ಸಿದ್ಧಸಿರಿ ಕೋ ಆಪರೇಟಿವ್ ಸೊಸೈಟಿ | ನೂತನ ಪದಾಧಿಕಾರಿಗಳ ಪದಗ್ರಹಣ
ರಾಮನಗೌಡ ಅಧ್ಯಕ್ಷ, ಪ್ರಭುಗೌಡ ಉಪಾಧ್ಯಕ್ಷ
ವಿಕ ಸುದ್ದಿಲೋಕ ವಿಜಯಪುರ
ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿ. ವಿಜಯಪುರದ ನೂತನ ಅಧ್ಯಕ್ಷರಾಗಿ ರಾಮನಗೌಡ ಬ. ಪಾಟೀಲ ಯತ್ನಾಳ, ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
5 ವರ್ಷಗಳ ಅವಧಿಗಾಗಿ ಈಚೆಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿಅವಿರೋಧವಾಗಿ ಆಯ್ಕೆಯಾಗಿದ್ದರು.
ನಗರ ಶಾಸಕರು ಹಾಗೂ ನಿರ್ದೇಶಕ ಬಸನಗೌಡ ಪಾಟೀಲ ಯತ್ನಾಳ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಬಸಯ್ಯ ಹಿರೇಮಠ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಸೋಮಶೇಖರ ಬಂಡಿ, ಶೈಲಜಾ ಬ.ಪಾಟೀಲ ಯತ್ನಾಳ, ಸೀಮಾ ಕೋರೆ, ಆದರ್ಶ ಬ.ಪಾಟೀಲ ಯತ್ನಾಳ, ವೈಭವ ಡಾಂಗೆ, ವಿಜಯಕುಮಾರ ಚೌಹಾಣ್ , ಬಸನಗೌಡ ಪಾಟೀಲ (ನಾಗರಾಳ ಹುಲಿ), ಗಣಪತಿ ಜಾಧವ, ನಾಗರಾಜ ಮುಳವಾಡ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿಬಾ ಖಂಡಾಗಳೆ ಪ್ರಮಾಣ ವಚನ ಬೋಧಿಸಿದರು. ರಾಜಶೇಖರ ಸ್ವಾಮಿ ಸೇರಿದಂತೆ ಇತರರಿದ್ದರು.
ಸಿದ್ಧಸಿರಿ-ಬಿಜೆಪಿ20
ವಿಜಯಪುರದ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

