ವಿಕ ಸುದ್ದಿಲೋಕ ಅರಟಾಳ
ತಾಲೂಕಿನಲ್ಲೇ ಅತ್ಯುತ್ತಮವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸುವ ಮೂಲಕ ಅರಟಾಳ ಮಾದರಿಯಾಗಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಹಳ್ಳಿಗಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೆಳಗಾವಿ ಜಿಲ್ಲಾ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನ್ನವರ ಅಭಿಪ್ರಾಯ ಪಟ್ಟರು.
ಸ್ಥಳೀಯ ಗ್ರಾಮ ಪಂಚಾಯಿತಿಗೆ ಭಾನುವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘‘ಅರಟಾಳ ಪಂಚಾಯಿತಿಯು ಸರಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿಮುಂಚೂಣಿಯಲ್ಲಿದೆ. ನಾನು ಅಥಣಿ ತಾಲೂಕಿನ ಇಒ ಆಗಿದ್ದ ಸಂದರ್ಭದಲ್ಲಿಯೂ ಇಲ್ಲಿನ ಸಿಬ್ಬಂದಿಯ ಕಾರ್ಯವೈಖರಿ ಗಮನಿಸಿದ್ದೇನೆ. ಜನರಿಗೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಸಿಬ್ಬಂದಿ ವರ್ಗ ಜಾಥಾಗಳ ಮೂಲಕ ಮಹತ್ವದ ಕೆಲಸ ಮಾಡುತ್ತಿದೆ,’’ ಎಂದು ಶ್ಲಾಘಿಘಿಸಿದರು.
ಇದೇ ವೇಳೆ ಪಿಡಿಒ ಎ. ಜಿ. ಎಡಕೆ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಆನಂದ ಗಿರಿಜಾಗೋಳ, ಮುಖಂಡರಾದ ಯಲ್ಲಪ್ಪ ಹಟ್ಟಿ, ಮಹಾದೇವ ಡಂಗಿ, ಮಾಳಪ್ಪ ಕಾಂಬಳೆ, ಮಹಾತೇಶ ವಜ್ರವಾಡ, ಮಹಾದೇವ ಮಾದರ, ಹಾಗೂ ಕಾಸಪ್ಪ ಮಾದರ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಇದ್ದರು.
-13ಅರಟಾಳ1
ಅರಟಾಳ ಗ್ರಾಪಂಗೆ ಭೇಟಿ ನೀಡಿದ ಜಿಲ್ಲಾ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನ್ನವರ ಅವರನ್ನು ಸಿಬ್ಬಂದಿ ಮತ್ತು ಗ್ರಾಮಸ್ಥರು ಸನ್ಮಾನಿಸಿದರು.

