ಕಳಸಾಪುರ ಕರಾಳಮ್ಮ ಭಕ್ತಿಗೀತೆ ಸಮರ್ಪಣೆ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಒಂದು ದೇವಸ್ಥಾನದ ಭಕ್ತಿಗೀತೆ ಎಂದರೆ ಅದರಲ್ಲಿಸ್ಥಳೀಯ ಪೌರಾಣಿಕ ಸಂಗತಿಗಳು, ಆಚರಣೆಗಳು, ನಂಬಿಕೆಗಳು, ಜನಜೀವನ ಎಲ್ಲವೂ ಅಡಕವಾಗಿರುತ್ತವೆ. ಭಕ್ತಿ ರಚನೆಯೂ ಕವಿಯ ಪ್ರತಿಭಾ ಶಕ್ತಿಯನ್ನು, ಸಂಶೋಧನಾ ಪ್ರವೃತ್ತಿಯನ್ನು ತೋರುತ್ತದೆ ಎಂದು ಖ್ಯಾತ ನಿರ್ದೇಶಕ ಟಿ.ಎನ್ .ಸೀತಾರಾಂ ಅವರ ಪುತ್ರಿ ಅಶ್ವಿನಿ ಅನೀಶ್ ಹೇಳಿದರು.
ನಗರದ ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿಕಲ್ಕಟ್ಟೆ ಗಾನದೀವಿಗೆ ಸರಣಿಯ 42ನೇ ಗೀತೆ ‘ಕಳಸಾಪುರದ ಆದಿಶಕ್ತಿ ಕರಾಳಮ್ಮ’ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಧಾರ್ಮಿಕತೆಯು ಅಂತರಂಗ ಶುದ್ಧಿಗೆ ಮೂಲಧಾತು. ಈ ದಿಸೆಯಲ್ಲಿಗಾಯನ, ಸಂಗೀತವು ನಮ್ಮ ಮನಃಶಾಂತಿಗೆ ಕಾರಣವಾಗುತ್ತದೆ. ನಾಗರಾಜರಾವ್ ಕಲ್ಕಟ್ಟೆ ಅವರು ಈ ದಿಸೆಯಲ್ಲಿಹಲವು ವರ್ಷಗಳಿಂದ ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದಾರೆ. ಕರಾಳಮ್ಮ ತಾಯಿಯ ಭಕ್ತಿ ಸಾಹಿತ್ಯ, ಗಾಯನ ಹಾಗೂ ಕೆ.ಎನ್ .ನಾಗಭೂಷಣ್ ಅವರ ಹಿನ್ನೆಲೆ ಸಂಗೀತವೂ ಮಧುರವಾಗಿದೆ ಎಂದರು.
ಕಿರುಚಿತ್ರಗಳ ನಿರ್ದೇಶಕ ನವನೀತ್ ಗೌಡ ಮಾತನಾಡಿ, ಕಲ್ಕಟ್ಟೆ ಪುಸ್ತಕದ ಮನೆ ನಿರಂತರವಾಗಿ ಭಕ್ತಿಕ್ಷೇತ್ರದಲ್ಲಿಸೇವೆ ಸಲ್ಲಿಸುತ್ತಿದೆ ಎಂದರು.
ಬೆಂಗಳೂರಿನ ಕಲಾವಿದ ದೊರೆ, ಸಂಗೀತ ಸಹಾಯಕಿ ವೈಷ್ಣವಿ ಎನ್ .ರಾವ್ , ಶಿಕ್ಷಕಿ ಸುನೀತಾ, ಲಯನ್ ಸಂಸ್ಥೆಯ ಜಿ.ರಮೇಶ್ , ರಮೇಶ್ ಬೊಂಗಾಳೆ, ಕಲಾವಿದೆ ವೀಣಾ ಅರವಿಂದ್ , ಶಿಕ್ಷಕಿ ಕಮಲಾಕ್ಷಿ, ಚಿಂತಕ ಅರವಿಂದ್ ಕುಮಾರ್ , ನಾಗರಾಜರಾವ್ ಕಲ್ಕಟ್ಟೆ, ರೇಖಾ ನಾಗರಾಜರಾವ್ ಇತರರಿದ್ದರು.
10ರುದ್ರಯ್ಯ-ಪಿ2
ಚಿಕ್ಕಮಗಳೂರಿನಲ್ಲಿಆದಿಶಕ್ತಿ ಕರಾಳಮ್ಮ ಭಕ್ತಿಗೀತೆಯನ್ನು ಗಣ್ಯರು ಬಿಡುಗಡೆ ಮಾಡಿದರು.

