ಬಿಳಿಯೂರು ಕುಲಗದ್ದೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

Contributed bysudhakara.kannadamoole@timesofindia.com|Vijaya Karnataka

ಬಿಳಿಯೂರು ಗ್ರಾಮದ ಕುಲಗದ್ದೆಯಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಈ ಸಮಾರಂಭದಲ್ಲಿ ಗಣ್ಯರು ಆಶೀರ್ವಚನ ನೀಡಿದರು. ಸಂಪತ್ತನ್ನು ದಾನಧರ್ಮಕ್ಕೆ ಬಳಸಿದರೆ ಪುಣ್ಯ ಲಭಿಸುತ್ತದೆ. ಮನಃಶುದ್ಧಿ, ಭಾವಶುದ್ಧಿ, ಕರ್ಮ ಶುದ್ಧಿಯಿಂದ ದೇವರನ್ನು ಕಾಣಬಹುದು ಎಂದು ಸ್ವಾಮೀಜಿಗಳು ನುಡಿದರು. ಈ ದೇವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿದೆ.

the shilanyas ceremony for the reconstruction of sri umamaheshwara temple in biliyur kulagadde was successfully held

ವಿಕ ಸುದ್ದಿಲೋಕ ಉಪ್ಪಿನಂಗಡಿ

ಬಿಳಿಯೂರು ಗ್ರಾಮದ ಕುಲಗದ್ದೆ ಎಂಬಲ್ಲಿಪುನರ್ ನಿರ್ಮಾಣಗೊಳ್ಳಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ವರ್ಮುಡಿ ವೇ.ಮೂ. ಗೋಪಾಲಕೃಷ್ಣ ಭಟ್ ತಂತ್ರಿಯವರ ಪೌರೋಹಿತ್ಯದಲ್ಲಿಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಂಪತ್ತನ್ನು ದಾನಧರ್ಮದ ಮೂಲಕ ಪರಿವರ್ತನೆ ಮಾಡಿದರೆ ಪುಣ್ಯ ಸಂಚಯವಾಗುತ್ತದೆ. ಭಕ್ತಿಯ ಮೂಲಕ ಮುಕ್ತಿಯೆಡೆಗೆ ಸಾಗಲು ಶಿವ ನಾಮ ಸಂಕೀರ್ತನೆಯಿಂದ ಸಾಧ್ಯವಿದೆ ಎಂದರು.

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮನಃಶುದ್ಧಿ, ಭಾವಶುದ್ಧಿ, ಕರ್ಮ ಶುದ್ಧಿಯೊಂದಿಗೆ ಧನಾತ್ಮಕತೆಯಿಂದ ಚಿಂತನೆ ಮಾಡಿದಾಗ ದೇವರನ್ನು ಕಾಣಲು ಸಾಧ್ಯವಿದೆ. ಇಲ್ಲಿಇತಿಹಾಸ ನಿರ್ಮಿಸುವ ದೇಗುಲ ಎದ್ದು ನಿಲ್ಲಲಿದೆ ಎಂದರು.

ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿ, ಕುಲಗದ್ದೆಯ ಈ ಸನ್ನಿಧಾನ ಭಕ್ತರ ಇಷ್ಟಾರ್ಥ ಈಡೇರಿಸುವ ಕ್ಷೇತ್ರವಾಗಲಿದೆ ಎಂದರು.

ಮುಂಬೈ ಉದ್ಯಮಿ ಬಾಲಕೃಷ್ಣ ರೈ ತಿಪ್ಪಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಳಿಯೂರುಗುತ್ತು ಧನ್ಯಕುಮಾರ್ ರೈ ಸಭಾಧ್ಯಕ್ಷತೆ ವಹಿಸಿದ್ದರು. ದೈವಜ್ಞರಾದ ಮನೋಜ್ ಬಲ್ಯಾಯ, ಸಾರ್ಥಕ್ ಬಲ್ಯಾಯ, ಪುರೋಹಿತರಾದ ವರ್ಮುಡಿ ಗೋಪಾಲಕೃಷ್ಣ ತಂತ್ರಿ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಜಾಗ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ , ಪುತ್ತಿಲ ಪರಿವಾರ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿಯ ವೈದ್ಯ ಡಾ. ರಾಜರಾಮ್ ಬಿ.ಕೆ. ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಉಮಾಮಹೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಐ.ಕೆ. ರಮಾನಾಥ ಕುಲಾಲ್ , ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ನೀರಾಳ, ಗೌರವಾಧ್ಯಕ್ಷರಾದ ಡಿ.ಚಂದಪ್ಪ ಮೂಲ್ಯ, ಮಾಧವ ಕುಲಾಲ್ ಉಪಸ್ಥಿತರಿದ್ದರು.

ಪೆರ್ನೆ ಸಿ.ಎ. ಬ್ಯಾಂಕ್ ನ ತನಿಯಪ್ಪ ಪೂಜಾರಿ ಸ್ವಾಗತಿಸಿದರು. ಕೃಷ್ಣಪ್ಪ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಗಣೇಶ್ ರಾಜ್ ವಂದಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

ಫೋಟೋ: 13ಪಿ-ಕುಲಗದ್ದೆ

ಕುಲಗದ್ದೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರುತ್ಥಾನಕ್ಕೆ ಸೋಮವಾರ ಶಿಲಾನ್ಯಾಸ ನಡೆಯಿತು.

ಫೋಟೋ: 13ಪಿ-ಕುಲಗದ್ದೆ1

ಕುಲಗದ್ದೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.