ಲೀಡ್ -1

Contributed bymanjunathrd59@gmail.com|Vijaya Karnataka

ಹಾವೇರಿ ಜಿಲ್ಲೆಯಲ್ಲಿ ತೀವ್ರ ಬೇಸಿಗೆಯಿಂದ ಜನರು ಕಂಗಾಲಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಪದೇ ಪದೇ ವಿದ್ಯುತ್‌ ಕಡಿತದಿಂದ ಜನತೆ ಪರದಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಸಿಕ್ಕರೂ, ನಿರಂತರ ಕಡಿತದಿಂದ ಅದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ನಿರ್ವಹಣೆ ನೆಪದಲ್ಲಿ ಗಂಟೆಗಟ್ಟಲೆ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ವಾಣಿಜ್ಯ ವಹಿವಾಟುಗಳ ಮೇಲೂ ಪರಿಣಾಮ ಬೀರಿದೆ.

summer heat and power cuts woes of haveri

ಕರೆಂಟ್ ಕಾಟ ನೀರಿಗೂ ಪರದಾಟ(ಹೆ)

ಬೇಸಿಗೆಯಲ್ಲಿಜಿಲ್ಲೆಜನರಿಗೆ ಡಬಲ್ ಶಾಕ್ | ವಾಣಿಜ್ಯ ವಹಿವಾಟು ಮೇಲೂ ಪರಿಣಾಮ

ಗುರುದತ್ತ ಭಟ್ ಹಾವೇರಿ

ಬಿರು ಬೇಸಿಗೆಯಿಂದ ಬೆಂಡಾದ ಜನತೆಗೆ ಒಂದೆಡೆ ನೀರಿನ ಚಿಂತೆ ಎದುರಾದರೆ, ಮತ್ತೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತತ್ತರಿಸುವಂತಾಗಿದೆ. ನಿರ್ವಹಣೆ ಸೇರಿ ನಾನಾ ನೆಪವೊಡ್ಡಿ ಪದೇ ಪದೆ ವಿದ್ಯುತ್ ಕಡಿತದಿಂದ ಜಿಲ್ಲೆಯ ಜನತೆ ರೋಸಿಹೋಗಿದ್ದಾರೆ.

ಜಿಲ್ಲೆಯಲ್ಲಿಈಗಾಗಲೇ ಗೃಹಜ್ಯೋತಿ ಯೋಜನೆಯಡಿ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಪ್ರತಿಯೊಂದು ಮನೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನ್ನು ಪೂರೈಸಲಾಗುತ್ತಿದೆ. ಆದರೆ, ಸರಕಾರ ಉಚಿತ ವಿದ್ಯುತ್ ಗೆ ಅವಕಾಶ ನೀಡಿದರೂ, ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗುತ್ತಿರುವುದರಿಂದ ಸಮರ್ಪಕ ಬಳಕೆಗೆ ಅವಕಾಶವಿಲ್ಲದಂತಾಗಿದೆ. ಅದರಲ್ಲೂ, ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನತೆ ತತ್ತರಿಸಿದ್ದಾರೆ. ಮತ್ತೊಂದೆಡೆ ಬೇಸಿಗೆಯಲ್ಲಿಎದುರಾಗುವ ಕುಡಿವ ನೀರಿನ ಸಮಸ್ಯೆ ತೀವ್ರಗೊಳ್ಳಲು ವಿದ್ಯುತ್ ಕಡಿತವೂ ಕಾರಣವಾಗಿದೆ.

