ನಿದ್ರೆ

Contributed byshubha.hegde@timesgroup.com|Vijaya Karnataka

ನಿದ್ರಾಹೀನತೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವಾಗಿ ಪೌಷ್ಟಿಕ ಆಹಾರ ಸೇವನೆ ಅಗತ್ಯ. ದೇಹದಲ್ಲಿ ನಿದ್ರೆಗೆ ಸಹಕಾರಿಯಾದ ನ್ಯೂರೋಟ್ರಾನ್ಸ್ಮಿಟರ್‌ಗಳು ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ದೊರೆಯುತ್ತವೆ. ಮಲಗುವ ಮುನ್ನ ಇಂತಹ ಆಹಾರ ಸೇವನೆ ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತದೆ. ಬಾದಾಮಿ, ಆಕ್ರೋಟ್, ಕಿವಿ, ಪನೀರ್, ಖರ್ಜೂರ, ಬಾಳೆಹಣ್ಣು, ಮೀನು, ಹಾಲು, ಟಾರ್ಟ್ ಚೆರ್ರಿ, ಅಣಬೆ, ಮೊಟ್ಟೆಗಳು ನಿದ್ರೆಗೆ ಸಹಕಾರಿ.

best foods for sleep

ಸುಖ ನಿದ್ರೆಗೆ ಬೇಕು ಪೌಷ್ಟಿಕಯುಕ್ತ ಆಹಾರ

ಇಂಟ್ರೋ : ನಿದ್ರೆಯನ್ನು ಸಹಜವಾಗಿಯೇ ಉತ್ತೇಜಿಸಬಹುದಾದ ಆಹಾರದ ಬಗ್ಗೆವಿವರ ಇಲ್ಲಿದೆ.

ಲವಲವಿಕೆ ಸುದ್ದಿಲೋಕ

ನಿದ್ರೆ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣ. ನಿದ್ರೆಗಾಗಿ ಮಾತ್ರೆಗಳ ಮೇಲೆ ಅವಲಂಬಿತರಾಗುವ ಬದಲು ಪೌಷ್ಟಿಕ ಆಹಾರಗಳ ಸೇವನೆ ಅತ್ಯಗತ್ಯ.

ದೇಹದಲ್ಲಿನ ನ್ಯೂರೋಟ್ರಾನ್ಸ್ಮಿಟರ್ ಎಂಬ ರಾಸಾಯನಿಕ ಸಂದೇಶವಾಹಕವು ನಿದ್ರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವು ಆಹಾರಗಳಲ್ಲಿಇದು ನೈಸರ್ಗಿಕವಾಗಿ ಇರುತ್ತದೆ. ಮಲಗುವ ಒಂದು ಗಂಟೆ ಮೊದಲು ಇಂತಹ ಆಹಾರವನ್ನು ಸೇವಿಸುವುದರಿಂದ ಬೇಗ ನಿದ್ರೆ ಬರಲು ಮತ್ತು ಅದರ ಗುಣಮಟ್ಟ ಹೆಚ್ಚಲು ಸಹಕಾರಿ. ಆಹಾರದಲ್ಲಿಹೆಚ್ಚು ಮ್ಯಾಗ್ನೀಸಿಯಮ್ ಸೇರಿಸಿಕೊಳ್ಳುವುದರಿಂದ ಸ್ನಾಯುಗಳು ಸಡಿಲಗೊಂಡು ಮನಸ್ಸು ಶಾಂತವಾಗುತ್ತದೆ. ಅದೇ ರೀತಿ ಟ್ರಿಪ್ಟೊಫಾನ್ ಎಂಬುದು ಅಮೈನೋ ಆಮ್ಲ. ಇದನ್ನೇ ಬಳಸಿಕೊಂಡು ನಮ್ಮ ದೇಹವು ಮೆಲಟೋನಿನ್ ತಯಾರಿಸುತ್ತದೆ. ಟ್ರಿಪ್ಟೊಫಾನ್ ನಾವು ಸೇವಿಸುವ ಆಹಾರದ ಮೂಲಕ ದೊರೆಯುವ ಮೂಲವಸ್ತು. ಟ್ರಿಪ್ಟೊಫಾನ್ ಮೊದಲು ಸೆರೊಟೋನಿನ್ ಆಗಿ ರೂಪುಗೊಂಡಿರುತ್ತದೆ. ಇದನ್ನು ಖುಷಿಯ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ. ಅಂತಿಮವಾಗಿ ಸೆರೊಟೋನಿನ್ ಮೆಲಟೋನಿನ್ ಆಗಿ ಪರಿವರ್ತನೆಗೊಂಡು ನಮ್ಮ ದೇಹಕ್ಕೆ ಈಗ ಮಲಗುವ ಸಮಯ ಎಂಬ ಸಂಕೇತವನ್ನು ನೀಡಿ ನಿದ್ರೆ ಬರುವಂತೆ ಮಾಡುತ್ತದೆ. ನಿದ್ರೆಗೆ ಸಹಕಾರಿಯಾದ ಆಹಾರಗಳ ಬಗ್ಗೆ ವಿವರ ಇಲ್ಲಿದೆ.

