25ಕ್ಕೆ ವಿಶೇಷ ಯಕ್ಷಗಾನ ತಾಳಮದ್ದಳೆ

Contributed bykugweprakash@gmail.com|Vijaya Karnataka

ಸಾಗರದಲ್ಲಿಏ.25ರಂದು ಸಂಜೆ 6 ಗಂಟೆಗೆ ವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಕುಡಪಲಿ ಸದಾನಂದ ಸಭಾಭವನದಲ್ಲಿ ವೇದನಾದ ಪ್ರತಿಷ್ಠಾನ ಹಾಗೂ ಶ್ರೀಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ಈ ಆಯೋಜನೆ ಮಾಡಲಾಗಿದೆ. ಕವಿ ಗೋಪಾಲಕೃಷ್ಣ ಅಡಿಗ ಅವರ 'ಮೋಹನ ಮುರಳಿ' ಕವಿತೆ ಆಧಾರಿತ ಕಾವ್ಯಾನುಸಂಧಾನ ಇಲ್ಲಿರುತ್ತದೆ. ದೇವೇಂದ್ರ ಬೆಳೆಯೂರು ಪರಿಕಲ್ಪನೆ ನೀಡಿದ್ದಾರೆ. ಮಂಜುನಾಥ ಕೆಳಮನೆ, ಸಂವತ್ಸರ ಸಾಗರ ಭಾಗವತರಾಗಿರುತ್ತಾರೆ.

yakshagana tala maddle a magical music event

25ಕ್ಕೆ ವಿಶೇಷ ಯಕ್ಷಗಾನ ತಾಳಮದ್ದಳೆ

ಸಾಗರ: ವೇದನಾದ ಪ್ರತಿಷ್ಠಾನ ಹಾಗೂ ಶ್ರೀಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ಏ.25ರಂದು ಸಂಜೆ 6 ಗಂಟೆಗೆ ನಗರದ ಕುಡಪಲಿ ಸದಾನಂದ ಸಭಾಭವನದಲ್ಲಿವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿಕವಿ ಗೋಪಾಲಕೃಷ್ಣ ಅಡಿಗ ಅವರ ಪ್ರಸಿದ್ಧ ಕವಿತೆ ‘ಮೋಹನ ಮುರಳಿ’ ಆಧಾರಿತ ಕಾವ್ಯಾನುಸಂಧಾನ ನಡೆಯಲಿದೆ. ಕಾರ್ಯಕ್ರಮದ ಪರಿಕಲ್ಪನೆಯನ್ನು ದೇವೇಂದ್ರ ಬೆಳೆಯೂರು ರೂಪಿಸಿದ್ದು, ಸಂಗೀತ ಸಂಯೋಜನೆಯನ್ನು ಸಂವತ್ಸರ ನೀಡಿದ್ದಾರೆ. ಭಾಗವತರಾಗಿ ಮಂಜುನಾಥ ಕೆಳಮನೆ ಮತ್ತು ಸಂವತ್ಸರ ಸಾಗರ ಭಾಗವಹಿಸಲಿದ್ದಾರೆ. ಮದ್ದಳೆಯನ್ನು ಮಂಜುನಾಥ ಗುಡ್ಡೆದಿಂಬ ವಾದಿಸಲಿದ್ದು, ಚೆಂಡೆಯನ್ನು ಶ್ರೀವತ್ಸ ಗುಡ್ಡೆದಿಂಬ ನಿರ್ವಹಿಸಲಿದ್ದಾರೆ. ಅರ್ಥಧಾರಿಯಾಗಿ ದೇವೇಂದ್ರ ಬೆಳೆಯೂರು ಪಾಲ್ಗೊಳ್ಳಲಿದ್ದಾರೆ.