(ವಿಕ ಎಐ ಲೋಕ)

Contributed byKeerthi Kolgar|Vijaya Karnataka

ನ್ಯೂಟನ್ ಮತ್ತು ಕೊಪರ್ನಿಕಸ್ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಲೇಖನ ವಿವರಿಸುತ್ತದೆ. ಜೆನ್‌-ಎಐ ಮನುಷ್ಯನಂತೆ ಯೋಚಿಸಿ ಹೊಸ ಆವಿಷ್ಕಾರಗಳನ್ನು ತರಲು ಸಾಧ್ಯವಿಲ್ಲ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಮಾತ್ರ ನೀಡುತ್ತದೆ. ಜನರು ಅಂತರ್ಜಾಲದಲ್ಲಿ ಹೆಚ್ಚು ಮಾಹಿತಿ ತುಂಬಿದರೆ, ಜೆನ್‌-ಎಐ ಜ್ಞಾನ ಹೆಚ್ಚುತ್ತದೆ. ಇದು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹುಡುಕಿಕೊಡುವ ಸಾಧನವಾಗಿದೆ.

what if ai existed in newtons time

ನ್ಯೂಟನ್ ನಿನ ಕಾಲದಲ್ಲಿಏನಾದರೂ ಎಐ ಇದ್ದಿದ್ದರೆ ಏನಾಗುತ್ತಿತ್ತು? ಸೇಬು ತಲೆಯ ಮೇಲೆ ಬಿದ್ದ ತಕ್ಷಣ ಚಾಟ್ ಜಿಪಿಟಿ ಅಥವಾ ಕ್ಲಾಡ್ ನಲ್ಲಿ‘‘ಸೇಬು ಏಕೆ ಕೆಳಗೆ ಬಿತ್ತು, ಮೇಲೆ ಯಾಕೆ ಹೋಗಲಿಲ್ಲ?,’’ ಎಂದು ನ್ಯೂಟನ್ ಪ್ರಶ್ನೆ ಕೇಳುತ್ತಿದ್ದ; ಪ್ರತಿಕ್ರಿಯೆಯಾಗಿ ‘‘ಇದು ಜಗತ್ತಿನ ನಿಯಮ,’’ ಎಂದು ಜೆನ್ - ಎಐನಿಂದ ಅದಕ್ಕೆ ಉತ್ತರ ಸಿಗುತ್ತಿತ್ತೇನೋ? ಕೊಪರ್ನಿಕಸ್ ಬದುಕಿದ್ದ ಕಾಲದಲ್ಲಿಕೃತಕ ಬುದ್ಧಿಮತ್ತೆ ಇದ್ದಿದ್ದರೆ, ‘ಭೂಮಿಯೇ ಬ್ರಹ್ಮಾಂಡದ ಕೇಂದ್ರ ಬಿಂದು, ಸೂರ್ಯನು ಭೂಮಿಯ ಸುತ್ತಲೂ ಸುತ್ತುತ್ತಾನೆ’ ಎಂದೇ ಎಐನಿಂದ ಮಾಹಿತಿ ಲಭ್ಯವಾಗುತ್ತಿತ್ತು. ಎಐ ಮನುಷ್ಯನ ಹಾಗೆ ವಾಕ್ಯ ರಚಿಸಬಲ್ಲದು. ಆದರೆ, ಮನುಷ್ಯನ ಹಾಗೆ ಎಂದಿಗೂ ವಿಚಾರ ಮಾಡಿ, ಹೊಸ ಆವಿಷ್ಕಾರಗಳನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಜೆನ್ - ಎಐ ಬಳಸುವಾಗ ನಮಗೆ ಈ ವಿಷಯ ಗೊತ್ತಿರಬೇಕು. ಈ ಹೊತ್ತಿಗೆ ಅಂತರ್ಜಾಲದಲ್ಲಿಯಾವ ಮಾಹಿತಿಯಿದೆಯೋ ಅಷ್ಟೇ ಅದಕ್ಕೆ ಗೊತ್ತಿರುವುದು. ಜನರು ಎಷ್ಟು ಹೆಚ್ಚು ಮಾಹಿತಿಗಳನ್ನು ಅಂತರ್ಜಾಲದಲ್ಲಿತುಂಬುತ್ತಾರೋ ಅಷ್ಟು ಜೆನ್ - ಎಐ ಮಿದುಳಿಗೆ ಜ್ಞಾನ ಸಿಕ್ಕಂತೆ. ಅದರಲ್ಲಿದ್ದದ್ದನ್ನು ನಮಗೆ ಕ್ಷಣಾರ್ಧದಲ್ಲಿಹುಡುಕಿಕೊಡುವ ಕೆಲಸ ಅದರದ್ದು! ಅಷ್ಟೇ. ್ಞ ವಿಕ್ರಂ ಜೋಶಿ

ಎಐ ವಿಶ್ಲೇಷಕರು