13 ಎನ್ ಆರ್ ಡಿ-8
ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನ
ವಿಕ ಸುದ್ದಿಲೋಕ ನರಗುಂದ
ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಪಿಯುಸಿ ಪರೀಕ್ಷೆಯಲ್ಲಿಹೆಚ್ಚಿನ ಅಂಕ ಪಡೆದ ಹುಣಶೀಕಟ್ಟಿಯ ಗ್ರಾಮದ ವಿದ್ಯಾರ್ಥಿನಿ ರಾಜೇಶ್ವರಿ ರುದ್ರಪ್ಪ ಲದ್ದಿಯವರನ್ನು ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಎಂ.ಪಿ.ಕುಲಕರ್ಣಿ ಹಾಗೂ ಅವರ ಕುಟುಂಬಸ್ಥರು, ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿನಿ ಮನೆಗೆ ತೆರಳಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ನರಗುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಕಲಾ ವಿಭಾಗದಲ್ಲಿರಾಜೇಶ್ವರಿ ರುದ್ರಪ್ಪ ಲದ್ದಿ ಶೇ.98 ಅಂಕ ಪಡೆದು ಕಲಾ ವಿಭಾಗದಲ್ಲಿಗದಗ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿ. ಗ್ರಾಮೀಣ ಪ್ರದೇಶದಿಂದ ಬಂದಿರುವ ಈ ವಿದ್ಯಾರ್ಥಿನಿ ಕಡು ಬಡತನದಲ್ಲಿಬೆಳೆದವಳು. ತಂದೆ ತಾಯಿ ಅನಕ್ಷರಸ್ಥರಾಗಿದ್ದಾರೆ. ಆದರೆ ವಿದ್ಯಾರ್ಥಿನಿ ರಾಜೇಶ್ವರಿ ಬಡತನವನ್ನು ಕಡೆಗಣಿಸಿ ಸಾಧನೆ ಸಂಕಲ್ಪದೊಂದಿಗೆ ಅಧ್ಯಯನದಲ್ಲಿಶ್ರೇಷ್ಠ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಪಿ. ಕುಲಕರ್ಣಿ ತಿಳಿಸಿದರು.
ರಾಜೇಶ್ವರಿ ಹಾಗೂ ಆತನ ತಾಯಿ ಗಿರಿಜವ್ವ ತಂದೆ ರುದ್ರಪ್ಪ, ಅಜ್ಜಿ ನೀಲಮ್ಮ, ಅಕ್ಕ ವಾತ್ಸಲ್ಯ ಅವರನ್ನು ಉಪನ್ಯಾಸಕ ಡಾ.ಎಂ.ಪಿ. ಕುಲಕರ್ಣಿ ಹಾಗೂ ಅವರ ಕುಟುಂಬಸ್ಥರು ಸನ್ಮಾನಿಸಿದರು.
ಹುಣಸೀಕಟ್ಟಿಯ ಗ್ರಾಮಸ್ಥರಾದ ಹನುಮಂತಪ್ಪ ಲದ್ದಿ, ದೇವಕ್ಕ ಲದ್ದಿ, ಪ್ರಭುಗೌಡ್ರ ದ್ಯಾವನಗೌಡ್ರ, ಶೇಖರಗೌಡ ಹುಚ್ಚನಗೌಡ್ರ, ಕೋಜಾಗಿರಿ ಕುಲಕರ್ಣಿ ಹಾಗೂ ಕಾಲೇಜಿನ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಫೋಟೊ: 13 ಎನ್ ಆರ್ ಡಿ-8:
ನರಗುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಪಿಯುಸಿಯಲ್ಲಿಕಲಿತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ನರಗುಂದ ತಾಲೂಕಿನ ಹುಣಸೀಕಟ್ಟಿಯ ರಾಜೇಶ್ವರಿ ಲದ್ದಿಯವರನ್ನು ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಪಿ. ಕುಲಕರ್ಣಿ ಹಾಗೂ ಅವರ ಕುಟುಂಬದವರು ವಿದ್ಯಾರ್ಥಿನಿ ಮನೆಗೆ ತೆರಳಿ ಸನ್ಮಾನಿಸಿದರು.

