(ಪ್ರಮುಖ) ಟೈಮ್ಸ್ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

Contributed bytsdayananda@gmail.com|Vijaya Karnataka

ತಿಪಟೂರಿನ ಟೈಮ್ಸ್‌ ಪಿಯು ಕಾಲೇಜು ಶೇ.100 ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದ ರಶ್ಮಿ ಕೆ.ಎಸ್‌. 600ಕ್ಕೆ 595 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 4ನೇ ರಾರ‍ಯಂಕ್‌ ಗಳಿಸಿದ್ದಾರೆ. ಈ ಸಾಧನೆಗಾಗಿ ರಶ್ಮಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ. ಕಾಲೇಜಿನ ಶೇ.100 ಫಲಿತಾಂಶಕ್ಕೆ ಕಾರಣರಾದ ಬೋಧಕ ವರ್ಗಕ್ಕೂ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

times pu college achieves 100 result district topper rashmis achievement

ರಶ್ಮಿ ಜಿಲ್ಲೆಗೆÜ ಟಾಪರ್ ; ರಾಜ್ಯಕ್ಕೆ 4ನೇ ರಾರ ಯಂಕ್ : ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಸಂಸ್ಥೆ

ವಿಕ ಸುದ್ದಿಲೋಕ ತಿಪಟೂರು

ಗ್ರಾಮೀಣ ಭಾಗದಲ್ಲಿಓದಿ ಜಿಲ್ಲೆಮತ್ತು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ಸಾಧನೆ ಮಾಡಿ ವಿಜ್ಞಾನದಲ್ಲಿ600ಕ್ಕೆ 595 ಅಂಕಗಳೊಂದಿಗೆ ಜಿಲ್ಲೆಗೆ ಟಾಪರ್ ಕಾಲೇಜಿನ ರಶ್ಮಿ ಕೆ.ಎಸ್ . ರಾಜ್ಯಕ್ಕೆ 4ನೇ ರಾರ ಯಂಕ್ ಪಡೆದಿದ್ದಾರೆ. ಅವರ ಈ ಸಾಧನೆಗೆ ಒಂದು ಲಕ್ಷ ರೂ. ಬಹುಮಾನವಾಗಿ ನೀಡುತ್ತಿರುವುದಾಗಿ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಘೋಷಿಸಿದರು.

ನಗರದ ಟೈಮ್ಸ್ ಕಾಲೇಜಿನ ಸಭಾಂಗಣದಲ್ಲಿಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯನ್ನು ಹಣದಲ್ಲಿಅಳೆಯಲು ಸಾಧ್ಯವಿಲ್ಲವಾದರೂ ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಅಲ್ಲದೆ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ನಗದು ಬಹುಮಾನ ನೀಡುತ್ತಿದ್ದೇನೆ. ಜತೆಗೆ ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಕಾರಣರಾದ ಬೋಧಕ ವರ್ಗಕ್ಕೂ ಒಂದು ಲಕ್ಷ ರೂ. ಬಹುಮಾನ ನೀಡುತ್ತಿರುವುದಾಗಿ ತಿಳಿಸಿದರು.

