ವಿಕ ಸುದ್ದಿಲೋಕ ಸುಳ್ಯ
ದುಗ್ಗಲಡ್ಕದ ಶ್ರೀಕೃಷ್ಣ ಸೇವಾ ಸಮಿತಿ , ಶ್ರೀಕೃಷ್ಣ ಮಂದಿರ ಕೊಯಿಕುಳಿ ವತಿಯಿಂದ ಹಿರಿಯ ಯಕ್ಷಗಾನ ಭಾಗವತ ಜಯಾನಂದ ಪಾನತ್ತಿಲರಿಗೆ ಹುಟ್ಟೂರ ಅಭಿನಂದನೆ ಹಾಗೂ ನೀರಬಿದಿರೆ ಮಹಾಲಿಂಗೇಶ್ವರ ಭಟ್ ಸ್ಮಾರಕ ಸಭಾಭವನ ಉದ್ಘಾಟನೆ ಭಾನುವಾರ ನಡೆಯಿತು.
ನೂತನ ಸಭಾಭವನವನ್ನು ಹಿರಿಯ ನ್ಯಾಯವಾದಿ ಎನ್ .ಜಯಪ್ರಕಾಶ್ ರೈ ಉದ್ಘಾಟಿಸಿದರು. ಶ್ರೀಕೃಷ್ಣ ಸೇವಾ ಸಮಿತಿಯ ಗೌರವಾಧ್ಯಕ್ಷ ಸ್ವಯಂಪ್ರಕಾಶ್ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆಉದ್ಘಾಟಿಸಿದರು. ಹಿರಿಯ ಯಕ್ಷಗಾನ ಭಾಗವತ ಜಯಾನಂದ ಪಾನತ್ತಿಲರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿನಂದನಾ ಮಾತುಗಳನ್ನಾಡಿದರು.
ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ದುಗ್ಗಲಡ್ಕ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ , ಭಜನಾ ಮಂದಿರದ ಸ್ಥಾಪಕ ಸ್ವಯಂಪ್ರಕಾಶ್ ಅವರ ಪತ್ನಿ ಮಂಜುಳ, ಕೃಷಿಕರಾದ ಸುಬ್ರಹ್ಮಣ್ಯ ಭಟ್ ಮೂಡೆಕಲ್ಲು, ಭಕ್ತವತ್ಸಲ ಭಟ್ ನೀರಬಿದಿರೆ, ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ.ಜೆ., ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಭಾಸ್ಕರ ಪೂಜಾರಿ ಬಾಜಿನಡ್ಕ ಉಪಸ್ಥಿತರಿದ್ದರು.
ಹಿರಿಯ ನಾಟಿ ವೈದ್ಯ ರಾಮಣ್ಣ ನಾಯ್ಕ ನೀರಬಿದಿರೆ, ಹಿರಿಯ ಸದಸ್ಯರಾದ ವಾಸುದೇವ ಗೌಡ ಮದಕ, ರಾಮಚಂದ್ರ ನಾಯ್ ್ಕ ಎಸ್ ., ನಾರಾಯಣ ಟೈಲರ್ , ಗೋವಿಂದ ನಾಯ್ಕ ಕಲ್ಮಡ್ಕ, ವಿಷ್ಣು ಭಟ್ ಕುದ್ಪಾಜೆ, ಸಭಾಭವನ ನಿರ್ಮಾಣದಲ್ಲಿಶ್ರಮಿಸಿದ ದಿನೇಶ್ ಕೊಯಿಕುಳಿ, ಬಿ.ಎಸ್ಸಿ.ನಸಿಂರ್ ಗ್ ನಲ್ಲಿಡಿಸ್ಟಿಂಕ್ಷನ್ ಗಳಿಸಿದ ಕೃತಿಕಾ ಕುದ್ಪಾಜೆ, ಯಕ್ಷಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ, ಶೈಲಜಾ ನೀರಬಿದಿರೆ ಅವರನ್ನು ಗೌರವಿಸಲಾಯಿತು.
ಸೇವಾ ಸಮಿತಿ ವತಿಯಿಂದ ಸ್ವಯಂ ಪ್ರಕಾಶ್ ದಂಪತಿಯನ್ನು ಸನ್ಮಾನಿಸಲಾಯಿತು. ಅನನ್ಯ ಜಯರಾಜ್ ಪ್ರಾರ್ಥಿಸಿದರು. ಸ್ವಯಂಪ್ರಕಾಶ್ ನೀರಬಿದಿರೆ ಸ್ವಾಗತಿಸಿದರು. ನವ್ಯ ದಿನೇಶ್ ಕೊಯಿಕುಳಿ ಸನ್ಮಾನ ಪತ್ರ ವಾಚಿಸಿದರು. ಭವಾನಿಶಂಕರ ಕಲ್ಮಡ್ಕ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಾಲಕೃಷ್ಣ ನಾಯರ್ ನೀರಬಿದಿರೆ ಸಂಯೋಜನೆಯಲ್ಲಿಕೃಷ್ಣ ಲೀಲೆ- ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
ಫೋಟೋ
20ಎಸ್ ಯುಎಲ್ - ಹಿರಿಯ ಯಕ್ಷಗಾನ ಭಾಗವತ ಜಯಾನಂದ ಪಾನತ್ತಿಲರನ್ನು ಸನ್ಮಾನಿಸಲಾಯಿತು.

