ಸನ್ಮಾನ ಸಮಾರಂಭ
ವಿಕ ಸುದ್ದಿಲೋಕ ಬಳ್ಳಾರಿ
‘‘ಕಸಾಪ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ನಿಷ್ಟಿ ರುದ್ರಪ್ಪ ಅವರಿಗೆ ಸಂದಿರುವ ‘ಸಾಹಿತ್ಯಶ್ರೀ’ ಪ್ರಶಸ್ತಿಯು ಇಡೀ ಬಳ್ಳಾರಿ ಜಿಲ್ಲೆಗೆ ಸಂದ ಅಭೂತಪೂರ್ವ ಗೌರವವಾಗಿದೆ,’’ ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ.ಮಹೇಶ್ವರ ಸ್ವಾಮಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿಮಾತನಾಡಿದರು.
‘‘ಸತತ ಮೂರು ಬಾರಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರುದ್ರಪ್ಪ ಅವರು ಸಾಹಿತಿಗಳಾಗಿದ್ದು, ಜಿಲ್ಲೆಯ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡುತ್ತಾ ಬಂದಿದ್ದಾರೆ,’’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರ್ ನೂರು ಕೊಟ್ರಪ್ಪ, ವಿಶ್ರಾಂತ ಪ್ರಾಂಶುಪಾಲ ಮಲ್ಲಪ್ಪ, ಸಿ.ಎಂ.ಗಂಗಾಧರಯ್ಯ, ಯೋಗಪಟು ಬಾಣಪುರ ಮಹೇಶ್ ಗೌಡ, ವಿ.ಎಸ್ .ಲಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನರೇಂದ್ರಬಾಬು ಮಾತನಾಡಿದರು.
ರೈಲ್ವೆ ಡಿಆರ್ ಯುಸಿಸಿ ಸದಸ್ಯರಾದ ಕೆ.ಎಂ.ಕೊಟ್ರೇಶ್ , ಸೋಮಲಿಂಗನಗೌಡ, ಪಿ.ಬಂಡೇಗೌಡ, ಬಿ.ಎಂ.ಎರಿಸ್ವಾಮಿ, ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳಾದ ಚಾಂದ್ ಬಾಷಾ, ಮಂಜುನಾಥ್ ಇದ್ದರು.
ಫೋಟೋ ಕ್ಯಾಪ್ಷನ್ : 13 ಬಿಎಲ್ ವೈ ಪೀರಾಸಾಬ್ 6
ಬಳ್ಳಾರಿಯ ನಗರದಲ್ಲಿಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತ ನಿಷ್ಟಿ ರುದ್ರಪ್ಪ ಅವರನ್ನು ಗಣ್ಯರು ಸನ್ಮಾನಿಸಿದರು.