ಲೋಡ್ ಶೆಡ್ಡಿಂಗ್ ಇಲ್ಲನಿರ್ವಹಣೆ ಮಾತ್ರ

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವುದನ್ನು ಕಂಡ ಜನತೆ ಲೋಡ್ ಶೆಡ್ಡಿಂಗ್ ಶುರು ಎನ್ನುತ್ತಿದ್ದಾರೆ. ಆದರೆ, ಇದನ್ನು ಒಪ್ಪದ ಹೆಸ್ಕಾಂ ಅಧಿಕಾರಿಗಳು ನಿರ್ವಾಹಣೆ ಮಾತ್ರ ಎನ್ನುತ್ತಿದ್ದಾರೆ. ನಿರ್ವಹಣೆ ನೆಪದಲ್ಲಿಜಿಲ್ಲೆಯಲ್ಲಿಪ್ರತಿ ನಿತ್ಯ ಆಗ 15 ನಿಮಿಷ , ಈಗ 15 ಎಂದು ದಿನಕ್ಕೆ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ದಿನಕ್ಕೆ 2-3 ಸಲ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಜನತೆ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ. ಬಿರು ಬಿಸಿಲಿನ ತಾಪ ಶಮನಗೊಳಿಸಲು ಫ್ಯಾನ್ , ಕೂಲರ್ ಹಾಕಿಕೊಳ್ಳಲೂ ತೊಡಕಾಗಿದೆ. ಮನೆಯಲ್ಲಿರುವ ವೃದ್ಧರು, ಮಕ್ಕಳು ಬಿಸಿಲಿನ ತಾಪದಿಂದ ಬಳಲುವಂತಾಗಿದೆ. ರಾತ್ರಿ ಸಮಯದಲ್ಲಿವಿದ್ಯುತ್ ಕೈ ಕೊಟ್ಟರೆ ಮಕ್ಕಳ ಗೋಳಾಟ ಒಂದೆಡೆಯಾದರೆ ಮತ್ತೊಂದಡೆ ಸೊಳ್ಳೆ ಕಾಟ ಸಹ ಹೆಚ್ಚಾಗುತ್ತದೆ. ವಿದ್ಯುತ್ ಇಲ್ಲದ ವೇಳೆ ರಾತ್ರಿಯೆಲ್ಲಾಜಾಗರಣೆ ಎನ್ನುವಂತ ಪರಿಸ್ಥಿತಿ ಎನ್ನುತ್ತಾರೆ ಗ್ರಾಹಕರು.

ಸಿಲಿಂಡರ್ ಇಲ್ಲ, ವಿದ್ಯುತ್ ಒಲೆಯೂ ಇಲ್ಲ

ಮಧ್ಯಪ್ರಾಚ್ಯದಲ್ಲಿಯುದ್ಧ ಆರಂಭವಾದ ಹಿನ್ನೆಲೆ ಈಗಾಗಲೇ ಸಿಲಿಂಡರ್ ಸರಬರಾಜಿನಲ್ಲಿವ್ಯತ್ಯವಾಗಿದೆ. ಗೃಹ, ವಾಣಿಜ್ಯ ಬಳಕೆಗೆ ಸಿಲಿಂಡರ್ ಸಿಗದ ಹಲವರು ವಿದ್ಯುತ್ ಒಲೆ, ಸ್ಟೌಗಳ ಮೊರೆ ಹೋಗಿದ್ದಾರೆ. ಆದರೆ, ಪ್ರತಿನಿತ್ಯ ವಿದ್ಯುತ್ ಕಡಿತವಾಗುತ್ತಿರುವುದರಿಂದ ಇದರ ಬಿಸಿ ಗೃಹ, ವಾಣಿಜ್ಯ ಬಳಕೆಯ ಮೇಲೂ ಪರಿಣಾಮ ಬೀರುವಂತಾಗಿದೆ. ಪದೇ ಪದೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗುತ್ತಿರುವುದರಿಂದ ಇತ್ತ ಸಿಲಿಂಡರ್ ಇಲ್ಲದೆ, ಅತ್ತ ವಿದ್ಯುತ್ ಒಲೆ ಇಲ್ಲದೆ ಪರದಾಡುವಂತಾಗಿದೆ.

