ಚಿತ್ರ- 18ಎಕೆಎಲ್ 01
ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಬಾಲಕರ ಕನ್ನಡ ಶಾಲೆಯ ನೂತನ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷ ಸಿದ್ಧರಾಮ ಜಕಾಪುರೆ ಮತ್ತು ಉಪಾಧ್ಯಕ್ಷರನ್ನಾಗಿ ಸಿದ್ಧರಾಮ ಚಿಣಮಗೇರಿಯವರನ್ನು ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯಗುರು ಶ್ರೀಶೈಲ್ ಹಡಲಗಿ ಮತ್ತು ಸಮಿತಿ ಸದಸ್ಯರು ಇದ್ದಾರೆ.
ಶಾಲಾ ಉಸ್ತುವಾರಿ ಸಮಿತಿ ರಚನೆ
ಸಿದ್ಧಾರಾಮ ಜಕಾಪುರೆ ಅಧ್ಯಕ್ಷ, ಸಿದ್ಧಾರಾಮ ಚಿಣಮಗೇರಿ ಉಪಾಧ್ಯಕ್ಷ
ವಿಕ ಸುದ್ಧಿಲೋಕ ಅಕ್ಕಲಕೋಟ
ತಾಲೂಕಿನ ಮೈಂದರ್ಗಿ ಬಾಲಕರ ಕನ್ನಡ ಪ್ರಾಥಮಿಕ ಶಾಲೆಯಲ್ಲಿಮುಂದಿನ ಎರಡು ವರ್ಷಕ್ಕಾಗಿ ನೂತನ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಸಿದ್ಧರಾಮ ಜಕಾಪುರೆ ಮತ್ತು ಉಪಾಧ್ಯಕ್ಷರನ್ನಾಗಿ ಸಿದ್ಧರಾಮ ಚಿಣಮಗೇರಿ ಮತ್ತು ಇನ್ನುಳಿದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಶನಿವಾರ ಬೆಳಗ್ಗೆ 10ಕ್ಕೆ ಶಾಲೆಯಲ್ಲಿಮುಖ್ಯಗುರು ಶ್ರೀಶೈಲ್ ಹಡಲಗಿಯವರು ಪೋಷಕರ ಸಭೆ ಕರೆದಿದ್ದರು. 50ಕ್ಕೂ ಹೆಚ್ಚಿನ ಮಹಿಳಾ ಮತ್ತು ಪುರುಷ ಸದಸ್ಯರು ಸಭೆಯಲ್ಲಿಪಾಲ್ಗೊಂಡು ಸಮಿತಿಗೆ ಬೇಕಾಗುವ 16 ಸದಸ್ಯರನ್ನು ಆಯ್ಕೆ ಮಾಡುವದು ಹೇಗೆ? ಸಮಿತಿಯ ನಿರ್ಮಿತಿಯ ಉದ್ದೇಶ ಮತ್ತು ಸಮಿತಿ ಕಾರ್ಯಗಳು ತಿಳಿಸಿ ಹೇಳಿದರು.
ಒಂದು ತರಗತಿಗೆ ಒಬ್ಬ ಮಹಿಳೆ ಮತ್ತು ಪುರುಷರೊಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಿದ್ಧರಾಮ ಜಕಾಪುರೆಯವರನ್ನು ಎರಡನೇ ಬಾರಿಗೆ ಮತ್ತು ಸಿದ್ಧರಾಮ ಚಿಣಮಗೇರಿ ಅವರನ್ನು ಉಪಾಧ್ಯಕ್ಷರು ಎಂದು ಘೋಷಿಸಲಾಯಿತು. ನೂತನ ಉಸ್ತುವಾರಿಗಳಿಗೆ ಮುಖ್ಯಗುರು ಶ್ರೀಶೈಲ್ ಹಡಲಗಿ ಸನ್ಮಾನಿಸಿ, ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕೋರಿದರು. ಆಯ್ಕೆಯಾದ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವಲ್ಲಿಸಹಕರಿಸುವದಾಗಿ ಹೇಳಿದರು. ಶಾಲೆಯ ಹಿರಿಯ ಶಿಕ್ಷಕಿ ಸುಶೀಲಾ ಸ್ವಾಮಿ, ವಿಜಯಕುಮಾರ ಗುಂಡದ, ಶಿಕ್ಷಕ ಶಿವಾನಂದ ಗೋಗಾವ, ರಾಜಶ್ರೀ ಉಪ್ಪಿನ, ಸಂಗೀತಾ ರಾಠೋಡ, ಅಶ್ವಿನಿ ಸಂಬರಗಿ, ಅಂಬಾರಾಯ ಉಜನಿ ಸೇರಿ ಶಾಲೆಯ ಶಿಕ್ಷಕರು ಇದ್ದರು.
**** ಬಾಕ್ಸ್ --
ನೂತನ ಶಾಲಾ ವ್ಯವಸ್ಥಾಪನೆ ಸಮಿತಿ
ಸಿದ್ಧರಾಮ ಜಕಾಪುರೆ (ಅಧ್ಯಕ್ಷರು), ಸಿದ್ಧರಾಮ ಚಿಣಮಗೇರಿ (ಉಪಾಧ್ಯಕ್ಷರು), ಪರಮೇಶ್ವರ ಸಲಗರ, ಶಂಕರಲಿಂಗ ಹುಗ್ಗಿ, ಬಸವರಾಜ ಫುಲಾರಿ, ರೇಖಾ ಚಿಕ್ಕಳ್ಳಿ, ಚಂದ್ರಕಾಂತ ಬುರುಡ, ಕಾವೇರಿ ಹಸರಮನಿ, ಲಕ್ಷಿತ್ರ್ಮೕ ಮಠಪತಿ, ಮಹಾನಂದಾ ಫುಲಾರಿ ಸದಸ್ಯರು.

