತ್ತದೆ ಎಂದರು.
ವೆಂಕಟರತ್ನಮ್ಮ ಪ್ರಾರ್ಥಿಸಿ, ಉಮಾದೇವಿ ಸ್ವಾಗತಿಸಿ, ಬಾಬು ಎಚ್ .ವಿ. ವಂದಿಸಿ, ವರಲಕ್ಷತ್ರ್ಮಮ್ಮ ನಿರೂಪಿಸಿದರು.
9 ಶ್ರೀನಿವಾಸಪುರ 6: ಯೋಗ ಮಂದಿರದಲ್ಲಿಏರ್ಪಡಿಸಿದ್ದ ಭಾರತ ಮಾತಾ ಪೂಜೆ ವೇಳೆ ಸಮಾಜ ನಿಧಿ ಅರ್ಪಿಸುವ ಕಾರ್ಯಕ್ರಮಕ್ಕೆ ಎ.ವೆಂಕಟರೆಡ್ಡಿ ಚಾಲನೆ ನೀಡಿದರು.
9 ಶ್ರೀನಿವಾಸಪುರ 7: ಯೋಗ ಮಂದಿರದಲ್ಲಿಏರ್ಪಡಿಸಿದ್ದ ಭಾರತ ಮಾತಾ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಕ್ಷಕಿ ಲಕ್ಷಿತ್ರ್ಮ ಮಾತನಾಡಿದರು.