ವಿದ್ಯುತ್ ಕಡಿತದಿಂದ ಪರದಾಟ

ಜಿಲ್ಲೆಯಲ್ಲಿನಿರಂತರವಾಗಿ ವಿದ್ಯುತ್ ಕಡಿತದಿಂದ ಗೃಹ ಬಳಕೆಯ ಗ್ರಾಹಕರು ಮಾತ್ರವಲ್ಲದೆ ಇತರೆ ವಲಯಕ್ಕೂ ಪರಿಣಾಮ ಬೀರುವಂತಾಗಿದೆ. ವಾಣಿಜ್ಯ ಮಳಿಗೆ, ವ್ಯಾಪಾರ ವಹಿವಾಟು ಮಾಡುವವರಂತೂ ಪರ್ಯಾಯವಾಗಿ ಯುಪಿಎಸ್ , ಇನ್ ವರ್ಟರ್ ಮೊರೆ ಹೋಗುವಂತಾಗಿದೆ. ಇದಲ್ಲದೆ, ಬೇಸಿಗೆಯಲ್ಲಿಕುಡಿವ ನೀರಿನ ಸಮಸ್ಯೆಯನ್ನು ನೀಗಿಸುವ ಆರ್ ಒ ಪ್ಲಾಂಟ್ , ನೀರಿನ ಟ್ಯಾಂಕ್ ತುಂಬಿಸಿಕೊಳ್ಳಲು ಅವಶ್ಯವಿರುವ ಮೋಟಾರ್ ಸೇರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಅತ್ಯವಶ್ಯವಾಗಿದೆ. ಆದರೆ, ವಿದ್ಯುತ್ ಸ್ಥಗಿತದಿಂದ ಇದಕ್ಕೂ ತೊಂದರೆಯಾಗುವಂತಾಗಿದೆ.

ಕೋಟ್

ಬೇಸಿಗೆ ಹಿನ್ನೆಲೆ ಜಿಲ್ಲೆಯಲ್ಲಿವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಯಾವುದೇ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ವಿದ್ಯುತ್ ಪರಿವರ್ತಕಗಳು ಮತ್ತು ಲೈನ್ ಗಳ ದುರಸ್ತಿ, ನಿರ್ವಹಣೆ, ಮತ್ತು ಲೈನ್ ಗೆ ತಗುಲುವ ಮರದ ಕೊಂಬೆಗಳ ಕಡಿಯುವ ಕಾರ್ಯದ ಹಿನ್ನೆಲೆ ಸರಬರಾಜಿನಲ್ಲಿವ್ಯತ್ಯಯವಾಗುತ್ತಿದ್ದು, ಸರಿಪಡಿಸಲು ಕ್ರಮಕೈಗೊಂಡಿದೆ. ಇದರ ಹೊರತಾಗಿ ನಗರ ಸೇರಿ ಗ್ರಾಮೀಣ ಭಾಗದಲ್ಲಿಕೆಲ ನಿರ್ವಹಣೆ ಕಾಮಗಾರಿ ಹೊರತಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

- ಸಿ.ಬಿ. ಹೊಸಮನಿ, ಇಇ, ಹೆಸ್ಕಾಂ, ಹಾವೇರಿ.

ಕೋಟ್ :

ವಿದ್ಯುತ್ ಯಾವಾಗ ಕಡಿತವಾಗುತ್ತದೆ ಎಂಬ ಮುನ್ಸೂಚನೆಯನ್ನೂ ಕೊಡುತ್ತಿಲ್ಲ, ಬೆಳಗ್ಗೆ, ಮಧ್ಯಾಹ್ನ, ಸಂಜೆ ತಲಾ 15-20 ನಿಮಿಷದಂತೆ ದಿನಕ್ಕೆ ಗಂಟೆಗಳವರೆಗೆ ವಿದ್ಯುತ್ ಕಡಿತ ಮಾಡುತ್ತಿರುವುದು ಸಮಸ್ಯೆ ತಂದೊಡ್ಡಿದೆ.

- ಅಶೋಕ ಎಚ್ . ಕುಮಾರ, ವಿದ್ಯುತ್ ಗ್ರಾಹಕ , ಹಾವೇರಿ.