( ಬೇಸಿಗೆ ಬಳಲಿಕೆ ಭಾಗ 7)
ಸದ್ಯಕ್ಕಿಲ್ಲತೊಂದರೆ, ಪ್ರತಿ ವಾರ ಟಾಸ್ಕ್ ಫೋರ್ಸ್ ಸಭೆ, ಬರ ನಿರ್ವಹಿಸಲು ತಾಲೂಕು ಆಡಳಿತ ಸಜ್ಜು
ಸೋಮಶೇಖರ ಹೆಚ್ ಸಿ ಹುಳಿಯಾರು
shಛಿka್ಟಜ್ಟaphಜ್ಚಿs1ಃಜಞaಜ್ಝಿ.್ಚಟಞ
ಬೇಸಿಗೆಯ ಆರಂಭದಲ್ಲೇ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲವು ಕಡೆಗಳಲ್ಲಿಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಬಿಸಿ ತಟ್ಟಿದೆ. ತಾಲೂಕಿನ ಬಹುತೇಕ ಭಾಗಗಳಲ್ಲಿಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಬೋರ್ ವೆಲ್ ಗಳಲ್ಲಿನೀರಿನ ಇಳುವರಿ ಕಡಿಮೆಯಾಗತೊಡಗಿದೆ. ಹೇಮಾವತಿ ನೀರಿನಿಂದಾಗಿ ಕೆಲವು ಭಾಗಗಳಲ್ಲಿಅಷ್ಟೇನೂ ಸಮಸ್ಯೆ ಕಾಣಿಸಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿಮಳೆ ಬಾರದೇ ಬಿಸಿಲಿನ ಪರಿಸ್ಥಿತಿಯೇ ಮುಂದುವರಿದರೆ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಖಾಸಗಿ ಬೋರ್ ವೆಲ್ ಗಳೇ ಆಸರೆ:
ತಾಲೂಕಿನ ಬರಕನಹಾಲು, ಮುದ್ದೇನಹಳ್ಳಿ, ಕಂದಿಕೆರೆ, ಕೆಂಕೆರೆ, ತಿಮ್ಮನಹಳ್ಳಿ, ತೀರ್ಥಪುರ, ಗೋಡೆಕೆರೆ, ರಾಮನಹಳ್ಳಿ ಹಾಗೂ ಹೊನ್ನೆಬಾಗಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನೀರಿನ ಸಮಸ್ಯೆ ತೀವ್ರವಾಗಿದೆ. ಬಾಲದೇವರಹಟ್ಟಿ, ಲಕ್ಮೇನಹಳ್ಳಿ, ಬಲ್ಲೇನಹಳ್ಳಿ ಕಾಲೋನಿ, ಬೆಳ್ಳಾರದ ಮೇಗಲ ಗೊಲ್ಲರಹಟ್ಟಿ, ಗಂಗಾನಾಯಕನಹಳ್ಳಿ, ಗೆಂಡೆಬಾಲಯ್ಯನಹಟ್ಟಿ, ಕರಡಿಸಾಬರಪಾಳ್ಯ, ಬಡಕೆಗುಡ್ಲುಬೋವಿ ಕಾಲೋನಿ, ಕಾತ್ರಿಕೆಹಾಲ್ , ದೊಡ್ಡರಾಂಪುರ, ಸಿದ್ದನಕಟ್ಟೆ, ಹೊಸಹಳ್ಳಿ, ರಾಮನಹಳ್ಳಿ ಹಾಗೂ ಹನುಮಂತನಹಳ್ಳಿ ಗ್ರಾಮಗಳಲ್ಲಿಬೋರ್ ವೆಲ್ ಗಳೇ ಆಸರೆಯಾಗಿವೆ. ಬೋರ್ ವೆಲ್ ಬತ್ತುತಿರುವುದರಿಂದ ಅನಿವಾರ್ಯವಾಗಿ ಖಾಸಗಿ ಬೋರ್ ವೆಲ್ ಗಳಿಂದ ನೀರು ಪಡೆದು ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿಯೇ ಪ್ರಥಮ ಟಾಸ್ಕ್ ಪೋರ್ಸ್ ಸಭೆ:
ಈಗಾಗಲೇ ಜಿಲ್ಲೆಯಲ್ಲಿಪ್ರಥಮ ಬಾರಿಗೆ ಮಾರ್ಚ್ 23ರಂದು ಶಾಸಕ ಸಿ.ಬಿ. ಸುರೇಶ್ ಬಾಬು ಅಧ್ಯಕ್ಷತೆಯಲ್ಲಿಎಲ್ಲಾಆಧಿಕಾರಿಗಳ ಜತೆ ಬರ ನಿರ್ವಹಣೆ ಟಾಸ್ಕ್ ಪೋರ್ಸ್ ಸಭೆ ನಡೆದಿದೆ. ಬೇಸಿಗೆಯಲ್ಲಿಗ್ರಾಮೀಣ ಪ್ರದೇಶ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಕಂಡು ಬರುವ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಲಭ್ಯತೆ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಅವಶ್ಯಕತೆ ಬಂದರೆ ಹೊಸ ಬೋರ್ ವೆಲ್ ಕೊರೆಸಲು ಆಡಳಿತ ಸಿದ್ಧವಾಗಿದೆ. ಜಾನುವರುಗಳಿಗೆ 46 ವಾರಕ್ಕೆ ಆಗುವಷ್ಟು ಮೇವು ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಪ್ರತಿ ಸೋಮವಾರ ಟಾಸ್ಕ್ ಫೋರ್ಸ್ ಸಭೆ ಕರೆಯಲು ತೀರ್ಮಾನ ಮಾಡಲಾಗಿದೆ
ಕೆಟ್ಟಿರುವ ಆರ್ ಒ ಪ್ಲಾಂಟ್ ಗಳು:
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂಆರ್ ಒ ಪ್ಲಾಂಟ್ ನ ಶುದ್ಧ ಕುಡಿಯುವ ನೀರಿನ ಮೇಲೆಯೇ ಜನರು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಆದರೆ, ತಾಲೂಕಿನ ಬಹುತೇಕ ಆರ್ ಒ ಪ್ಲಾಂಟ್ ಗಳು ಕೆಟ್ಟು ಹೋಗಿವೆ. ಸುತ್ತಮುತ್ತಲಿನ ದೂರದ ಆರ್ ಒ ಪ್ಲಾಂಟ್ ಗೆ ಹೋಗಿ ನೀರು ತರುವ ದುಸ್ಥಿತಿ ಉಂಟಾಗಿದೆ. ಆರ್ ಒ ಪ್ಲಾಂಟ್ ಗಳನ್ನು ಸಮರೋಪಾದಿಯಲ್ಲಿದುರಸ್ತಿ ಮಾಡಿಸಿ ಕುಡಿಯುವ ನೀರಿನ ಬವಣೆ ನೀಗಿಸಬೇಕಿದೆ.
ಕೋಟ್ :
ತಾಲೂಕಿನ ಆರು ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಇದೆ. ಖಾಸಗಿ ಬೋರ್ ವೆಲ್ ನಿಂದ ನೀರು ಪೂರೈಕೆ ಮಾಡಿದ್ದೇವೆ. ದಬ್ಬೇಘಟ್ಟದ ಅಲೆಮಾರಿ ಜನಾಂಗ ವಾಸಿಸುವ ಕಡೆ ಅಲ್ಪ ಮಟ್ಟದ ತೊಂದರೆ ಇತ್ತು. ಆದರೆ, ಆ ಭಾಗದಲ್ಲಿಟ್ರ್ಯಾಕ್ಟರ್ ನಲ್ಲಿನೀರು ಪೂರೈಕೆ ಮಾಡಲಾಗಿದೆ.
- ಮಮತಾ ಎಂ., ತಹಸೀಲ್ದಾರ್ , ಚಿ.ನಾ.ಹಳ್ಳಿ
ಪೋಟೋ ಇದೆ.
14 ಸಿಎನ್ ಎಚ್ 1: ಎಐ ಚಿತ್ರ
2. ಮಮತಾ ಎಂ., ತಹಸೀಲ್ದಾರ್

