ಇನ್ಸುಲಿನ್
ಸ್ಲಗ್ : ಮೆಡಿಕಲ್ ಮಿರಾಕಲ್
ಇಂಟ್ರೋ
ಇಂದು ಕೋಟ್ಯಂತರ ಜನರು ಮಧುಮೇಹದ ನಡುವೆಯೂ ಸಕ್ರಿಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ 1923ರ ಐತಿಹಾಸಿಕ ಘಟನೆಯೇ ಕಾರಣ. ಅಂದು ಮಧುಮೇಹಿಗಳ ಪಾಲಿನ ಸಂಜೀವಿನಿಯಾದ ಇನ್ಸುಲಿನ್ ಆವಿಷ್ಕಾರವಾಗಿತ್ತು.
1920ರ ದಶಕದ ಮೊದಲು, ‘ಟೈಪ್ 1’ ಮಧುಮೇಹ ಪತ್ತೆಯಾದ ರೋಗಿಗಳಿಗೆ ಬದುಕುಳಿಯುವ ಭರವಸೆ ಬಹಳ ಕಡಿಮೆ ಇತ್ತು. ಆ ಸಮಯದಲ್ಲಿಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ರೋಗಿಗಳು ಕೇವಲ ಹಸಿವಿನಿಂದ ಇರಬೇಕಾದ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಬೇಕಿತ್ತು, ಆದರೂ ಅವರು ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿಜೀವ ಕಳೆದುಕೊಳ್ಳುತ್ತಿದ್ದರು. ಮಧುಮೇಹ ಎನ್ನುವುದು ಆ ಕಾಲದಲ್ಲಿಒಂದು ಮರಣಶಾಸನದಂತೆಯೇ ಇತ್ತು.
ಇನ್ಸುಲಿನ್ ಆವಿಷ್ಕಾರ: 1921ರಲ್ಲಿಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದಲ್ಲಿಫ್ರೆಡೆರಿಕ್ ಬ್ಯಾಂಟಿಂಗ್ ಮತ್ತು ಅವರ ಸಹಾಯಕ ಚಾರ್ಲ್ಸ್ ಬೆಸ್ವ್ , ಪ್ರೊಫೆಸರ್ ಜೆ.ಜೆ.ಆರ್ . ಮ್ಯಾಕ್ಲಿಯೋಡ್ ಅವರ ಮಾರ್ಗದರ್ಶನದಲ್ಲಿಇನ್ಸುಲಿನ್ ಅನ್ನು ಬೇರ್ಪಡಿಸುವಲ್ಲಿಯಶಸ್ವಿಯಾದರು. ನಂತರ ಜೈವಿಕ ರಸಾಯನಶಾಸ್ತ್ರಜ್ಞ ಜೇಮ್ಸ… ಕಾಲಿಪ್ ಅವರು ಈ ಇನ್ಸುಲಿನ್ ಅನ್ನು ಮಾನವನ ದೇಹಕ್ಕೆ ನೀಡಲು ಯೋಗ್ಯವಾಗುವಂತೆ ಶುದ್ಧೀಕರಿಸಿದರು.