ಬಾದಾಮಿ ಮತ್ತು ಆಕ್ರೋಟ್ : ಇವುಗಳಲ್ಲಿಹೆಚ್ಚಿನ ಪ್ರಮಾಣದ ಮ್ಯಾಗ್ನೀಸಿಯಮ್ ಇರುತ್ತದೆ. ಇವು ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ನ ಉತ್ತಮ ಮೂಲ.

ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿರುವ ಆ್ಯಂಟಿ-ಆಕ್ಸಿಡಂಟ್ ಗಳು ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಹೆಚ್ಚಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.

ಪನೀರ್ : ಇದರಲ್ಲಿಟ್ರಿಪ್ಟೊಫಾನ್ ಅಧಿಕವಾಗಿರುತ್ತದೆ. ಇದನ್ನು ಮೆಲಟೋನಿನ್ ಇರುವ ರಾಸ್ಬೆರಿ ಹಣ್ಣುಗಳೊಂದಿಗೆ ಸೇವಿಸಿದರೆ ನಿದ್ದೆಯ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ.

ಖರ್ಜೂರ : ಇವು ಮೆಲಟೋನಿನ್ ನ ಉತ್ತಮ ಮೂಲ. ಖರ್ಜೂರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಟ್ಟು ನಿದ್ದೆ ಸುಗಮವಾಗಲು ನೆರವಾಗುತ್ತದೆ.

ಬಾಳೆಹಣ್ಣು: ಮ್ಯಾಗ್ನೀಸಿಯಮ…, ಪೊಟ್ಯಾಸಿಯಮ್ ಮತ್ತು ಟ್ರಿಪ್ಟೊಫಾನ್ ನಿಂದ ಕೂಡಿದ ಬಾಳೆಹಣ್ಣು ಮನಸ್ಸನ್ನು ನಿರಾಳಗೊಳಿಸುತ್ತದೆ. ಮಲಗುವ ಮುನ್ನ ಸಿಹಿ ಪದಾರ್ಥಗಳ ಬದಲು ಬಾಳೆಹಣ್ಣು ತಿನ್ನುವುದು ಒಳ್ಳೆಯದು.

ಕೊಬ್ಬಿನಾಂಶವಿರುವ ಮೀನು : ಸಲ್ಮನ್ , ಮ್ಯಾಕೆರೆಲ್ ಮತ್ತು ಸಾರ್ಡೀನ್ ನಂತಹ ಮೀನುಗಳಲ್ಲಿವಿಟಮಿನ್ ಆ6 ಸಮೃದ್ಧವಾಗಿದೆ. ಇದು ದೇಹವು ಮೆಲಟೋನಿನ್ ಉತ್ಪಾದಿಸಲು ಪ್ರೇರೇಪಿಸುತ್ತದೆ.

ಹಾಲು: ಹಾಲಿನಲ್ಲಿಟ್ರಿಪ್ಟೊಫಾನ್ ಮತ್ತು ಕ್ಯಾಲ್ಸಿಯಂ ಎರಡೂ ಇರುವುದರಿಂದ ಇದು ನಿದ್ದೆ ಬರಲು ಹಳೆಯ ಕಾಲದಿಂದಲೂ ಅನುಸರಿಸುತ್ತಿರುವ ಅತ್ಯುತ್ತಮ ವಿಧಾನ.

ಟಾರ್ಟ್ ಚೆರ್ರಿ : ಇದು ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ಎರಡನ್ನೂ ನೈಸರ್ಗಿಕವಾಗಿ ಹೊಂದಿದೆ. ಇದರಲ್ಲಿರುವ ಪೈಟೋಕೆಮಿಕಲ್ಸ್ ಟ್ರಿಪ್ಟೊಫಾನ್ ಅಂಶವು ದೇಹದಲ್ಲಿಹೆಚ್ಚು ಕಾಲ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ.

ಅಣಬೆ : ಅಣಬೆಗಳಲ್ಲಿಯೂ ಸಹ ಸ್ವಲ್ಪ ಪ್ರಮಾಣದ ಟ್ರಿಪ್ಟೊಫಾನ್ ಇರುತ್ತದೆ. ವಿಶೇಷವಾಗಿ ಪೋರ್ಟೊಬೆಲ್ಲೊ ಅಥವಾ ಬಿಳಿ ಬಟನ್ ಅಣಬೆ ಉತ್ತಮ.

ಮೊಟ್ಟೆ: ಮೊಟ್ಟೆಗಳು ಟ್ರಿಪ್ಟೊಫಾನ್ ನ ಸಮೃದ್ಧ ಮೂಲ. ಒಂದು ದೊಡ್ಡ ಮೊಟ್ಟೆಯನ್ನು ಸೇವಿಸುವುದರಿಂದ ದಿನಕ್ಕೆ ಬೇಕಾದ ಶೇ. 30 ರಷ್ಟು ಟ್ರಿಪ್ಟೊಫಾನ್ ಲಭ್ಯವಾಗುತ್ತದೆ.