ಬಸವಣ್ಣನ ಚಿಂತನೆ ಅಳವಡಿಸಿಕೊಳ್ಳಿ
ವಿಕ ಸುದ್ದಿಲೋಕ ಹೊಳಲ್ಕೆರೆ
ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ತಹಸಿಲ್ದಾರ್ ವಿಜಯ್ ಕುಮಾರ್ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿಸೋಮವಾರ ತಾಲೂಕು ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಂ.ಶಿವಕುಮಾರ್ ಮಾತನಾಡಿ, ಬಸವೇಶ್ವರರ ಚಿಂತನೆಗಳು ಸರ್ವಕಾಲಕ್ಕೂ ಶಾಶ್ವತವಾಗಿದ್ದು, ಇವನಾರವ ಇವನಾರವ, ಇವ ನಮ್ಮವ ಎನ್ನುವ ಸಂದೇಶವನ್ನು ಮನಕುಲಕ್ಕೆ ನೀಡಿದ ಮಹಾನ್ ಮಾನವತಾವಾದಿ ಎಂದು ಶ್ಲಾಘಿಘಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ .ಆರ್ .ಗಿರೀಶ್ ಮಾತನಾಡಿ, ಬಸವಣ್ಣ ಸೇರಿ ಹಲವಾರು ಶಿವ ಶರಣರು ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಮಾನವೀಯ ಮೌಲ್ಯಗಳ ಸಂದೇಶವನ್ನು ವಚನ ರೂಪದಲ್ಲಿತಿಳಿಸಿದ್ದಾರೆ. ಪ್ರತಿಯೊಬ್ಬರೂ ಬಸವ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗುತ್ತಿಗೆದಾರ ಎಸ್ ಮಾರುತೇಶ್ ಮಾತನಾಡಿದರು. ಉಪನ್ಯಾಸಕ ವೀರೇಶ, ಮಹಾಸಭಾ ಜಿಲ್ಲಾಉಪಾಧ್ಯಕ್ಷ ಬಸವರಾಜಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ , ಕೋಶಾಧ್ಯಕ್ಷ ಬಸವರಾಜ್ , ಮುಖಂಡರಾದ ಉಮೇಶ್ , ಮಹೇಶ್ವರಪ್ಪ, ವಕೀಲ ಚಂದ್ರಶೇಖರ್ , ವೇದಮೂರ್ತಿ, ರುದ್ರಸ್ವಾಮಿ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಆರ್ . ರಾಜಪ್ಪ, ಟಿಎಪಿಸಿಎಂಎಸ್ ಸದಸ್ಯ ಈಶ್ವರಪ್ಪ, ಕಲವನಾಗತ್ತಿಹಳ್ಳಿ ಸುರೇಶ್ , ಕುಡಿನೀರುಕಟ್ಟೆ ವೀರಭದ್ರಪ್ಪ, ಸುಧಾ ಮಾರುತೇಶ್ , ಇಒ ಶಿವಪ್ರಕಾಶ್ , ಪುರಸಭೆ ಮುಖ್ಯಾಧಿಕಾರಿ ಉಮೇಶ್ ಇತರರಿದ್ದರು.
--
ಪೋಟೋ 1
ಹೊಳಲ್ಕೆರೆ ತಾಲೂಕು ಕಚೇರಿ ಆವರಣದಲ್ಲಿಸಫಮವಾರ ಬಸವೇಶ್ವರ ಜಯಂತಿ ಅಂಗವಾಗಿ ಬಸವ ತತ್ವ ಅನುಯಾಯಿಗಳನ್ನು ಸನ್ಮಾನಿಸಲಾಯಿತು.
--
ಫೋಟೋ2
ಹೊಳಲ್ಕೆರೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು, ಮಾಸಭಾ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
--
ಫೋಟೋ3
ಹೊಳಲ್ಕೆರೆ ಪತ್ರಿಕಾ ಭವನದಲ್ಲಿಸೋಮವಾರ ತಾಲೂಕು ಪತ್ರಕರ್ತರ ಸಂಘದಿಂದ ಬಸವೇಶ್ವರ ಜಯಂತಿ ಚರಿಸಲಾಯಿತು. ವಕೀಲ ಎಸ್ .ವೇದಮೂರ್ತಿ, ರೈತರ ಸಂಘದ ಅಧ್ಯಕ್ಷ ರಂಗಸ್ವಾಮಿ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಏ.ಚಿತ್ತಪ್ಪ, ಸುರೇಶ್ , ನಾಗರಾಜ ಇತರರಿದ್ದರು.

