ಪೇಜ್ 8

Contributed byDHEERAJ K|Vijaya Karnataka

ಭಾರತವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಮೂಲಕ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. 2025-26ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ. 20 ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿದೆ. ಇದು ವಿದೇಶಿ ವಿನಿಮಯವನ್ನು ಉಳಿಸಲು ಮತ್ತು ಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ರೈತರಿಗೂ ಇದರಿಂದ ಅನುಕೂಲವಾಗಲಿದೆ. ಹೊಸ ತಂತ್ರಜ್ಞಾನದ ವಾಹನಗಳು ಎಥೆನಾಲ್ ಮಿಶ್ರಣದಲ್ಲಿ ಚಲಿಸಬಲ್ಲವು.

ethanol fuel importance of emission reduction and petrol mixing

ಎಥೆನಾಲ್

ಇಂಟ್ರೋ

ಜಗತ್ತು ಪಳೆಯುಳಿಕೆ ಇಂಧನಗಳ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳು ನಾನಾ ಕಾರ್ಯಾಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಸೌರ ವಿದ್ಯುತ್ , ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣ ಮಾಡುವಂತಹ ಮಹತ್ವದ ಯೋಜನೆಗಳನ್ನೂ ಜಾರಿಗೆ ತರಲಾಗುತ್ತಿದೆ.

ಎಥೆನಾಲ… (ಇ‰2ಏ‰5Oಏ) ಎನ್ನುವುದು ಬಣ್ಣರಹಿತ ಮತ್ತು ಸುಲಭವಾಗಿ ಉರಿಯುವ ಗುಣ ಹೊಂದಿರುವ ಒಂದು ದ್ರವ ಪದಾರ್ಥ. ಇದನ್ನು ಪ್ರಮುಖವಾಗಿ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದ್ದರಿಂದ ಇದನ್ನು ‘ ಜೈವಿಕ ಇಂಧನ ’ ಎಂದು ಕರೆಯಲಾಗುತ್ತದೆ. ಇದನ್ನು ಪೆಟ್ರೋಲ್ ಗೆ ಪರ್ಯಾಯವಾಗಿ ಅಥವಾ ಅದರೊಂದಿಗೆ ಬೆರೆಸಿ ಬಳಸಬಹುದು.

ಎಥೆನಾಲ… ಉತ್ಪಾದನಾ ಪ್ರಕ್ರಿಯೆ (P್ಟಟd್ಠ್ಚಠಿಜಿಟ್ಞ P್ಟಟ್ಚಛಿss)

ಎಥೆನಾಲ… ಅನ್ನು ಪ್ರಮುಖವಾಗಿ ‘ಹುದುಗುವಿಕೆ’ (ಊಛ್ಟಿಞಛ್ಞಿಠಿaಠಿಜಿಟ್ಞ) ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಕಬ್ಬಿನ ರಸ, ಜೋಳಘ್ಕಿ, ಅಕ್ಕಿ ಮತ್ತು ಗೋಧಿ ಅಥವಾ ಕೃಷಿ ತ್ಯಾಜ್ಯಗಳಾದ ಭತ್ತದ ಹುಲ್ಲು, ಮೆಕ್ಕೆಜೋಳದ ದಂಟುಗಳನ್ನು ಕಚ್ಚಾ ವಸ್ತುಗಳಾಗಿ ಬಳಸಲಾಗುತ್ತದೆ. ಕಚ್ಚಾ ವಸ್ತುಗಳಲ್ಲಿರುವ ಸಕ್ಕರೆ ಅಥವಾ ಪಿಷ್ಟವನ್ನು ಯೀಸ್ವ್ ಬಳಸಿ ಆಲ್ಕೋಹಾಲ… ಆಗಿ ಪರಿವರ್ತಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿಸಕ್ಕರೆಯು ಎಥೆನಾಲ… ಮತ್ತು ಕಾರ್ಬನ್ ಡೈಆಕ್ಸೈಡ್ ಆಗಿ ಬದಲಾಗುತ್ತದೆ. ಉತ್ಪತ್ತಿಯಾದ ಮಿಶ್ರಣದಿಂದ ನೀರನ್ನು ತೆಗೆದುಹಾಕಿ, ಶುದ್ಧವಾದ ಎಥೆನಾಲ… ಪಡೆಯಲಾಗುತ್ತದೆ. ವಾಹನಗಳಲ್ಲಿಬಳಸಲು ಇದನ್ನು ಶೇ.99ಕ್ಕಿಂತ ಹೆಚ್ಚು ಶುದ್ಧೀಕರಿಸಲಾಗುತ್ತದೆ.

