ಮುರಿಯೇಲು ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ

Contributed byprashantha.n17@gmail.com|Vijaya Karnataka

ನೆಲ್ಯಾಡಿಗೋಳಿತ್ತೊಟ್ಟು-ಪುರ-ಮುರಿಯೇಲು ಮೂಲಕ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮುರಿಯೇಲು ಎಂಬಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿತು. ಐತ್ತೂರಿನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೋಡು ದಾಟುತ್ತಿದ್ದ ಫೋಟೋವನ್ನು ಲೋಕೋಪಯೋಗಿ ಸಚಿವರಿಗೆ ತೋರಿಸಿ ಪರಿಹಾರ ಕೇಳಲಾಗಿತ್ತು. ತಕ್ಷಣ ಸ್ಪಂದಿಸಿದ ಸಚಿವರು 1 ಕೋಟಿ ರೂ. ಅನುದಾನ ಮಂಜೂರು ಮಾಡಿದರು. ಈ ಅನುದಾನದಲ್ಲಿ ಮುರಿಯೇಲು, ಬಡ್ಡಮೆ, ಐತ್ತೂರಿನಲ್ಲಿ ಕಾಮಗಾರಿಗಳು ನಡೆಯಲಿವೆ. ಮಳೆಗಾಲ ಆರಂಭಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳ್ಳಲಿದೆ.

25 lakh rupees for muriyelu bridge construction

25 ಲಕ್ಷ ರೂ. ವೆಚ್ಚದಲ್ಲಿನಿರ್ಮಾಣ

ವಿಕ ಸುದ್ದಿಲೋಕ ನೆಲ್ಯಾಡಿ

ಗೋಳಿತ್ತೊಟ್ಟು-ಪುರ-ಮುರಿಯೇಲು ಮೂಲಕ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮುರಿಯೇಲು ಎಂಬಲ್ಲಿಸುಮಾರು 25 ಲಕ್ಷ ರೂ. ವೆಚ್ಚದಲ್ಲಿಸೇತುವೆ ನಿರ್ಮಾಣಕ್ಕೆ ಶನಿವಾರ ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ. ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಐತ್ತೂರಿನಲ್ಲಿಶಾಲಾ ವಿದ್ಯಾರ್ಥಿಯೊಬ್ಬ ಬಿದಿರಿನ ಕಾಲು ಸಂಕದಲ್ಲಿತೋಡು ದಾಟುತ್ತಿದ್ದ ಫೊಟೋ ತೆಗೆದು ಅದನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಅಧಿಕಾರಿಗಳಿಗೆ ಹೇಳಿ ಒಂದೇ ವಾರದಲ್ಲಿ1 ಕೋಟಿ ರೂ.ಅನುದಾನ ಮಂಜೂರುಗೊಳಿಸಿದ್ದಾರೆ ಎಂದರು.

ಈ ಅನುದಾನದಲ್ಲಿಗೋಳಿತ್ತೊಟ್ಟು ಗ್ರಾಮದ ಮುರಿಯೇಲು, ಕೊಯಿಲ ಗ್ರಾಮದ ಬಡ್ಡಮೆ, ಐತ್ತೂರಿನಲ್ಲಿ2 ಕಾಮಗಾರಿಗಳು ನಡೆಯಲಿವೆ. ಒಂದು ವಾರದೊಳಗೆ ಈ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಳೆಗಾಲ ಆರಂಭಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಮತ್ತೆ 10 ಕೋಟಿ ರೂ.ಅನುದಾನ ನೀಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಉಪ ಚುನಾವಣೆಯಿಂದ ಅನುದಾನ ಬಿಡುಗಡೆ ವಿಳಂಬ ಆಗಿದೆ ಎಂದು ಕೃಷ್ಣಪ್ಪ ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರ ಮನವಿ ಮೇರೆಗೆ ಮುರಿಯೇಲಿನಲ್ಲಿಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರು ತಕ್ಷಣ ಕಾಮಗಾರಿ ಆರಂಭಿಸಿ ಮಳೆಗಾಲ ಆರಂಭಕ್ಕೆ ಮೊದಲು ಕಾಮಗಾರಿ ಮುಗಿಸಿ ಕೊಡಬೇಕು. ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಬೇಕೆಂದು ಕೃಷ್ಣಪ್ಪ ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಇಲ್ಲಿಕಾಲು ಸಂಕ ಆದರೂ 3 ಮೀ.ಅಗಲದಲ್ಲಿನಿರ್ಮಾಣ ಆಗಲಿದೆ. ಇದರಿಂದ ಸಣ್ಣ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಗುತ್ತಿಗೆದಾರರು 2 ತಿಂಗಳಲ್ಲಿಈ ಕಾಮಗಾರಿ ಮುಗಿಸಿ ಈ ಭಾಗದ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಅಬ್ಬಾಸ್ ಕೋಚಕಟ್ಟೆ ಮಾತನಾಡಿದರು. ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ಕೆ.ಪಿ., ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಕಾಜರೊಕ್ಕು, ಬಿನುಚಾಕೋ, ಗುತ್ತಿಗೆದಾರ ಕಾರ್ತಿಕ್ , ಸ್ಥಳೀಯರಾದ ನಾಗಪ್ಪ ಗೌಡ ಪೆರ್ಲ, ದೇವಕಿ ಪೆರ್ಲ, ರವಿಪ್ರಕಾಶ್ ಪೆರ್ಲ, ದಿನೇಶ್ ಪೆರ್ಲ, ಆರತಿ ಪೆರ್ಲ, ಸ್ಮಿತಾ ಪೆರ್ಲ, ಅದಿತಿ ಪೆರ್ಲ, ಜಶ್ಮಿಕಾ ಪೆರ್ಲ, ಜಯಕರ ಕಲ್ಲಂಡ, ಸತ್ಯವತಿ ಕಲ್ಲಂಡ, ದೇವಾಂಶಿ ಕಲ್ಲಂಡ, ಹೊನ್ನಪ್ಪ ಕಲ್ಲಂಡ, ಕುಸುಮಾವತಿ ಕಲ್ಲಂಡ, ಮಿಥುನ ಮುರಿಯೇಲು ಮತ್ತಿತರರು ಉಪಸ್ಥಿತರಿದ್ದರು. ಗೋಳಿತ್ತೊಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ ಸ್ವಾಗತಿಸಿದರು. ಮಾಜಿ ಸದಸ್ಯ ಪುರುಷೋತ್ತಮ ಗುರುಂಪು ವಂದಿಸಿದರು.

ಫೋಟೋ :13ಕೆಎನ್ ಕೃಷ್ಣಪ್ಪ

(ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ. ಗುದ್ದಲಿ ಪೂಜೆ ನೆರವೇರಿಸಿದರು.)