ಏಕರೂಪ ನಾಗರಿಕ ಸಂಹಿತೆ ಸರ್ವಕಾಲಕ್ಕೂ ಯೋಗ್ಯ

Contributed byagsbhat.vk@gmail.com|Vijaya Karnataka

ಜಯಪುರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಚಿಂತನಾ ವೇದಿಕೆ ವತಿಯಿಂದ 135ನೇ ಜಯಂತಿ ಆಚರಿಸಲಾಯಿತು. ಏಕರೂಪ ನಾಗರಿಕ ಸಂಹಿತೆ ಸರ್ವಕಾಲಕ್ಕೂ ಯೋಗ್ಯ ಎಂದು ಸಂವಿಧಾನ ತಜ್ಞ ಡಾ.ಸುಧಾಕರ್‌ ಹೊಸಳ್ಳಿ ಅಭಿಪ್ರಾಯಪಟ್ಟರು. ಅಂಬೇಡ್ಕರ್‌ ಅವರ ದೂರದೃಷ್ಟಿಯಿಂದ ಸಂವಿಧಾನ ರಚನೆಯಾಗಿದೆ. ಪಠ್ಯ ಪುಸ್ತಕಗಳಲ್ಲಿಯೂ ಸತ್ಯದ ವಿಚಾರಗಳನ್ನು ಮುಚ್ಚಿಡುವ ಕೆಲಸವಾಗುತ್ತಿದೆ ಎಂದು ಜಿ.ಸಿ.ಗೋಪಾಲಕೃಷ್ಣ ಹೇಳಿದರು. ಮೆರವಣಿಗೆ ಹಾಗೂ ಪುಸ್ತಕ ಬಿಡುಗಡೆ ನಡೆಯಿತು.

uniform civil code rejected even by baba saheb

ಏಕರೂಪ ನಾಗರಿಕ ಸಂಹಿತೆ ಸರ್ವಕಾಲಕ್ಕೂ ಯೋಗ್ಯ

ವಿಕ ಸುದ್ದಿಲೋಕ ಜಯಪುರ

ಇಸ್ಲಾಮಿಕ್ ಸಿದ್ಧಾಂತವನ್ನು ಒಪ್ಪುವ ಕೆಲ ಮುಸ್ಲಿಂ ಮುಖಂಡರು ಹಿಂದೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ತಮ್ಮ ಸಮುದಾಯಕ್ಕೆ ತೊಂದರೆಯಾದೀತು ಎಂದು ಅದನ್ನು ವಿರೋಧಿಸಿದ್ದರು. ಆದರೆ ಅಂಬೇಡ್ಕರ್ ಅವರು ಅದು ಮುಂದೆ ಸರ್ವಕಾಲಕ್ಕೂ ಒಪ್ಪುವ ಸಂಹಿತೆಯಾಗಿದೆ ಎಂದು ಅಂತಹ ಮುಖಂಡರ ಅಭಿಪ್ರಾಯಗಳನ್ನು ತಿರಸ್ಕರಿಸಿದ್ದರು ಎಂದು ಸಂವಿಧಾನ ತಜ್ಞ ಡಾ.ಸುಧಾಕರ್ ಹೊಸಳ್ಳಿ ಹೇಳಿದರು.

ಪಟ್ಟಣದ ಶೃಂಗೇರಿ ವೃತ್ತದ ಬಳಿ ಮೇಗುಂದಾ ಹೋಬಳಿಯ ಡಾ.ಬಿ.ಆರ್ .ಅಂಬೇಡ್ಕರ್ ಚಿಂತನಾ ವೇದಿಕೆಯಿಂದ 135ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.

ಪ್ರಜಾ ವರ್ಗದ ಕ್ಷೇಮಕ್ಕಾಗಿ ಸಂವಿಧಾನವು ಕಾಲಕಾಲಕ್ಕೆ ಮಾರ್ಪಾಟು, ತಿದ್ದುಪಡಿಗಳಾಗಬೇಕೆಂಬುದು ಬಾಬಾ ಸಾಹೇಬರ ದೂರದೃಷ್ಟಿಯಾಗಿತ್ತು. ಆದರೆ, ಎಡಪಂಥೀಯರಿಗೆ ಅದನ್ನು ವಿರೋಧಿಸುವುದೊಂದೇ ಚಾಳಿಯಾಗಿ ಬಿಟ್ಟಿತ್ತು ಎಂದರು.

ಬಸರಿಕಟ್ಟೆ ಶ್ರೀ ಸದ್ಗುರು ವಿದ್ಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಸಿ.ಗೋಪಾಲಕೃಷ್ಣ ಮಾತನಾಡಿ, ಇಂದಿನ ಪಠ್ಯ ಪುಸ್ತಕಗಳಲ್ಲೂಅನೇಕ ಸತ್ಯದ ವಿಚಾರಗಳನ್ನು ಮುಚ್ಚಿಡುವ ಕೆಲಸವಾಗುತ್ತಿದೆ. ಅಂಬೇಡ್ಕರ್ ಅವರ ತಮ್ಮ ತೌಲನಿಕ ಅಧ್ಯಯನದಿಂದ ರಚಿತವಾದ ಸಂವಿಧಾನವು ಜನರು ಸುರಕ್ಷಿತರಾಗಿರುವಂತೆ ಮಾಡಿದೆ ಎಂದರು.

ಮಾಜಿ ಶಾಸಕ ಡಿ.ಎನ್ .ಜೀವರಾಜ್ , ಮುಖಂಡರುಗಳಾದ ಎ.ಸಿ.ಸಂತೋಷ್ ಅರನೂರು, ಮಣಿಕಂಠ ಕಂದಸ್ವಾಮಿ, ಹೆಗ್ಗದ್ದೆ ಮಂಜುನಾಥ್ , ಗುರುಕೃಪಾ ಅನಂತ್ , ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಪತ್ ಕುಮಾರ್ , ಉದ್ಯಮಿ ಮನೋಹರ್ ಗುಬ್ಬಿಬೈಲು ಮತ್ತಿತರರು ಉಪಸ್ಥಿತರಿದ್ದರು. ಬಸ್ ನಿಲ್ದಾಣದಿಂದ ವೇದಿಕೆ ವರೆಗೆ ಮೆರವಣಿಗೆ ನಡೆಸಲಾಯಿತು. ಪುಸ್ತಕ ಬಿಡುಗಡೆ ನಡೆಯಿತು.

11ಬಿಎಚ್ ಆರ್ 8 : ಜಯಪುರದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಚಿಂತನಾ ವೇದಿಕೆಯಿಂದ ಉಪನ್ಯಾಸ ಕಾರ್ಯಕ್ರಮಕ್ಕೆ ಮೊದಲು ಮೆರವಣಿಗೆ ನಡೆಸಲಾಯಿತು.