ವೈಭವದ ನೀಲಕಂಠ ಕಾಳೇಶ್ವರ ರಥೋತ್ಸವ

Contributed byguttedar.shiva2013@gmail.com|Vijaya Karnataka

ಕಾಳಗಿ ಪಟ್ಟಣದಲ್ಲಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವವು ಭವ್ಯ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಬೆಳಿಗ್ಗೆ ಮಹಾರುದ್ರಾಭಿಷೇಕ, ಧಾರಾಭಿಷೇಕ ಜರುಗಿತು. ಸಂಜೆ ಗ್ರಾಮದ ಪ್ರಮುಖ ಮನೆತನಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳ ಮೆರವಣಿಗೆ ನಡೆಯಿತು. ಪೂಜ್ಯರ ಸಮ್ಮುಖದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥೋತ್ಸವದಲ್ಲಿ ಪಾಲ್ಗೊಂಡರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

grand golden chariot festival kalagi

15ಕಾಳಗಿ ಪಟ:1: ಕಾಳಗಿ ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವವು ಬುಧವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ವಿಜೃಂಭಣೆಯಿಂದ ಜುರುಗಿತು.

* ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ ಕೀ ಜೈ

ವೈಭವದ ನೀಲಕಂಠ ಕಾಳೇಶ್ವರ ರಥೋತ್ಸವ

ವಿಕ ಸುದ್ದಿಲೋಕ ಕಾಳಗಿ

ಪಟ್ಟಣದ ಸುಕ್ಷೇತ್ರ ದಕ್ಷಿಣ ಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯೆ ಭವ್ಯ ರಥೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ತ ಬೆಧಿಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ಲಿಂಗಕ್ಕೆ ಮಹಾರುದ್ರಾಭಿಷೇಕ, ಧಾರಾಭಿಷೇಕ ಜರುಗಿತು. ನಂತರ ಗ್ರಾಮದ ಮುಧಿಖಂಡರು ಹಾಗೂ ಪುರವಂತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾನ ಆವರಣದಲ್ಲಿವೀರಭದ್ರೇಶ್ವರರ ಹೆಸರಿನ ಮೇಲೆ ಪುರುವಂತರೊಂದಿಗೆ ಭಕ್ತರು ಅಗ್ನಿ ಪ್ರವೇಶ ಮಾಡಿ ತಮ್ಮ ಹರಕೆ ತೀರಿಸಿದರು.

ಸಂಜೆ ಗ್ರಾಮದ ಪ್ರಮುಖ ಮನೆತನಗಳಾದ ಜೈಶಂಕರ ಮಾಲಿಪಾಟೀಲ್ , ಶರಣಗೌಡ ಪೊಲೀಸ ಪಾಟೀಲ್ , ಶಿವಕುಮಾರ ಪಂಚಾಳ, ಪ್ರಭಾಕರ ಮಾಕಪನೊರ, ಗುರುಲಿಂಗಯ್ಯ ಮಠಪತಿ ಅವರ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳನ್ನು ಡೊಳ್ಳು, ಭಾಜ, ಭಜಂತ್ರಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬಂದು ತಲುಪಿತು.

ನಂತರ ಕಾಳಗಿ ಸಂಸ್ಥಾನ ಹಿರೇಮಠದ ಪೂಜ್ಯ ನೀಲಕಂಠ ಮರಿದೇವರು, ಭರತನೂರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿರಥಕ್ಕೆ ಪೂಜೆ ಸಲ್ಲಿಸಲಾಯಿತು.

ರಥವು ಸ್ಥಳ ಬಿಡುತ್ತಿದ್ದಂತೆ ನೆರೆದ ಸಾವಿರಾರು ಭಕ್ತರು ನೀಲಕಂಠ ಕಾಳೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಉತ್ತುತ್ತಿ, ಬಾಳೆಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಪುನೀತರಾದರು.

ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಶರಣಗೌಡ ಪೊಲೀಸ ಪಾಟೀಲ್ , ಯುವ ಮುಖಂಡ ನೀಲಕಂಠ ಗುತ್ತೇದಾರ, ಪಂಚ ಗ್ಯಾರಂಟಿ ಅನುಷ್ಠಾನ ಸಿಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ವಿಶ್ವನಾಥ ವನಮಾಲಿ, ಜೈಶಂಕರ ಮಾಲಿಪಾಟೀಲ್ , ಶಿವಶರಣಪ್ಪ ಗುತ್ತೇದಾರ, ಪರಮೇಶ್ವರ ಮಡಿವಾಳ, ರವಿದಾಸ ಪತಂಗೆ, ಬಸಯ್ಯಸ್ವಾಮಿ ಪ್ಯಾಟಿಮಠ, ಸಂತೋಷ ಪತಂಗೆ, ಡಾ. ಮಲ್ಲಿಕಾರ್ಜುನ ಗಾಜರೆ, ಗೌರಿಶಂಕರ ಗುತ್ತೇದಾರ, ಮಹೇಶ ಗುತ್ತೇದಾರ, ದತ್ತು ಗುತ್ತೇದಾರ, ಗುರು ಮದ್ದೂರ, ರಮೇಶ ಕಿಟ್ಟದ, ಪ್ರಶಾಂತ ಕದಮ್ , ಜಗದೀಶ ಪಾಟೀಲ್ , ಭೀಮರಾಯ ಮಲಘಾಣ, ಪುರುಷ್ಯೋತ್ತಮ ಗುತ್ತೇದಾರ, ಕಾಳಗಿ ಪಟ್ಟಣ ಇದ್ದರು.

ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿಸಿಪಿಐ ಜಗದೇವಪ್ಪ ಪಾಳಾ, ಪಿಎಸ್ ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿಪೊಲೀಸ್ ಬಿಗಿ ಬಂದೋಬಸ್ ್ತ ಒದಗಿಸಲಾಗಿತ್ತು.