ಜಗತ್ತಿಗೆ ಲಭ್ಯವಾದ ಇನ್ಸುಲಿನ್ : 1922ರಲ್ಲಿಮೊದಲ ಬಾರಿಗೆ ಮಾನವನ ಮೇಲೆ ಇನ್ಸುಲಿನ್ ಪ್ರಯೋಗ ಯಶಸ್ವಿಯಾದ ನಂತರ, ಅದರ ಬೇಡಿಕೆ ಹೆಚ್ಚಾಯಿತು. 1923ರಲ್ಲಿಪ್ರಮುಖ ಬೆಳವಣಿಗೆಗಳು ನಡೆದವು:
‘ಎಲಿ ಲಿಲ್ಲಿ’ (ಉ್ಝಜಿ ಔಜ್ಝ್ಝಿy) ಎಂಬ ಔಷಧ ಕಂಪನಿಯು ದೊಡ್ಡ ಪ್ರಮಾಣದಲ್ಲಿಇನ್ಸುಲಿನ್ ಉತ್ಪಾದಿಸಲು ಪ್ರಾರಂಭಿಸಿತು. 1923ರ ಏಪ್ರಿಲ್ ನಲ್ಲಿಹೊತ್ತಿಗೆ, ಇನ್ಸುಲಿನ್ ಆಸ್ಪತ್ರೆಗಳು ಮತ್ತು ವೈದ್ಯಕೀಯ ಮಳಿಗೆಗಳಲ್ಲಿಸಾಮಾನ್ಯವಾಗಿ ಲಭ್ಯವಾಗತೊಡಗಿತು. ಇದು ಸಾವಿನ ದವಡೆಯಲ್ಲಿದ್ದ ಸಾವಿರಾರು ರೋಗಿಗಳಿಗೆ ಹೊಸ ಜೀವದಾನ ನೀಡಿತು. ಇದೇ ವರ್ಷ (1923), ಈ ಅದ್ಭುತ ಆವಿಷ್ಕಾರಕ್ಕಾಗಿ ಫ್ರೆಡೆರಿಕ್ ಬ್ಯಾಂಟಿಂಗ್ ಮತ್ತು ಮ್ಯಾಕ್ಲಿಯೋಡ್ ಅವರಿಗೆ ವೈದ್ಯಕೀಯ ಕ್ಷೇತ್ರದ ನೋಬೆಲ… ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಿಕಿತ್ಸೆಯಲ್ಲಿಉಂಟಾದ ಬದಲಾವಣೆಗಳು
ಇನ್ಸುಲಿನ್ ಲಭ್ಯತೆಯು ಮಧುಮೇಹದ ನಿರ್ವಹಣೆಯನ್ನು ಸಂಪೂರ್ಣವಾಗಿ ಬದಲಿಸಿತು. ಮಧುಮೇಹದಿಂದಾಗಿ ಕೆಲವೇ ದಿನಗಳಲ್ಲಿಸಾಯುತ್ತಿದ್ದ ಮಕ್ಕಳು ಮತ್ತು ಯುವಕರು ಇನ್ಸುಲಿನ್ ನೆರವಿನಿಂದ ದಶಕಗಳ ಕಾಲ ಬದುಕುವಂತಾಯಿತು. ರೋಗಿಗಳು ಹಸಿವಿನಿಂದ ಉಪವಾಸ ಮಾಡುವ ಅಗತ್ಯವಿಲ್ಲದೆ, ನಿಯಂತ್ರಿತ ಆಹಾರದೊಂದಿಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಯಿತು. ಇನ್ಸುಲಿನ್ ಹಾರ್ಮೋನ್ ಚಿಕಿತ್ಸೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆಯಾಗಿ ಹೊರಹೊಮ್ಮಿತು.
ಒಂದು ಡಾಲರ್ ಪೇಟೆಂಟ್ ಮಾರಾಟ: ಇನ್ಸುಲಿನ್ ಸಂಶೋಧಕರು ಇದರ ಪೇಟೆಂಟ್ ಅನ್ನು ಕೇವಲ ಒಂದು ಡಾಲರ್ ಗೆ ಟೊರೊಂಟೊ ವಿಶ್ವವಿದ್ಯಾಲಯಕ್ಕೆ ಮಾರಾಟ ಮಾಡಿದರು. ಇನ್ಸುಲಿನ್ ನನಗೆ ಸೇರಿದ್ದಲ್ಲ, ಇದು ಜಗತ್ತಿಗೆ ಸೇರಿದ್ದು ಎಂಬುದು ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಉದಾತ್ತ ಚಿಂತನೆಯಾಗಿತ್ತು. ಇದರಿಂದಾಗಿ ಈ ಚಿಕಿತ್ಸೆಯು ಸಾಮಾನ್ಯ ಜನರಿಗೂ ತಲುಪಲು ಸಾಧ್ಯವಾಯಿತು.
