* ಕುಡಿಯುವ ನೀರಿನ ಸಧಿಮಧಿಸ್ಯೆ ದೂರು ಸ್ವೀಕರಿಸಲು ಜಿಪಂ ಆರಂಭಿಧಿಸಿಧಿದ ಹೆಲ್ಪ್ ಲೈನ್
ಸಧಿರ್ವಧಿರಿಗೂ ತಧಿಲುಧಿಪಿಲ್ಲಸಧಿಹಾಧಿಯಧಿವಾಧಿಣಿ
ಮಂಜುಧಿನಾಥ ಸಾಧಿಲಿ ರಾಧಿಯಧಿಚೂಧಿರು
ಘ್ಕಿಞa್ಞ್ಜ್ಠ್ಞaಠಿh.sa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಜಿಪಂ ಆರಂಭಿಸಿದ ಸಹಾಯವಾಣಿ ಮೂಲಕ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳುವುದು ಮುಂದುವರಿದಿದ್ದು, ಪ್ರತಿ ದಿನವೂ ಒಂದಲ್ಲಒಂದು ದೂರು ಬರತೊಡಗಿವೆ. ಆದರೆ, ಸಹಾಯವಾಣಿ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಕೊರತೆ ಇರುವುದು ಕಂಡುಬಂದಿದೆ. ಅಧಿಕಾರಿಗಧಿಳು, ಜನಪ್ರತಿನಿಧಿಗಳು ಹಾಗೂ ಬೆರಳೆಣಿಕೆ ಸಂಘ-ಸಂಸ್ಥೆಗಳ ಮುಖಂಡರಿಗೆ ಮಾತ್ರ ಹೆಲ್ಪ್ ಲೈನ್ ಬಗ್ಗೆ ತಿಳಿದಿದೆ ಎಂಬ ಟೀಕೆಗಧಿಳು ವ್ಯಕ್ತವಾಗಿವೆ.
ಪ್ರತಿ ತಾಲೂಕಿನ ಆಯಾ ಹೋಬಳಿ, ಹಳ್ಳಿಗಳಲ್ಲಿನ ಸಮಸ್ಯೆಗೆ ಸಹಾಯವಾಣಿಗೆ ಕರೆ ಮಾಡಿದ ಸಾರ್ವಜನಿಕರ ದೂರು ಸ್ವೀಕರಿಸಿ ವಾರದೊಳಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದವರೆಗೆ ಸ್ವೀಕರಿಸಿದ ದೂರನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ರವಾನಿಸಿ ಬಗೆಹರಿಸಲಾಗುತ್ತಿದೆ. ಜಿಪಿಎಸ್ ಪೋಟೊ ಮೂಲಕ ಸಮಸ್ಯೆ ಬಗೆಹರಿದಿದೆಯೋ ಇಲ್ಲವೊ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ. ಅಲ್ಲದೇ ದೂರುದಾರರ ಮೂಲಕವೂ ಸಮಸ್ಯೆ ಇತ್ಯರ್ಥವಾದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
* ಮಾಹಿತಿ ಕೊರತೆ:
ಏ.1ರಿಂದ 13ರವರೆಗೆ ಜಿಲ್ಲೆಯ ನಾನಾ ತಾಲೂಕುಗಳ ಪೈಕಿ ಮಾನ್ವಿ, ಸಿರವಾರ, ಸಿಂಧನೂರು, ದೇವದುರ್ಗ, ಲಿಂಗಸುಗೂರು ಮುಂತಾದ ತಾಲೂಕುಗಳಿಂದ ನಾನಾ ದೂರುಗಳು ಬಂದಿದ್ದು, ತುರ್ತು ಅಗತ್ಯವಿರುವ ಸಮಸ್ಯೆಗಳನ್ನು ವಾರದೊಳಗೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಮಧ್ಯೆ ವಾರದ ಹಿಂದೆ ಆಯಾ ತಾಲೂಕಿನಲ್ಲಿಕುಡಿಯುವ ನೀರಿನ ಸಮಸ್ಯೆ ಆಲಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಸಹಾಯವಾಣಿ 08523-230539ಕ್ಕೆ ಕರೆ ಮಾಡಿ ದೂರು ಸಲ್ಲಿಸುವಂತೆ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಹೇಳಲಾಗುತ್ತಿದೆ. ಆದರೆ, ಹೆಲ್ಪ್ ಲೈನ್ ಬಗ್ಗೆ ಇನ್ನೂ ಅನೇಕ ಜನರಿಗೆ ಸಮರ್ಪಕ ಮಾಹಿತಿ ಇಲ್ಲದಿರುವುದು ಕಂಡುಬರುತ್ತಿದೆ. ಬೆರಳೆಣಿಕೆ ಸಂಘ-ಸಂಸ್ಥೆಗಳ ಮುಖಂಡರಿಗಷ್ಟೇ ಸಹಾಯವಾಣಿ ಬಗ್ಗೆ ತಿಳಿದಂತೆ ತೋರುತ್ತಿದೆ. ಇನ್ನು ಎಷ್ಟು ದೂರು ಬಂದವು, ಎಷ್ಟು ಇತ್ಯರ್ಥವಾದವು ಎಂಬುದನ್ನು ಪ್ರಶ್ನೆ ಮಾಡುವ ಆಯಾ ಕ್ಷೇತ್ರದ ಜನಪ್ರತಿನಿಧಿಗಧಿಳು, ಅಧಿಕಾರಿಗಳಿಗೆ ಸಹಾಯವಾಣಿ ಮಾಹಿತಿ ಇದೆ ಎಂಬ ಟೀಕೆ ವ್ಯಕ್ತವಾಗಿವೆ. ಕಸ ವಿಲೇವಾರಿ ವಾಹನಗಳ ಮೂಲಕ ಪ್ರತಿ ದಿನ ಮುದ್ರಿತ ಧ್ವನಿ ಕೇಳಿಸುವುದರೊಂದಿಗೆ ಹೆಲ್ಪ್ ಲೈನ್ ಕುರಿತು ಮಾಹಿತಿ ರವಾನಿಸಲಾಗುತ್ತಿದೆ ಎಂದು ಜಿಪಂ ಹೇಳಿದರೂ ಕೆಲವೆಡೆ 3-4 ದಿನವಾದರೂ ಕಸವಿಲೇವಾರಿ ವಾಹನದ ದರ್ಶನವಾಗುವುದಿಲ್ಲ. ಹಾಗಾಗಿ, ಹೆಚ್ಚು ಜನರನ್ನು ತಲುಪುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೇಳಿಬಂದಿವೆ.
* ಎಲ್ಲಿಂದ, ಯಾವ ದೂರು:
ಏ.1ರಿಂದ ಇದುವರೆಗೆ ಜಿಲ್ಲಾದ್ಯಂತ ಒಟ್ಟು 20 ದೂರುಗಳು ಬಂದಿದ್ದು, ಸಿಂಧನೂರು ತಾಲೂಕಿನ ಕುರುಕುಂದಾ, ಲಿಂಗಸುಗೂರು ತಾಲೂಕಿನ ಚಿತಾಪುರ, ರಾಯಚೂರು ತಾಲೂಕಿನ ಹಳೆ ಹನುಮಾಪುರಗಳಿಂದ ನೀರಿನ ತೊಟ್ಟಿ ಸ್ವಚ್ಛಗೊಳಿಸದೆ ನೀರು ಪೂರೈಸಲಾಗುತ್ತಿದೆ. ತೊಟ್ಟಿ ಸ್ವಚ್ಛಗೊಳಿಸಿ ಎಂಬ ದೂರುಗಳು ಕೇಳಿಬಂದಿದ್ದು, ಈಗಾಗಲೇ 2 ಮತ್ತು 4ನೇ ಶನಿವಾರ ನಡೆಸಲಾಗುತ್ತಿರುವ ಸ್ವಚ್ಛತಾ ಅಭಿಯಾನದ ಜತೆಗೆ ತೊಟ್ಟಿ ಸ್ವಚ್ಛತೆ ಬಗ್ಗೆಯೂ ಆದ್ಯತೆ ನೀಡುವಂತೆ ಸೂಚನೆ ನೀಡಲಾಗುತ್ತಿದೆ. ಅದೇ ರೀತಿ ಸಿರವಾರ ತಾಲೂಕಿನ ಮಲ್ಲಟ, ದೇವದುರ್ಗ ತಾಲೂಕಿನ ಕ್ಯಾದಿಗ್ಗೇರಾ ಮತ್ತು ಸಿಂಧನೂರು ತಾಲೂಕಿನ ಸಿಂಗಾಪುರಿಂದ ನೀರು ಸರಬರಾಜಿಗೆ ಬೇಕಿರುವ ಮೋಟರ್ ಸುಟ್ಟು ಹೋಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಲಿಂಗಸುಗೂರು ತಾಲೂಕಿನ ಸರ್ಜಾಪುರ ಮತ್ತು ದೇವದುರ್ಗ ತಾಲೂಕಿನ ಮಲದಕಲ್ ನಿಂದ ಪ್ರಸ್ತುತ ಬೆಳಗ್ಗೆ ನೀರು ಪೂರೈಸಲಾಗುತ್ತಿದ್ದು, ಆ ಹೊತ್ತಲ್ಲಿಹೊಲಕ್ಕೆ, ಕೂಲಿಗೆ ಹೋಗುವುದರಿಂದ ತೊಂದರೆಯಾಗುತ್ತಿದೆ. ಹಾಗಾಗಿ, ಸಂಜೆ ಹೊತ್ತಿಗೆ ನೀರು ಸರಬರಾಜು ಮಾಡುವಂತೆ ಸಹಾಯವಾಣಿಗೆ ಕರೆ ಮಾಡಿ ಕೋರಲಾಗಿದೆ. ಇನ್ನು ರಾಯಚೂರು ತಾಲೂಕಿನ ಅರೋಲಿಯಲ್ಲಿಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ದಿನವೂ ತಪ್ಪದೆ ನೀರು ಪೂರೈಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಒಟ್ಟಾರೆ, ಕಳೆದ 13 ದಿನಗಳಲ್ಲಿ20 ದೂರು ಸ್ವೀಕರಿಸಿರುವ ಜಿಪಂ, 15 ಸಮಸ್ಯೆಗೆ ಸ್ಪಂದಿಸಿದ್ದು ಇನ್ನೂ 5 ಬಾಕಿ ಇವೆ.
*ಕೋಟ್ ..
ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ವಿಶೇಷವಾಗಿ ಬೇಸಿಗೆ ಸಂದರ್ಭ ಜಿಪಂನಿಂದ ಸಹಾಯವಾಣಿ ಶುರು ಮಾಡಲಾಗಿದ್ದು, ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ಚಾಲ್ತಿಯಲ್ಲಿರುತ್ತದೆ. ರಜೆ, ಹಬ್ಬ, ಜಾತ್ರೆ ಸಂದರ್ಭವೂ ಹೆಲ್ಪ್ ಲೈನ್ ಕಾರ್ಯನಿರ್ವಹಿಸುತ್ತಿದ್ದು, ಸ್ವೀಕರಿಸಿದ ದೂರುಗಳಿಗೆ ಪಿಡಿಒಗಳ ಮೂಲಕ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಇನ್ನೂ ಹೆಚ್ಚು ಜನರನ್ನು ಹೆಲ್ಪ್ ಲೈನ್ ತಲುಪುವತ್ತ ಗಮನಹರಿಸಲಾಗುತ್ತದೆ.
-ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ, ಜಿಪಂ, ರಾಯಚೂರು
* ಫೋಟೊ * ಎಐ ಚಿತ್ರ ಬಧಿಳಧಿಸಿ