ನಮ್ಮ ಕಾಲೇಜಿನಿಂದ ಒಟ್ಟು 100 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 66 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 34 ಪ್ರಥಮ ಶ್ರೇಣಿಯಲ್ಲಿತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಶೇ.100 ಫಲಿತಾಂಶ ತಂದುಕೊಟ್ಟಿದ್ದಾರೆ. ಅದರಲ್ಲಿಯೂ ಎಲ್ಲನೂರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ಅತ್ಯುತ್ತಮ ಶ್ರೇಣಿ ಪಡೆದುಕೊಂಡಿರುವುದು ನಮ್ಮ ಕಾಲೇಜಿನ ಅತ್ಯುತ್ತಮ ಬೋಧನೆಗೆ ಸಾಕ್ಷಿಯಾಗಿದೆ. ನಮ್ಮಲ್ಲಿಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಇದ್ದಾರೆ. ಅದರಲ್ಲೂಕನ್ನಡ ಮಾಧ್ಯಮದಿಂದ ಬಂದವರೂ ವಿಜ್ಞಾನದಲ್ಲಿಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ತಂದುಕೊಡುವ ಮೂಲಕ ಸಂಸ್ಥೆಗೆ, ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಪಠ್ಯದ ಜತೆಗೆ ಸಿಇಟಿ, ನೀಟ್ , ಜೆಇಇ ಕೋಚಿಂಗ್ ನೀಡಲಾಗುತ್ತಿದ್ದು, ರಾಜ್ಯದ ನುರಿತ ಪರಿಣಿತ ಉಪನ್ಯಾಸಕರು, ಸುಸಜ್ಜಿತ ಪ್ರಯೋಗಾಲಯ ಸೇರಿ ಉತ್ತಮ ಸೌಲಭ್ಯಗಳನ್ನು ಸಹ ನಮ್ಮ ಕಾಲೇಜು ಹೊಂದಿದೆ. ಅದೇ ರೀತಿ ಕಳೆದ ವರ್ಷಗಳಲ್ಲಿಶಾಲಾ ಶಿಕ್ಷಣ ಇಲಾಖೆಯಿಂದ ತಿಪಟೂರಿನ ಉತ್ತಮ ಪದವಿ ಪೂರ್ವ ಕಾಲೇಜು ಎಂಬ ಪ್ರಶಸ್ತಿ ನೀಡಿದ್ದು, ಶೇ.100ರಷ್ಟು ಫಲಿತಾಂಶ ಗಳಿಸಿದ್ದಕ್ಕೆ ಸರಕಾರದಿಂದ ಪ್ರಶಸ್ತಿ ಪಡೆದ ಪ್ರತಿಷ್ಠಿತ ಕಾಲೇಜು ಆಗಿದೆ ಎಂದು ಹೇಳಿದರು.

ಕೋಟ್ 1:

ನಮ್ಮ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಕೆ.ಎಸ್ . 595 ಅಂಕ ಪಡೆದು ರಾಜ್ಯಕ್ಕೆ 4ನೇ ರಾರ ಯಂಕ್ ಹಾಗೂ ಜೆಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕಾಲೇಜಿನ ಉಪನ್ಯಾಸಕರ ಶ್ರಮ, ಬೋಧಕೇತರ ವರ್ಗ ಹಾಗೂ ಪೋಷಕರ ಸಹಕಾರವೂ ಇದಕ್ಕೆ ಮುಖ್ಯ ಕಾರಣವಾಗಿದ್ದು, ಸಾಧನೆ ಮಾಡಿರುವ ಎಲ್ಲಾವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸುತ್ತೇನೆ.

- ಗಂಗಾಧರ್ ಬಿ.ಕೆ., ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ (ಪೊಟೋ1)

ಕೋಟ್ 2:

ನನ್ನ ಈ ಸಾಧನೆಗೆ ನಮ್ಮ ಕಾಲೇಜಿನ ಕಟ್ಟುನಿಟ್ಟಿನ ಬೋಧನೆ ಹಾಗೂ ಅವರು ಕೊಡುತ್ತಿದ್ದ ಟೆಸ್ಟ್ ಸೀರೀಸ್ , 5 ಪ್ರಿಪರೇಟರಿ ಪರೀಕ್ಷೆಗಳು ಸಹಾಯಕವಾದವು. ಪೋಷಕರೂ ಜತೆಯಲ್ಲಿದ್ದು ಪ್ರೋತ್ಸಾಹಿಸಿ ನನ್ನ ಓದಿಗೆ ನೆರವಾದರು. ಮುಂದೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಷಯದಲ್ಲಿಎಂಜಿನಿಯರಿಂಗ್ ಮಾಡಬೇಕೆಂದುಕೊಂಡಿದ್ದೇನೆ.

- ರಶ್ಮಿ ಕೆ.ಎಸ್ ., ಜಿಲ್ಲಾಟಾಪರ್ . (ಪೊಟೋ2)

10ತಿಪಟೂರು1: ಜಿಲ್ಲಾಟಾಪರ್ ರಶ್ಮಿ ಕೆ.ಎಸ್ . ಹಾಗೂ ಕಾಲೇಜಿನ ಇತರೆ ಸಾಧಕರಿಗೆ ತಿಪಟೂರಿನ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್ ಬಿ.ಕೆ. ಸನ್ಮಾನಿಸಿದರು.

ಪೊಟೋ1: ಗಂಗಾಧರ್ ಬಿ.ಕೆ.(ಕೋಟ್ 1ಗಾಗಿ)

ಪೊಟೋ2: ರಶ್ಮಿ ಕೆ.ಎಸ್ .,(ಕೋಟ್ 2ಗಾಗಿ)