ಬಾಕ್ಸ್
ಇನ್ಸುಲಿನ್ ಬೆಳವಣಿಗೆ..
1921ರಲ್ಲಿಫ್ರೆಡೆರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ವ್ ಅವರು ಮೊದಲು ನಾಯಿಗಳ ಮೇದೋಜ್ಜೀರಕ ಗ್ರಂಥಿಯಿಂದ ಈ ಸಾರವನ್ನು ಹೊರತೆಗೆದರು. ಇದನ್ನು ಅವರು ಮೊದಲು ಐಲೆಟಿನ್ (ಐs್ಝಛಿಠಿಜ್ಞಿ) ಎಂದು ಕರೆದಿದ್ದರು. ನಾಯಿಗಳಿಂದ ಹೆಚ್ಚಿನ ಪ್ರಮಾಣದಲ್ಲಿಇನ್ಸುಲಿನ್ ತಯಾರಿಸುವುದು ಅಸಾಧ್ಯವಾಗಿತ್ತು. ಹಾಗಾಗಿ, ವಾಣಿಜ್ಯ ಬಳಕೆಗೆ ಮತ್ತು ಹೆಚ್ಚಿನ ಸಂಶೋಧನೆಗೆ ಕಸಾಯಿಖಾನೆಗಳಿಂದ ಪಡೆದ ದನ ಮತ್ತು ಹಂದಿಗಳ ಮೇದೋಜ್ಜೀರಕ ಗ್ರಂಥಿಗಳನ್ನು ಬಳಸಲಾಯಿತು.
ಪ್ರಾಣಿಗಳಿಂದ ಪಡೆದ ಈ ಸಾರವನ್ನು ನೇರವಾಗಿ ಮನುಷ್ಯರಿಗೆ ನೀಡಲು ಸಾಧ್ಯವಿರಲಿಲ್ಲ. ಏಕೆಂದರೆ ಅದು ಅಲರ್ಜಿ ಅಥವಾ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿತ್ತು. ನಂತರ ಜೇಮ್ಸ… ಕಾಲಿಪ್ ಅವರು ಈ ಸಾರವನ್ನು ರಾಸಾಯನಿಕವಾಗಿ ಶುದ್ಧೀಕರಿಸುವ ವಿಧಾನವನ್ನು ಕಂಡುಹಿಡಿದರು. ಇದರಿಂದಾಗಿ 1922-23ರ ಅವಧಿಯಲ್ಲಿಮನುಷ್ಯರ ಮೇಲೆ ಬಳಸಲು ಸುರಕ್ಷಿತವಾದ ಇನ್ಸುಲಿನ್ ಸಿದ್ಧವಾಯಿತು.
1980ರ ದಶಕದವರೆಗೆ ಪ್ರಾಣಿಜನ್ಯ ಇನ್ಸುಲಿನ್ ಬಳಕೆಯಲ್ಲಿತ್ತು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದ್ದು, ಜೈವಿಕ ತಂತ್ರಜ್ಞಾನದ (ಆಜಿಟಠಿಛ್ಚಿh್ಞಟ್ಝಟಜy) ಮೂಲಕ ಬ್ಯಾಕ್ಟೀರಿಯಾಗಳನ್ನು (ಉ. ್ಚಟ್ಝಜಿ) ಬಳಸಿ ಪ್ರಯೋಗಾಲಯದಲ್ಲಿಮಾನವ ಇನ್ಸುಲಿನ್ ಅನ್ನು ಹೋಲುವ ಸಿಂಥೆಟಿಕ್ ಇನ್ಸುಲಿನ್ ತಯಾರಿಸಲಾಗುತ್ತಿದೆ.

