ಹಿರೇಬಿದನೂರಿನಲ್ಲಿವಿಜೃಂಭಣೆಯ ಬಸವ ಜಯಂತಿ

Contributed bydevimanjum@gmail.com|Vijaya Karnataka

ಗೌರಿಬಿದನೂರು ತಾಲ್ಲೂಕಿನ ಹಿರೇಬಿದನೂರಿನಲ್ಲಿ ಬಸವ ಸಮಿತಿಯಿಂದ ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅನ್ನ ದಾಸೋಹ ನಡೆಯಿತು. ಮಹಿಳೆಯರು ದೀಪಾರತಿ ನೆರವೇರಿಸಿದರು.

grand celebration of basava jayanti 893rd in hirebidanur

ವಿಕ ಸುದ್ದಿಲೋಕ ಗೌರಿಬಿದನೂರು

ಜಗಜ್ಯೋತಿ ಬಸವೇಶ್ವರರು ಅಸಮಾನತೆಯ ವಿರುದ್ಧ ಸಮರ ಸಾರಿದ ಮಹಾ ಮಾನವತಾವಾದಿ, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಜಿ. ರಾಜಣ್ಣ ಹೇಳಿದರು.

ನಗರದ ಸಮೀಪದ ಹಿರೇಬಿದನೂರಿನ ಬಸವ ಸಮಿತಿ ಜಗಜ್ಯೋತಿ ಬಸವೇಶ್ವರ 893ನೇ ಜಯಂತ್ಯುತ್ಸವದಲ್ಲಿಮಾತನಾಡಿದ ಅವರು, ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆಯ ಜಾಗೃತಿ ಮೂಡಿಸಿದರು ಎಂದರು.

ನಿವೃತ್ತ ಶಿಕ್ಷಕ ಹೆಚ್ .ಬಿ. ಪ್ರಭು ಮಾತನಾಡಿ, ಬಸವಣ್ಣನವರ ವಚನಗಳು ಹಾಗೂ ಸಮಾನತೆಯ ಮನೋಭಾವಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಗ್ರಾಮದ ಮುಖಂಡ ಹೆಚ್ .ಕೆ. ನಂಜುಂಡಪ್ಪ ಮಾತನಾಡಿ, ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎನ್ನುವ ಮೂಲಕ ಮಾನವ ಕುಲಕ್ಕೆ ಮಾನವೀಯತೆಯ ಸಂದೇಶ ಸಾರಿ¨ರು, ವಚನಗಳ ಮೂಲಕ ಸಮಾಜದ ಸುಧಾರಣೆಗೆ ನಾಂದಿ ಹಾಡಿದರು ಎಂದರು.

ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, 12ನೇ ಶತಮಾನದಲ್ಲಿಸಮಾಜದಲ್ಲಿಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿಕ್ರಾಂತಿಯ ಬೀಜ ಬಿತ್ತಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ತಿಳಿಸಿದರು.

ದೀಪೋತ್ಸವ: ಗ್ರಾಮ ಮಹಿಳೆಯರು ಶ್ರದ್ಧಾಭಕ್ತಿಯಿಂದ ದೀಪಗಳನ್ನು ಹೊತ್ತು ಮೆರವಣಿಗೆ ಮೂಲಕ ಬಸವಣ್ಣ ದೇವಾಲಯಕ್ಕೆ ಆಗಮಿಸಿ ದೀಪಾರತಿ ನೆರವೇರಿಸಿದರು.

ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದಲ್ಲಿಪಿಯುಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದ ಲಿಂಗಾಯಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಅನ್ನ ಸಂತರ್ಪಣೆ:ಬಸವೇಶ್ವರ ದೇವಾಲಯದಲ್ಲಿವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ದೀಪೋತ್ಸವ ಬೆಳಗಿದ ನಂತರ ಅನ್ನ ದಾಸೋಹ ನಡೆಯಿತು.

ಕಾರ್ಯಕ್ರಮದಲ್ಲಿಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ನಟರಾಜ್ , ವೀರಶೈವ ಸೇವಾ ಸಮಿತಿಯ ನಿರ್ದೇಶಕ ಫ್ಯಾಕ್ಟರಿ ನಟರಾಜ್ , ದೇವಿ ಮಂಜುನಾಥ್ , ಮುಖಂಡರಾದ ಜಯಣ್ಣ, ರಾಜಣ್ಣ, ನಂದೀಶ್ , ವಿನಯ್ , ಶಶಿಧರ್ , ಕಿರಣ್ , ಶಶಾಂಕ್ , ಕುಮಾರ್ , ಸೋಮಶೇಖರ್ , ಆರ್ . ಮಂಜುನಾಥ್ , ಫಾಲಾಕ್ಷ, ಶಶಿಕುಮಾರ್ , ನಟರಾಜ್ , ಶಿವಶಂಕರ ಆರಾಧ್ಯ, ಮಹೇಶ್ , ಸದಾನಂದ , ನಂದೀಶ, ಗಂಗಾಧರಪ್ಪ, ನರಸಿಂಹಮೂರ್ತಿ, ಡೇರಿ ಮಂಜುನಾಥ್ , ರವೀಂದ್ರ, ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಭಾಗವಹಿಸಿದ್ದರು.

ಚಿತ್ರ 20ಜಿಬಿಡಿ-1

ಗೌರಿಬಿದನೂರು ಸಮೀಪದ ಹಿರೇಬಿದನೂರಿನ ಬಸವ ಸಮಿತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ವಿಜೃಂಭಣೆಯಿಂದ ನಡೆಯಿತು.