ಇಂದು ಜೆಡಿಎಸ್ ಮಹಿಳಾ ಘಟಕದಿಂದ ಪ್ರತಿಭಟನೆ

Contributed byshreekanta.akki@timesofindia.com|Vijaya Karnataka

ಜೆಡಿಎಸ್ ಮಹಿಳಾ ಘಟಕವು ಇಂದು ಪ್ರತಿಭಟನಾ ಸಭೆ ನಡೆಸಲಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಮಸೂದೆ ಸೋಲುಂಡಿರುವುದನ್ನು ಖಂಡಿಸಿ ಈ ಸಭೆ ಆಯೋಜಿಸಲಾಗಿದೆ. ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಯನ್ನು ವಿರೋಧಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ಪಕ್ಷದ ಪ್ರಮುಖ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಪಕ್ಷವು ಮನವಿ ಮಾಡಿದೆ.

jds women wing strong protest in bangalore

ಇಂದು ಜೆಡಿಎಸ್ ಮಹಿಳಾ ಘಟಕದಿಂದ ಪ್ರತಿಭಟನೆ

ಕೊಪ್ಪಳ:‘‘ ಮಹಿಳಾ ಮೀಸಲು ವಿಧೇಯಕ ಮಸೂದೆಗೆ ಲೋಕಸಭೆಯಲ್ಲಿಸೋಲುಂಟಾದ ಹಿನ್ನೆಲೆಯಲ್ಲಿಜೆಡಿಎಸ್ ನಿಂದ ಮಂಗಳವಾರ ಪ್ರತಿಭಟನಾ ಸಭೆ ಆಯೋಜಿಸಿದೆ,’’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ‘‘ಕಾಂಗ್ರೆಸ್ ನ ಮಹಿಳಾ ವಿರೋಧಿ ನೀತಿ ಖಂಡಿಸಿ ಬಸವೇಶ್ವರ ವೃತ್ತದಲ್ಲಿಪ್ರತಿಭಟನಾ ಸಭೆ ನಡೆಯಲಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿಮಹಿಳೆಯರು ಭಾಗವಹಿಸಬೇಕು,’’ ಎಂದು ಪಕ್ಷದ ಮುಖಂಡರು ಪ್ರಕಟಣೆಯಲ್ಲಿತಿಳಿಸಿದ್ದಾರೆ.