ಬೆಂಗಾರದ ಬೆಡಗಿ ಸೋನಂ
ಬಾಲಿವುಡ್ ನ ಫ್ಯಾಷನ್ ಐಕಾನ್ ಸೋನಮ್ ಕಪೂರ್ ಗೋಲ್ಡನ್ ಲುಕ್ ನಲ್ಲಿಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರು ಧರಿಸಿದ್ದ ಚಿನ್ನದ ಬಣ್ಣದ ಉಡುಪು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಅವರು ಧರಿಸಿರುವ ಚಿನ್ನದ ಬಣ್ಣದ ಉಡುಪು ಅತ್ಯಂತ ಆಕರ್ಷಕವಾಗಿದ್ದು, ಅದರ ಮೇಲಿನ ಸೂಕ್ಷ್ಮವಾದ ಕಸೂತಿ ಕೆಲಸವು ಹಳೆಯ ಕಾಲದ ವೈಭವವನ್ನು ನೆನಪಿಸುತ್ತದೆ. ಈ ಉಡುಪಿಗೆ ಪೂರಕವಾಗಿ ಅವರು ಸಾಂಪ್ರದಾಯಿಕ ಮತ್ತು ಭವ್ಯವಾದ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಅವರ ನೆಕ್ಲೇಸ್ ಮತ್ತು ಕಿವಿಯೋಲೆಗಳು ಈ ಲುಕ್ ಗೆ ಹೆಚ್ಚಿನ ಮೆರುಗು ನೀಡಿವೆ. ಬ್ರಾಂಜ್ಡ… ಸ್ಕಿನ್ ಮತ್ತು ವಿಂW್ಡ… ಐಲೈನರ್ ಅವರ ಮೇಕಪ್ ಅನ್ನು ಇಮ್ಮಡಿಸಿತ್ತು.
ಸೋನಂ ಕಪೂರ್ ಅವರು ಯಾವಾಗಲೂ ಹೊಸ ಪ್ರಯೋಗಗಳಿಗೆ ಹೆಸರಾಗಿದ್ದು, ಈ ಗೋಲ್ಡನ್ ಅವತಾರವು ಅವರ ಫ್ಯಾಷನ್ ಪ್ರಜ್ಞೆಗೆ ಮತ್ತೊಂದು ಸಾಕ್ಷಿಯಾಗಿದೆ.

