ಆಪ್ಟಿಕಲ… ಫೈಬರ್ ಕ್ರಾಂತಿ
ಏಪ್ರಿಲ್ 2, 1977
ನಮಗೆ ಇಂದು ಅತಿವೇಗದ ಇಂಟರ್ ನೆಟ್ ಮತ್ತು ವಿಳಂಬವಿಲ್ಲದ ಫೋನ್ ಕರೆಗಳು ಅಭ್ಯಾಸವಾಗಿಬಿಟ್ಟಿವೆ. ಜಾಗತಿಕ ಸಂವಹನ ವ್ಯವಸ್ಥೆಯು ಇಷ್ಟೊಂದು ಸುಧಾರಿಸಲು 1977ರ ಏಪ್ರಿಲ… 22ರಂದು ನಡೆದ ಒಂದು ಘಟನೆ ಪ್ರಮುಖ ಕಾರಣವಾಯಿತು. ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್ ನಲ್ಲಿಮೊದಲ ಬಾರಿಗೆ ಆಪ್ಟಿಕಲ… ಫೈಬರ್ ತಂತ್ರಜ್ಞಾನದ ಮೂಲಕ ಲೈವ್ ಟೆಲಿಫೋನ್ ಕರೆಗಳನ್ನು ಯಶಸ್ವಿಯಾಗಿ ಸಾಧಿಸಲಾಯಿತು.
ಹಿನ್ನೆಲೆ ಮತ್ತು ತಾಂತ್ರಿಕ ಪ್ರಗತಿ: 1970ರ ದಶಕದವರೆಗೆ, ಟೆಲಿಫೋನ್ ಸಂವಹನವು ಹೆಚ್ಚಾಗಿ ತಾಮ್ರದ ತಂತಿಗಳ ಮೇಲೆ ಅವಲಂಬಿತವಾಗಿತ್ತು. ಆದರೆ ತಾಮ್ರದ ತಂತಿಗಳಲ್ಲಿಮಾಹಿತಿಯನ್ನು ಕಳುಹಿಸುವ ಸಾಮರ್ಥ್ಯ ಸೀಮಿತವಾಗಿತ್ತು ಮತ್ತು ದೂರ ಸಾಗಿದಂತೆ ಸಿಗ್ನಲ… ಕ್ಷೀಣಿಸುತ್ತಿತ್ತು.
1960ರಲ್ಲಿಲೇಸರ್ ಸಂಶೋಧನೆಯಾದ ನಂತರ, ಬೆಳಕನ್ನು ಸಂವಹನಕ್ಕೆ ಬಳಸುವ ಸಾಧ್ಯತೆ ಹೆಚ್ಚಾಯಿತು. 1966ರಲ್ಲಿಡಾ. ಚಾರ್ಲ್ಸ್ ಕಾವೊ ಅವರು ಅತಿಶುದ್ಧವಾದ ಗಾಜಿನ ಎಳೆಗಳನ್ನು (ಎ್ಝass ್ಛಜಿಚಿಛ್ಟಿs) ಬಳಸಿದರೆ ಬೆಳಕಿನ ಸಂಕೇತಗಳನ್ನು ದೂರದವರೆಗೆ ಸಾಗಿಸಬಹುದು ಎಂದು ಸಾಬೀತುಪಡಿಸಿದರು. ಇದಕ್ಕಾಗಿ ಅವರಿಗೆ ಮುಂದೆ ನೋಬೆಲ… ಪ್ರಶಸ್ತಿಯೂ ಲಭಿಸಿತು.
1977ರ ಐತಿಹಾಸಿಕ ಘಟನೆ: ಜನರಲ… ಟೆಲಿಫೋನ್ ಮತ್ತು ಎಲೆಕ್ಟ್ರಾನಿP್ಸ… (ಎTಉ) ಕಂಪನಿಯು 1977ರ ಏಪ್ರಿಲ… 22ರಂದು ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್ ನಲ್ಲಿವಿಶ್ವದ ಮೊದಲ ವಾಣಿಜ್ಯಿಕ ಆಪ್ಟಿಕಲ… ಫೈಬರ್ ಸಂವಹನ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಈ ವ್ಯವಸ್ಥೆಯು ಸುಮಾರು 9 ಕಿಲೋಮೀಟರ್ ದೂರದ ಎರಡು ಟೆಲಿಫೋನ್ ವಿನಿಮಯ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸಿತ್ತು. ಇದರಲ್ಲಿಸೆಮಿ ಕಂಡಕ್ಟರ್ ಲೇಸರ್ ಗಳನ್ನು ಬೆಳಕಿನ ಮೂಲವಾಗಿ ಬಳಸಲಾಗಿತ್ತು. ಹಳೆಯ ತಾಮ್ರದ ಕೇಬಲ್ ಗಳಿಗಿಂತ ಸಾವಿರಾರು ಪಟ್ಟು ಹೆಚ್ಚಿನ ಮಾಹಿತಿಯನ್ನು ಸಾಗಿಸುವ ಸಾಮರ್ಥ್ಯ ಇದಕ್ಕಿತ್ತು. ಈ ಯಶಸ್ವಿ ಪ್ರಯೋಗವು ಆಧುನಿಕ ಡಿಜಿಟಲ… ಯುಗಕ್ಕೆ ಅಡಿಪಾಯ ಹಾಕಿತು.
ಆಪ್ಟಿಕಲ… ಫೈಬರ್ ಗಳು ಸೆಕೆಂಡಿಗೆ ಟೆರಾಬೈಟ್ ಗಳಷ್ಟು ದತ್ತಾಂಶವನ್ನು ಸಾಗಿಸಬಲ್ಲವು. ಇದು ಇಂದಿನ 4ಜಿ, 5ಜಿ ಮತ್ತು ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಮೂಲಾಧಾರವಾಗಿದೆ. ಕಾಪರ್ ತಂತಿಗಳಲ್ಲಿಉಂಟಾಗುತ್ತಿದ್ದ ವಿದ್ಯುತ್ಕಾಂತೀಯ ಅಡಚಣೆ (ಘ್ಕಿಉ್ಝಛ್ಚಿಠ್ಟಿಟಞaಜ್ಞಛಿಠಿಜ್ಚಿ ಜ್ಞಿಠಿಛ್ಟ್ಛಿಛ್ಟಿಛ್ಞ್ಚಿಛಿ) ಫೈಬರ್ ನಲ್ಲಿಇರುವುದಿಲ್ಲ. ಇದರಿಂದಾಗಿ ಕರೆಗಳ ಗುಣಮಟ್ಟ ಸ್ಪಷ್ಟವಾಗಿರುತ್ತದೆ. ಇಂದು ಸಮುದ್ರದ ಅಡಿಯಲ್ಲಿಹರಡಿಕೊಂಡಿರುವ ಸಾವಿರಾರು ಕಿಲೋಮೀಟರ್ ಗಳಷ್ಟು ಆಪ್ಟಿಕಲ… ಫೈಬರ್ ಕೇಬಲ್ ಗಳು ಖಂಡಗಳನ್ನು ಕ್ಷಣಾರ್ಧದಲ್ಲಿಬೆಸೆಯುತ್ತಿವೆ.