ಎಥೆನಾಲ… ಬಳಕೆಯ ಪ್ರಯೋಜನಗಳು: ಪೆಟ್ರೋಲ್ ಗೆ ಹೋಲಿಸಿದರೆ ಎಥೆನಾಲ… ಸಂಪೂರ್ಣವಾಗಿ ಉರಿಯುತ್ತದೆ. ಇದರಿಂದ ಕಾರ್ಬನ್ ಮೊನಾಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳ ಬಿಡುಗಡೆ ಕಡಿಮೆಯಾಗುತ್ತದೆ. ಪೆಟ್ರೋಲಿಯಂನಂತೆ ಇದು ಬರಿದಾಗುವ ಸಂಪನ್ಮೂಲವಲ್ಲ. ಪ್ರತಿ ವರ್ಷ ಬೆಳೆಗಳನ್ನು ಬೆಳೆಯುವ ಮೂಲಕ ಇದನ್ನು ತಯಾರಿಸಬಹುದು. ರೈತರು ತಮ್ಮ ಹೆಚ್ಚುವರಿ ಬೆಳೆಗಳನ್ನು (ಕಬ್ಬು, ಧಾನ್ಯ) ಎಥೆನಾಲ… ತಯಾರಿಕೆಗೆ ಮಾರಾಟ ಮಾಡುವುದರಿಂದ ಅವರಿಗೆ ಉತ್ತಮ ಬೆಲೆ ಸಿಗುತ್ತದೆ. ಭಾರತವು ಅತಿ ಹೆಚ್ಚು ಪೆಟ್ರೋಲಿಯಂ ಅನ್ನು ಆಮದು ಮಾಡಿಕೊಳ್ಳುತ್ತದೆ. ಎಥೆನಾಲ… ಬಳಸುವುದರಿಂದ ವಿದೇಶಿ ವಿನಿಮಯದ ಹೊರೆಯನ್ನು ತಗ್ಗಿಸಬಹುದು.

ಭಾರತದ ಎಥೆನಾಲ… ಮಿಶ್ರಣ ಕಾರ್ಯಕ್ರಮ

ಭಾರತ ಸರಕಾರವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯ ತಡೆಗಟ್ಟಲು ‘ಎಥೆನಾಲ… ಮಿಶ್ರಣ ಕಾರ್ಯಕ್ರಮ’ವನ್ನು ಜಾರಿಗೆ ತಂದಿದೆ. 2025-26 ರ ವೇಳೆಗೆ ಪೆಟ್ರೋಲ್ ನಲ್ಲಿಶೇ. 20 ಎಥೆನಾಲ… ಮಿಶ್ರಣ ಮಾಡುವ ಗುರಿಯನ್ನು ಭಾರತ ಹೊಂದಿದೆ. 2013-14ರಲ್ಲಿಕೇವಲ ಶೇ. 1.5 ಇದ್ದ ಮಿಶ್ರಣದ ಪ್ರಮಾಣವು, 2024ರ ವೇಳೆಗೆ ಸುಮಾರು ಶೇ. 15 ತಲುಪಿದೆ. ಈ ವರ್ಷಾಂತ್ಯದಕ್ಕೆ ಗುರಿಯಂತೆ ಶೇ. 20ಕ್ಕೆ ತಲುಪಲಿದೆ. ಎಥೆನಾಲ… ಮಿಶ್ರಣದಿಂದಾಗಿ ಭಾರತವು ಕಳೆದ ಕೆಲವು ವರ್ಷಗಳಲ್ಲಿಸಾವಿರಾರು ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿಸಿದೆ.

ಹೊಸ ತಂತ್ರಜ್ಞಾನ: ಸರಕಾರವು ‘ಫ್ಲೆP್ಸ… ಫ್ಯುಯೆಲ…’ ವಾಹನಗಳನ್ನು ಉತ್ತೇಜಿಸುತ್ತಿದೆ, ಇವುಗಳು ಶೇ. 20ರಿಂದ ಶೇ. 100ವರೆಗಿನ ಯಾವುದೇ ಪ್ರಮಾಣ ಎಥೆನಾಲ… ಮಿಶ್ರಣದಲ್ಲಿಚಲಿಸಬಲ್ಲವು.

ಎಥೆನಾಲ… ಬಳಕೆಯಿಂದ ಎಂಜಿನ್ ದಕ್ಷತೆಯು ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ ಮತ್ತು ಎಂಜಿನ್ ತಂಪಾಗಿರಲು ಸಹಾಯ ಮಾಡುತ್ತದೆ. ಆದರೆ ಹಳೆಯ ವಾಹನಗಳಲ್ಲಿಹೆಚ್ಚಿನ ಪ್ರಮಾಣದ ಎಥೆನಾಲ… ಬಳಸಲು ಎಂಜಿನ್ ಮಾರ್ಪಾಡುಗಳ ಅಗತ್ಯವಿರುತ್ತದೆ.