13 ಎನ್ ಆರ್ ಡಿ-2
ಸಂಗೀತ ಪರೀಕ್ಷೆ ತರಬೇತಿ ಕಾರ್ಯಾಗಾರ
ವಿಕ ಸುದ್ದಿಲೋಕ ನರಗುಂದ
ಪಟ್ಟಣದ ಭಾರತೀಯ ಸಂಗೀತ ವಿದ್ಯಾಲಯದಲ್ಲಿಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪರೀಕ್ಷೆ ತರಬೇತಿ ಕಾರ್ಯಾಗಾರ ನಡೆಯಿತು. ವಿವಿಧ ಗೀತ ಗಾಯನ ಮೂಲಕ ಪರೀಕ್ಷೆ ಮಾಹಿತಿಯನ್ನು ಸಂಗೀತ ಕಲಾವಿದರಿಗೆ ನೀಡಲಾಯಿತು.
ಕಾರ್ಯಾಗಾರದಲ್ಲಿಮಾತನಾಡಿದ ಭಾರತೀಯ ಸಂಗೀತ ವಿದ್ಯಾಲಯ ದ ಪ್ರಾಚಾರ್ಯ ಶ್ರೀನಿವಾಸ ಇನಾಮದಾರ, ಸಂಗೀತ ಪರೀಕ್ಷೆಗಳು ಪ್ರಾಯೋಗಿಕ, ಶಾಸ್ತ್ರ ವಿಷಯ ಜ್ಞಾನ, ಶ್ರವಣ ಜ್ಞಾನ ಅಧ್ಯಯನ ಮೂಲಕ ನಡೆಯುತ್ತವೆ. ಭಾರತೀಯ ಸಂಗೀತ ವಿದ್ಯಾಲಯ, ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ಮುಂಬಯಿ ಸಂಸ್ಥೆಗಳು ಪ್ರತಿ ವರ್ಷ ಸಂಗೀತ ಪರೀಕ್ಷೆ ಕಾರ್ಯಗಾರ ಹಮ್ಮಿಕೊಂಡು ಉತ್ತಮ ಸಂಗೀತ ಕಲಾವಿದರನ್ನು ಆಯ್ಕೆ ಮಾಡುತ್ತವೆ ಎಂದು ತಿಳಿಸಿದರು.
ಸಂಗೀತ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯನಗರ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದ ಸಂಗೀತ ಪ್ರಾಧ್ಯಾಪಕ ರಾಷ್ಟ್ರ ಪ್ರಶಸ್ತಿ ವಿಜೇತ ಯುವ ಗಾಯಕ ಚಂದ್ರಕಾಂತ ಇನಾಮದಾರ ಪ್ರಶ್ನೆ ಪತ್ರಿಕೆ ಬಿಡಿಸುವ ಮೂಲಕ ಸಂಗೀತದ ವಿವಿಧ ಗೀತ ಪ್ರಕಾರಗಳಾದ ಬಡಾ ಖ್ಯಾಲ, ಛೋಟಾ ಖ್ಯಾಲ, ಧಮಾರ, ದೃಪದ ತರಾನಾ, ಪಾರಿಭಾಷಿಕ ಪದಗಳ ಮತ್ತು ಕೇರವಾ, ದಾದರಾ, ರೂಪಕ ಝಪತಾಳ, ಏಕತಾಳ, ಚೌತಾಳ, ತ್ರಿತಾಲ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದ ಪ್ರಾರಂಭಿಕ ವಿಭಾಗದಲ್ಲಿಅಪೇಕ್ಷಾ ಕರ್ಕಿಕಟ್ಟಿ, ಅದ್ವಿಕಾ ಕರ್ಕಿಕಟ್ಟಿ, ಸಿರಿ ಬೆಂತೂರ, ಆರೋಹಿ ಗುಜಮಾಗಡಿ, ಅನ್ವಿತಾ ಅಡ್ಡಣಗಿ ಹಾಗೂ ಪ್ರವೇಶಿಕಾ ಪ್ರಥಮ ವಿಭಾಗದಲ್ಲಿಕೃಷ್ಣವೇಣಿ ಕನಕರಡ್ಡಿ, ಮಾಣಿಕ್ಯ ಯರಗಟ್ಟಿ, ಸೃಷ್ಟಿ ಬೆಂತೂರ, ನಿತೀನ ಬಿ ಹಾಗೂ ಪ್ರವೇಶಿಕಾ ಪೂರ್ಣ ವಿಭಾಗದಲ್ಲಿಪ್ರೇರಣಾ ಪೂಜಾರ, ವಸಂತ ಸುಳ್ಳದ, ಚೇತನ ಬಿ ತರಬೇತಿ ಪಡೆದರು.
ಗೀತಾ ಕರ್ಕಿಕಟ್ಟಿ ಪರೀಕ್ಷೆ ಕಾರ್ಯಾಗಾರದಲ್ಲಿಮಾತನಾಡಿ, ಸಂಗೀತ ಪ್ರಾಯೋಗಿಕ ಪರೀಕ್ಷೆಯಲ್ಲಿಪರೀಕ್ಷಕರು ಕೇಳುವ ಪ್ರಶ್ನೆಗಳಿಗೆ ಗಡಿಬಿಡಿ ಮಾಡಿಕೊಳ್ಳದೆ ಸಮಾಧಾನದಿಂದ ಸೂಕ್ತ ಉತ್ತರ ನೀಡಬೇಕೆಂದು ಮಾಹಿತಿ ನೀಡಿದರು. ಪರೀಕ್ಷೆ ಕಾರ್ಯಾಗಾರದ ಮಾಹಿತಿ ಸಂದರ್ಭದಲ್ಲಿಪ್ರಾಚಾರ್ಯ ಶ್ರೀನಿವಾಸ ಇನಾಮದಾರ ವಿವಿಧ ಸಂಗೀತ ರಾಗಗಳನ್ನು ಪ್ರದರ್ಶಿಸಿದರು. ನವಲಗುಂದದ ವಿಜಯೇಂದ್ರ ಕುಲಕರ್ಣಿ ತಬಲಾ ಸಾಥ ನೀಡಿದರು.
ಫೋಟೊ: 13 ಎನ್ ಆರ್ ಡಿ-2:
ನರಗುಂದ ಪಟ್ಟಣದ ಭಾರತೀಯ ಸಂಗೀತ ವಿದ್ಯಾಲಯದಲ್ಲಿಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪರೀಕ್ಷೆ ತರಬೇತಿ ಕಾರ್ಯಾಗಾರ ನಡೆಯಿತು.

