ಪ್ರೆಸಿಡೆನ್ಸಿಯ ಇಬ್ಬರು ರಾಜ್ಯಕ್ಕೆ 7ನೇ ರಾರ ಯಂಕ್

Contributed bydevarajuvksira@gmail.com|Vijaya Karnataka

ಶಿರಾ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. 599 ವಿದ್ಯಾರ್ಥಿಗಳಲ್ಲಿ 495 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಗುರು ಸುಬ್ರಹ್ಮಣ್ಯ ಮತ್ತು ನಿತ್ಯಶ್ರೀ ಆರ್. 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರಾರ‍ಯಂಕ್ ಗಳಿಸಿದ್ದಾರೆ. ಯಶಸ್‌ ಗೌಡ ಕೆ.ಆರ್. 8ನೇ ರಾರ‍ಯಂಕ್‌ ಪಡೆದಿದ್ದಾರೆ. ಹಲವು ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳಿಸಿ ಗಮನ ಸೆಳೆದಿದ್ದಾರೆ.

shira presidency college achieves 7th rank in the state

ವಿಜ್ಞಾನ ವಿಭಾಗದಲ್ಲಿಕಾಲೇಜಿಗೆ ಶೇ.99.83 ಫಲಿತಾಂಶ

ವಿಕ ಸುದ್ದಿಲೋಕ ಶಿರಾ

2025-26ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಪದವಿ ಪೂರ್ವ ಶಿಕ್ಷಣ) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ಶಿರಾ ಪ್ರೆಸಿಡೆನ್ಸಿ ಪದವಿ ಪೂರ್ವ (ವಿಜ್ಞಾನ) ಕಾಲೇಜಿನ 599 ವಿದ್ಯಾರ್ಥಿಗಳಲ್ಲಿಶೇಕಡಾ 99.83 ಫಲಿತಾಂಶದೊಂದಿಗೆ ವಿಜ್ಞಾನ ವಿಭಾಗದಲ್ಲಿ495 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಯೊಂದಿಗೆ (ಡಿಸ್ಟಿಂಕ್ಷನ್ ), 101 ವಿದ್ಯಾರ್ಥಿಗಳು ಪ್ರಥಮ ಮತ್ತು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಅದ್ವಿತೀಯ ಸಾಧನೆ ಮೆರೆದಿದ್ದಾರೆ.

ವಿದ್ಯಾರ್ಥಿಗಳಾದ ಗುರು ಸುಬ್ರಹ್ಮಣ್ಯ 592 ಅಂಕ (ಶೇ.98.67) ಹಾಗೂ ನಿತ್ಯಶ್ರೀ ಆರ್ . 592 (ಶೇ.98.67) ಅಂಕ ಪಡೆದು ರಾಜ್ಯಕ್ಕೆ 7ನೇ ರಾರ ಯಂಕ್ ಬಂದಿದ್ದಾರೆ. ಉಳಿದಂತೆ, ಯಶಸ್ ಗೌಡ ಕೆ.ಆರ್ . 591 (ಶೇ.98.5) ಅಂಕ ಪಡೆದು ರಾಜ್ಯಕ್ಕೆ 8ನೇ ರಾರ ಯಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಶಿರಾ ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಷಯವಾರು ಕನ್ನಡದಲ್ಲಿ22, ರಸಾಯನಶಾಸ್ತ್ರದಲ್ಲಿ1, ಗಣಿತದಲ್ಲಿ105, ಜೀವಶಾಸ್ತ್ರದಲ್ಲಿ12, ಭೌತಶಾಸ್ತ್ರದಲ್ಲಿ22, ಗಣಕ ವಿಜ್ಞಾನದಲ್ಲಿ3 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿದ್ದಾರೆ. ಅಲ್ಲದೆ, ಕನ್ನಡದಲ್ಲಿ52, ಇಂಗ್ಲಿಷ್ ನಲ್ಲಿ3, ಭೌತಶಾಸ್ತ್ರದಲ್ಲಿ27, ರಸಾಯನಶಾಸ್ತ್ರದಲ್ಲಿ5, ಗಣಿತದಲ್ಲಿ90, ಜೀವಶಾಸ್ತ್ರದಲ್ಲಿ22, ಗಣಕ ವಿಜ್ಞಾನದಲ್ಲಿ5 ವಿದ್ಯಾರ್ಥಿಗಳು 100ಕ್ಕೆ 99 ಅಂಕ ಪಡೆದಿರುತ್ತಾರೆ.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಚಿದಾನಂದ್ ಎಂ. ಗೌಡ ಅವರು ಅಭಿನಂದಿಸಿ ಮುಂಬರುವ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಇನ್ನುಳಿದಿರುವ ದಿನಗಳಲ್ಲಿಗಮನವಿಟ್ಟು ಅಭ್ಯಾಸ ಮಾಡಿ ಅತ್ಯುತ್ತಮ ಫಲಿತಾಂಶ ಪಡೆಯಲೆಂದು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿಕಾಲೇಜಿನ ಪ್ರಾಂಶುಪಾಲರಾದ ರಘು ಎ. ಆರ್ , ಉಪನ್ಯಾಸಕ ವರ್ಗ ಹಾಗೂ ಆಡಳಿತ ಮಂಡಳಿಯವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

10ಶಿರಾ3: ಗುರು ಸುಬ್ರಹ್ಮಣ್ಯ (ಶೇ. 98.67)

10ಶಿರಾ4: ನಿತ್ಯಶ್ರೀ ಆರ್ . (ಶೇ. 98.67)

10ಶಿರಾ5: ಯಶಸ್ ಗೌಡ ಕೆ.ಆರ್ . (ಶೇ. 98.5)