ವಿಟ್ಲ; ಸಾಧಕ ವಿದ್ಯಾರ್ಥಿಗೆ ಯೂತ್ ವಿಂಗ್ ಸನ್ಮಾನ

Contributed byganeshaprasadapandelu@gmail.com|Vijaya Karnataka

ವಿಟ್ಲದಲ್ಲಿ ಸಾಧನೆಗೈದ ವಿದ್ಯಾರ್ಥಿಯೊಬ್ಬರಿಗೆ ಸನ್ಮಾನ ನಡೆಯಿತು. ಅಬ್ದುಲ್ ಸವಾದ್ ಎಂಬ ವಿದ್ಯಾರ್ಥಿ ಮೈಸೂರು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತೋಡಾರು ಶಂಸುಲ್ ಉಲಮಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರನ್ನು ವಿಟ್ಲ ಜಮಾಅತ್ ಯೂತ್ ವಿಂಗ್ ಗೌರವಿಸಿದೆ. ಮಸೀದಿ ಅಧ್ಯಕ್ಷರು, ಯೂತ್ ವಿಂಗ್ ಅಧ್ಯಕ್ಷರು ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

youth wing honors meritorious student in vitla

ವಿಕ ಸುದ್ದಿಲೋಕ ವಿಟ್ಲ

ವಿಟ್ಲಕೇಂದ್ರ ಜುಮಾ ಮಸೀದಿಗೊಳಪಟ್ಟ ಅಬ್ದುಲ್ ಸವಾದ್ ಎಂಬ ವಿದ್ಯಾರ್ಥಿಯು ಮೈಸೂರು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಯಲ್ಲಿಪ್ರಥಮ ಸ್ಥಾನ ಪಡೆದಿದ್ದು, ತೋಡಾರು ಶಂಸುಲ್ ಉಲಮಾ ಕಾಲೇಜ್ ವಿದ್ಯಾರ್ಥಿಯಾಗಿರುವ ಅವರನ್ನು ವಿಟ್ಲಜಮಾಅತ್ ಯೂತ್ ವಿಂಗ್ ವತಿಯಿಂದ ಸನ್ಮಾನಿಸಲಾಯಿತು.

ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಹಾಗೂ ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು ನೇತೃತ್ವದಲ್ಲಿನಡೆದ ಸಮಾರಂಭದಲ್ಲಿ ಖತೀಬ್ ಆರಿಫ್ ಬಾಖವಿ, ಮಸೀದಿ ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಯೂತ್ ವಿಂಗ್ ಉಪಾಧ್ಯಕ್ಷ ಬಾತಿಷ್ ಮೇಗಿನಪೇಟೆ ಝುಬೈರ್ , ಮಾಸ್ಟರ್ ಇಕ್ಬಾಲ್ ಶೀತಲ್ , ಬಿ.ಎಂ.ಅಬ್ದುಲ್ ಖಾದರ್ , ಮೊಯ್ದೀನ್ ಕೂಜಪ್ಪಾಡಿ, ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.

ಪೊಟೋ|..1304ವಿಟಿಎಲ್ ಸನ್ಮಾನ

ಅಬ್ದುಲ್ ಸವಾದ್ ಅವರನ್ನು ವಿಟ್ಲಜಮಾಅತ್ ಯೂತ್ ವಿಂಗ್ ವತಿಯಿಂದ ಸನ್ಮಾನಿಸಲಾಯಿತು.