ಕೊಟ್ಟಿಗೆಯಲ್ಲಿಪ್ಯಾನ್ ಅಳವಡಿಸಲು ಪಶುವೈದ್ಯರ ಸೂಚನೆ
ವಿಕ ವಿಶೇಷ ಮಾಗಡಿ ಗ್ರಾಮಾಂತರ
ತಾಲೂಕಿನಲ್ಲಿನ ತೀವ್ರ ಬೇಸಿಗೆ ಬಿಸಿಲಿನ ನಡುವೆ ರಾಸುಗಳಲ್ಲಿಉಷ್ಣಾಂಶ ಜ್ವರ (ಹೀಟ್ ಸ್ಟೆ್ರಸ್ ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೈನುಗಾರಿಕೆ ರೈತರಲ್ಲಿಆತಂಕ ಮೂಡಿಸಿದೆ. ಜಿಲ್ಲೆಯಲ್ಲಿತಾಪಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿರುವುದು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಮಧ್ಯಾಹ್ನದ ತಾಪಕ್ಕೆ ಹೊಲ, ಗದ್ದೆ, ಗೋಮಾಳ ಹಾಗೂ ಕೆರೆಗಳ ಪ್ರದೇಶಗಳಲ್ಲಿಮೇಯುವ ರಾಸುಗಳು ಬಿಸಿಲಿನ ತೀವ್ರತೆಗೆ ತುತ್ತಾಗಿ ಉಷ್ಣಾಂಶ ಜ್ವರದಿಂದ ಬಳಲುತ್ತಿವೆ. ಜ್ವರ ಕಾಣಿಸಿಕೊಂಡ ತಕ್ಷಣ ಹಸುಗಳಲ್ಲಿನಿಶಕ್ತಿ, ಕಾಲು ಕುಂಟುವ ಲಕ್ಷಣಗಳು ಕಂಡುಬರುತ್ತಿದ್ದು, ಕೆಲವು ದಿನಗಳವರೆಗೆ ರಾಸುಗಳು ನಿತ್ರಾಣಗೊಂಡ ಸ್ಥಿತಿಯಲ್ಲಿಇರುತ್ತಿವೆ.
ಈ ಪರಿಸ್ಥಿತಿಯಲ್ಲಿರೈತರು ಪಶುವೈದ್ಯರನ್ನು ಮನೆಗೆ ಕರೆಸಿ ಚಿಕಿತ್ಸೆ ನೀಡಿಸುತ್ತಿದ್ದು, ಹಸುಗಳನ್ನು ಕೊಟ್ಟಿಗೆಯಲ್ಲಿಕಟ್ಟಿಹಾಕಿ ಹಸಿ ಮೇವು ಹಾಗೂ ರಾಗಿ ಅಂಬಲಿ ನೀಡುವ ಮೂಲಕ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ಸೀಮೆ ಹಸುಗಳಲ್ಲಿಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಒಣಮೇವು ಹೆಚ್ಚಾಗಿ ನೀಡುವ ನಾಟಿ ಹಸುಗಳಲ್ಲಿಯೂ ಜ್ವರ ಲಕ್ಷಣಗಳು ಗೋಚರಿಸುತ್ತಿವೆ.
ಮಳೆ ಆಗುವವರೆಗೂ ಈ ಬಿಸಿಲಿನ ತೀವ್ರತೆ ಮುಂದುವರಿದರೆ ರಾಸುಗಳ ಆರೋಗ್ಯ ಹಾಗೂ ಹಾಲಿನ ಉತ್ಪಾದನೆ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮಗಳು ಅನಿವಾರ್ಯವಾಗಿದೆ.
ಕೋಟ್
ಪಶುವೈದ್ಯ ಇಲಾಖೆ ರಾಸುಗಳ ಆರೈಕೆಗೆ ವಿಶೇಷ ಸೂಚನೆಗಳನ್ನು ನೀಡಿದೆ. ಮಳೆ ಬಂದರೆ ತಾಪಮಾನ ಸರಿದೂಗಲಿದೆ. ಅಲ್ಲಿಯವರೆಗೂ ಹಸುಗಳನ್ನು ಹೆಚ್ಚಿಗೆ ಬಿಸಿಲಿನಲ್ಲಿಬಿಡಬೇಡಿ. ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮೇಯಲು ಬಿಡಬೇಕು. ನಂತರ ಕೊಟ್ಟಿಗೆಯಲ್ಲಿಕಟ್ಟಿಹಾಕಿ ತಂಪಿನ ವಾತಾವರಣ ಕಲ್ಪಿಸಬೇಕು. ಸಾಧ್ಯವಾದರೆ ಪ್ಯಾನ್ ಅಳವಡಿಸಬೇಕು.
-ಜಯಶ್ರೀ | ಪಶುವೈದ್ಯಾಧಿಕಾರಿ ಮಾಗಡಿ
------------
ಬೇಸಿಗೆಯಲ್ಲಿಹಸುಗಳು ಹೆಚ್ಚು ನೀರು ಕುಡಿಯುವ ಹಿನ್ನೆಲೆಯಲ್ಲಿಸಾಕಷ್ಟು ನೀರು ಒದಗಿಸುವುದೂ ಅಗತ್ಯವಾಗಿದೆ. ಹಸಿಮೇವು ಕಡಿಮೆ ಮಾಡಿದರೆ ಹಾಲಿನ ಕೊಬ್ಬಿನ ಪ್ರಮಾಣ ಕುಸಿಯುತ್ತದೆ. ಆದ್ದರಿಂದ ಮೇವಿನಲ್ಲಿವ್ಯತ್ಯಾಸ ಮಾಡುತ್ತಿಲ್ಲ.
- ಹೊನ್ನಯ್ಯ | ರೈತ
13ಎಸ್ ಎಲ್ ಆರ2
ಉಷ್ಟಾಂಶ ಜ್ವರಕ್ಕೆ ತುತ್ತಾಗಿ ಬಳಲಿರುವ ಹಸು.
13ಎಸ್ ಎಲ್ ಆರ3
ಚುಚ್ಚು ಮದ್ದು ನೀಡುತ್ತಿರು ವೈದ್ಯರು.

