ಪ್ರಮುಖ.....

Contributed byvijaykumarhs9740@gmail.com|Vijaya Karnataka

ನೆಲಮಂಗಲದ ಹರ್ಷ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆ ಸಿಬಿಎಸ್‌ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದೆ. ಗಗನ್‌.ವೈ 98% ಮತ್ತು ಲೋಚನಾ 97.4% ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. 54 ವಿದ್ಯಾರ್ಥಿಗಳು 75% ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಶಾಲೆಯ ಗುರಿ ತಲುಪಿದೆ. ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ.

harsha public school achieves 100 results a celebration in the community

ಜಾಹಿರಾತು ದಾರರು ನೀಡಿದ್ದಾರೆ ಹಾಗೂ ನೀಡುತ್ತಾರೆ.

ಹರ್ಷ ಪಬ್ಲಿಕ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ವಿಕ ಸುದ್ದಿಲೋಕ ನೆಲಮಂಗಲ

ಶ್ರೀ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಹರ್ಷ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಎಸ್ಸೆಸ್ಸೆಲ್ಸಿ ಸಿಬಿಎಸ್ ಇ ಪರೀಕ್ಷೆಯಲ್ಲಿಶೇ. 100ರಷ್ಟು ಫಲಿತಾಂಶ ಲಭಿಸಿದೆ.

ಶಾಲೆಯ ಗಗನ್ .ವೈ ಶೇ.98, ಲೋಚನಾ ಶೇ.97.4 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ, ಸ್ನೇಹಾ ಶೇ. 95.8, ಹಂಸವೇಣಿ ಶೇ.95.8, ವೃಷಭ ಶೇ.94, ಅಬ್ದುಲ್ ಮೌಜ್ ಶೇ.93, ನಿಧಿ ಶೇ.92.2, ಸಿಂಚನಾ ಶೇ.92.2, ಸೈಯದಾ ಆಯೆಜಾ ಶೇ.92.2, ತರುಣ್ ಶೇ.92, ನಿಸರ್ಗ ಶೇ.91.8, ಅನೀಶ್ ಶೇ.90.6, ಅಮೃತ ಶೇ.90 ಅಂಕ ಪಡೆದಿದ್ದಾರೆ. 54 ವಿದ್ಯಾರ್ಥಿಗಳು ಶೇ.75ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಹರ್ಷ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಬೆಂಗಳೂರು ನಗರದಂತಹ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಸಿಗಬೇಕು ಎಂಬ ಹರ್ಷ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಿರ್ಧಾರಕ್ಕೆ ಶಕ್ತಿ ಸಿಕ್ಕಿದೆ. ಸಿಬಿಎಸ್ ಇ 10ನೇ ತರಗತಿಯಲ್ಲಿಶೇ.100ಕ್ಕೆ 100 ಫಲಿತಾಂಶ ಬರುವ ಜತೆ ಅತ್ಯುತ್ತಮ ಶ್ರೇಣಿಯಲ್ಲಿವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಗಗನ್ .ವೈ ಶೇ.98, ಲೋಚನಾ ಶೇ.97.4 ಅಂಕ ಪಡೆದು ಜಿಲ್ಲೆಗೆ ,ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದು ರಾಜ್ಯ ಮಟ್ಟದಲ್ಲಿಸಾಧನೆ ಮಾಡಿರುವುದು ಸಂತೋಷವಾಗಿದೆ. ಎಲ್ಲಾವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿ ಪೋಷಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿಪ್ರಾಂಶುಪಾಲರಾದ ಪ್ರೀತಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು.

19ನೆಲಪಿಹೆಚ್ 1: ಸಿಬಿಎಸ್ ಇ 10ನೇ ತರಗತಿಯಲ್ಲಿಹೆಚ್ಚು ಅಂಕ ಪಡೆದ ನೆಲಮಂಗಲ ನಗರದ ಹರ್ಷ ಶಾಲೆಯ ವಿದ್ಯಾರ್ಥಿಗಳಿಗೆ ಡಾ.ಶಿವಕುಮಾರ್ ಅಭಿನಂದನೆ ಸಲ್ಲಿಸಿದರು.