ತವರಲ್ಲಿಆರ್ ಸಿಬಿಗೆ ಹ್ಯಾಟ್ರಿಕ್ ಜಯ

Contributed byHarsha Vardhana|Vijaya Karnataka
Vijay Karnataka

ರಸಿಖ್ , ಭುವನೇಶ್ವರ್ ದಾಳಿಗೆ ಲಖನೌ ನಿರುತ್ತರ, ಮತ್ತೆ ಕೊಹ್ಲಿಬ್ಯಾಟಿಂಗ್ ವೈಭವ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲಗೈ ವೇಗಿಗಳಾದ ರಸಿಖ್ ಸಲಾಮ್ ದಾರ್ ಮತ್ತು ಭುವನೇಶ್ವರ್ ಕುಮಾರ್ ಬಿರುಗಾಳಿಯಂತೆ ಬೌಲಿಂಗ್ ಮಾಡಿದರು. ಇದನ್ನು ತಡೆಯಲು ಸೂಪರ್ ಜಯಂಟ್ಸ್ ಬ್ಯಾಟರ್ ಗಳು ನಿರುತ್ತರಗೊಂಡರು. ಪರಿಣಾಮ ಆರ್ ಸಿಬಿ ತಂಡ ಐದು ವಿಕೆಟ್ ಗಳಿಂದ ಲಖನೌ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಒಟ್ಟಾರೆ ನಾಲ್ಕನೇ ಜಯ ಗಳಿಸಿದ ಆರ್ ಸಿಬಿ, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಮೊದಲ ಸ್ಥಾನಕ್ಕೇರಿತು. ಅತ್ತ ಲಖನೌ 3ನೇ ಸೋಲಿಗೆ ಗುರಿಯಾಯಿತು.

ರಿಷಭ್ ಪಂತ್ ಬಳಗ ನೀಡಿದ 147 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಳೆದ ಬಾರಿಯ ಚಾಂಪಿಯನ್ ಆರ್ ಸಿಬಿ, ಕೇವಲ 29 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಈ ಮೂಲಕ ತವರು ಮೈದಾನದಲ್ಲಿಸತತ ಮೂರನೇ ಜಯ ದಾಖಲಿಸಿತು. ಇದಕ್ಕೂ ಮುನ್ನ ಹಾಲಿ ಋುತುವಿನಲ್ಲಿಹೈದರಾಬಾದ್ ಮತ್ತು ಚೆನ್ನೈ ತಂಡಗಳ ವಿರುದ್ಧ ಜಯ ಗಳಿಸಿತ್ತು.

ಎರಡನೇ ಓವರ್ ನಲ್ಲೇ ಫಿಲ್ ಸಾಲ್ಟ… ಅವರನ್ನು ಆರ್ ಸಿಬಿ ಕಳೆದುಕೊಂಡಿತು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡ ಕೊಹ್ಲಿ, ಮತ್ತೆ ಬ್ಯಾಟಿಂಗ್ ವೈಭವವನ್ನು ಉಣಬಡಿಸಿದರು. ರನ್ ಮಷಿನ್ ವಿರಾಟ್ ಆಟವನ್ನು ಕಣ್ತುಂಬಿಸಿಕೊಂಡ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು. ಕೊಹ್ಲಿ34 ಎಸೆತಗಳಲ್ಲಿ6 ಫೋರ್ , 1 ಸಿಕ್ಸರ್ ಸಹಿತ 49 ರನ್ ಗೆ ಔಟಾದರೂ ಎರಡನೇ ವಿಕೆಟ್ ಗೆ 57 ರನ್ ಗಳ ಮಹತ್ವದ ಜತೆಯಾಟ ನಿರ್ವಹಿಸಿ, ತಂಡದ ನಾಲ್ಕನೇ ಗೆಲುವಿಗೆ ವೇದಿಕೆ ನಿರ್ಮಿಸಿದರು.

9 ಎಸೆತಗಳಲ್ಲಿ23 ರನ್ ಸಿಡಿಸಿದ ವಿಕೆಟ್ ಕೀಪರ್ ಜಿತೇಶ್ ಶರ್ಮ, ಮುಕುಲ್ ಗೆ ಕ್ಯಾಚಿತ್ತರು. ಈ ಮಧ್ಯೆ ಕ್ರೀಸ್ ಗೆ ಆಗಮಿಸಿದ ಟಿಮ್ ಡೇವಿಡ್ (14*) ಮತ್ತು ರೊಮಾರಿಯೊ ಶೆಫರ್ಡ್ (14*) ಪಂದ್ಯದ ಗೆಲುವನ್ನು ಸುಲಭಗೊಳಿಸಿದರು. ಲಖನೌ ತಂಡದ ಪರ ಪ್ರಿಸ್ಸ್ ಯಾದವ್ (32ಕ್ಕೆ 2) ಮತ್ತು ಆವೇಶ್ ಖಾನ್ (23ಕ್ಕೆ 2) ಗಮನ ಸೆಳೆದರೆ, ದಿಗ್ವೇಶ್ ಸಿಂಗ್ ರಾಠಿ (51ಕ್ಕೆ 0) ದುಬಾರಿ ಬೌಲರ್ ಎನಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 15.1 ಓವರ್ ಗಳಲ್ಲಿ5 ವಿಕೆಟ್ ಗೆ 149

ಫಿಲಿಪ್ ಸಾಲ್ಟ… ಬಿ ಪ್ರಿಸ್ಸ್ ಯಾದವ್ 07

ವಿರಾಟ್ ಕೊಹ್ಲಿ ಸಿ ನಿಕೋಲ್ ಬಿ ಆವೇಶ್ 49

ದೇವದತ್ ಪಡಿಕ್ಕಲ್ ಸಿ ಹಿಮತ್ ಬಿ ಆವೇಶ್ 10

ರಜತ್ ಪಾಟೀದಾರ್ ಸಿ ದಿಗ್ವೇಶ್ ಬಿ ಪ್ರಿಸ್ಸ್ 27

ಜಿತೇಶ್ ಶರ್ಮ ಸಿ ಮುಕುಲ್ ಬಿ ಪ್ರಿಸ್ಸ್ 23

ಟಿಮ್ ಡೇವಿಡ್ ಔಟಾಗದೇ 14

ರೊಮಾರಿಯೊ ಶೆಫರ್ಡ್ ಔಟಾಗದೇ 14

ಇತರ: (ಲೆಗ್ ಬೈ 4, ವೈಡ್ 1) 05

ವಿಕೆಟ್ ಪತನ: 1-9, 2-66, 3-86, 4-121, 5-122.

ಬೌಲಿಂಗ್ ವಿವರ

ಮೊಹಮ್ಮದ್ ಶಮಿ 3 0 30 0

ಪ್ರಿಸ್ಸ್ ಯಾದವ್ 3 0 32 3

ದಿಗ್ವೇಶ್ ಸಿಂಗ್ ರಾಠಿ 4 0 51 0

ಆವೇಶ್ ಖಾನ್ 4 0 23 2

ಜಾಜ್ ರ್ ಲಿಂಡೆ 1.1 0 9 0