ಧಾರವಾಡ : ಬಿಜೆಪಿ ಮುಖಂಡ ಗುರುನಾಥಗೌಡ ಗೌಡರ ಚಿನ್ನ ನೀಡುವ ವಿಚಾರವಾಗಿ ತನ್ನ ಇಬ್ಬರು ಸಹೋದರಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ ಗುರುನಾಥ ಗೌಡರ ಮನೆಗೆ ತವರಿನ ಚಿನ್ನ ನೀಡುವಂತೆ ಕೋರಿ ಸಹೋದರಿಯರಾದ ಅಕ್ಕ ಮಹಾದೇವಿ ಉಪ್ಪಿನ ಹಾಗೂ ರಾಜೇಶ್ವರಿ ಕಟಗಿ ಮನೆಗೆ ಬಂದಿದ್ದರು. ಈ ವೇಳೆ ಜಗಳ ತೆಗೆದ ಗುರುನಾಥಗೌಡ ಹಾಗೂ ಅವರ ಪತ್ನಿ ಇವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಮಹಾದೇವಿ ಹಾಗೂ ರಾಜೇಶ್ವರಿ ಇಬ್ಬರಿಗೂ ತಲೆಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ…ನಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗುರುನಾಥಗೌಡ ಹಾಗೂ ಅವರ ಪತ್ನಿ ಜ್ಯೋತಿ ಗೌಡರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

