ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲ ವೃದ್ಧಿ

Contributed bymanjunath.dtp@gmail.com|Vijaya Karnataka

ಅರಸೀಕೆರೆ ತಾಲೂಕಿನ ತಿರುಪತಿ ಗ್ರಾಮದಲ್ಲಿ 100 ಲಕ್ಷ ರೂ. ವೆಚ್ಚದಲ್ಲಿ 2 ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು. ಬಯಲು ಸೀಮೆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಏರಿಕೆಗೆ ಈ ಯೋಜನೆ ಸಹಕಾರಿಯಾಗಿದೆ. ಈ ಹಿಂದೆ 1000 ಅಡಿ ಆಳದಲ್ಲಿ ನೀರು ದೊರಕುತ್ತಿತ್ತು. ಈಗ 500 ಅಡಿ ಆಳದಲ್ಲಿ ಉತ್ತಮ ನೀರು ಲಭ್ಯವಾಗುತ್ತಿದೆ. ಇದು ಜನರ ಆರೋಗ್ಯಕ್ಕೂ ಅನುಕೂಲವಾಗಿದೆ.

increase in groundwater levels in tirupati village through check dam construction

ತಿರುಪತಿ ಗ್ರಾಮದಲ್ಲಿಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಚಾಲನೆ

ವಿಕ ಸುದ್ದಿಲೋಕ ಅರಸೀಕೆರೆ

ಚೆಕ್ ಡ್ಯಾಂಗಳನ್ನು ಕಟ್ಟಿಸುವ ಮೂಲಕ ಅಂತರ್ಜಲ ಮಟ್ಟವನ್ನು ಏರಿಸುವ ನಿಟ್ಟಿನಲ್ಲಿಕೈಗೊಂಡ ಯೋಜನೆ ಸಾಕಾರವಾಗಿದ್ದು, ಇಂದು ಬೋರ್ ವೆಲ್ ಗಳಲ್ಲಿಉತ್ತಮ ನೀರು ದೊರಕುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲೂಕಿನ ತಿರುಪತಿ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 100 ಲಕ್ಷ ರೂ. ವೆಚ್ಚದಲ್ಲಿ2 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘‘ಅರಸೀಕೆರೆ ತಾಲೂಕು ಬಯಲು ಸೀಮೆ ಪ್ರದೇಶವಾಗಿ ಅಂತರ್ಜಲ ಮಟ್ಟ 1 ಸಾವಿರ ಅಡಿಗೆ ಕುಸಿದು ಫ್ಲೋರೈಡ್ ಯುಕ್ತ ನೀರು ದೊರಕುತ್ತಿದ್ದು, ಹಲವು ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದರು. ಇದನ್ನರಿತು ಮಳೆಯ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿಪ್ರಾರಂಭ ಮಾಡಿದ ಚೆಕ್ ಡ್ಯಾಂ ನಿರ್ಮಾಣದ ಫಲ ಇಂದು ಅಂತರ್ಜಲ ಮಟ್ಟ ಏರಿಕೆಗೆ ಕಾರಣವಾಗಿದೆ,’’ಎಂದರು.

‘‘ಅಂತರ್ಜಲ ಅಭಿವೃದ್ಧಿ ಆಗಬೇಕಾದರೆ ಚೆಕ್ ಡ್ಯಾಂ ಗಳನ್ನ ನಿರ್ಮಾಣ ಮಾಡಬೇಕೆಂದು ಮನಗಂಡು ಸರಕಾರದ ಮೂಲಕ ಅನುದಾನ ತಂದು ಕ್ಷೇತ್ರದಲ್ಲಿಸಾವಿರಾರು ಚೆಕ್ ಡ್ಯಾಂಗಳನ್ನು ಕೆರೆಗೆ ಅಡ್ಡಲಾಗಿ ಕಟ್ಟಿಸಿದ ಪರಿಣಾಮ ಅಂತರ್ಜಲ ಮಟ್ಟ ಏರಿಕೆಯಾಗಿ ಈಗ ಕೇವಲ 500 ಅಡಿಗೆ ನೀರು ದೊರಕುತ್ತಿರುವುದು ಸಂತಸ ತಂದಿದೆ. ಇದನ್ನ ಮುಂದುವರಿಸಿದ್ದು, ಇನ್ನು ಅವಶ್ಯಕತೆ ಇರುವೆಡೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುತ್ತಿದ್ದೇವೆ,’’ಎಂದು ಹೇಳಿದರು.

ಅಗ್ಗುಂದ ಮಾಜಿ ಅಧ್ಯಕ್ಷ ತಿರುಪತಿ ಗಿರೀಶ, ಮುಖಂಡರಾದ ತಿರುಪತಿ ಚಂದ್ರಣ್ಣ, ರಂಗಸ್ವಾಮಿ, ಕಾರೇಹಳ್ಳಿ ಈಶಣ್ಣ, ಬೊಮ್ಮೇನಹಳ್ಳಿ ವಡ್ಡರಹಟ್ಟಿ ರೇವಣ್ಣ, ಗೊಲ್ಲರಹಟ್ಟಿ ರಾಜಶೇಖರ, ಬೋರನಕೊಪ್ಪಲು ಶಿವಲಿಂಗಪ್ಪ, ಯಳವಾರೆ ಕೇಶವಣ್ಣ, ಎಂಜಿನಿಯರ್ ಉಮೇಶ, ಗುತ್ತಿಗೆದಾರ ಜ್ಞಾನೇಶ,ಗ್ರಾಮಸ್ಥರು ಹಾಜರಿದ್ದರು.

ಏಖN12ಅಖಓಧಿP01: ಅರಸೀಕೆರೆ ತಿರುಪತಿ ಗ್ರಾಮದ ಬಳಿ 2 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು.