26ರಂದು ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಸಮ್ಮೇಳನ

Contributed byharisha.lakshmipathy@timesgroup.com|Vijaya Karnataka

ಏಪ್ರಿಲ್ 26ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ. ಸಾವಿರಾರು ನೌಕರರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಧಕ ನೌಕರರ ಸನ್ಮಾನ ಕಾರ್ಯಕ್ರಮಗಳು ಸಹ ನಡೆಯಲಿವೆ. ಇದು ನೌಕರರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿದೆ. ಒತ್ತಡ ನಿವಾರಣೆ ಮತ್ತು ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಉದ್ದೇಶವಿದೆ.

state government employees cultural event on april 26

ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಸಮ್ಮೇಳನ 26ರಂದು ವಿಕ ಸುದ್ದಿಲೋಕ ಮೈಸೂರು ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಸಮ್ಮೇಳನ ಏ.26ರಂದು ನಡೆಯಲಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್

ಜಿಲ್ಲಾಘಟಕದ ಅಧ್ಯಕ್ಷೆ ಡಾ.ಕೆ. ಲಕ್ಷ್ಮೇ ತಿಳಿಸಿದರು. ‘‘ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿಅಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ,’’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು. ‘‘ರಾಜ್ಯದ ವಿವಿಧೆಡೆಯಿಂದ ಸುಮಾರು ಸಾವಿರ ಮಂದಿ ಸರಕಾರಿ ನೌಕರರು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಈ ವೇಳೆ ನೂತನ ಪದಾಧಿಕಾರಿಗಳ ಪದಗ್ರಹಣ, ಸಾಧಕ ಸರಕಾರಿ ನೌಕರರಿಗೆ ಸನ್ಮಾನ ಸಹ ನಡೆಯಲಿದೆ,’’ ಎಂದು ತಿಳಿಸಿದರು. ಬಿ.ಎನ್ .ಪಲ್ಲವಿ ಮಾತನಾಡಿ, ‘‘ಸರಕಾರಿ ನೌಕರರಲ್ಲಿನ ಪ್ರತಿಭೆ ಅನಾವರಣಕ್ಕೆ ಇದು ಸೂಕ್ತ ವೇದಿಕೆಯಾಗಿದೆ. ನೌಕರರು ಎದುರಿಸುತ್ತಿರುವ ಒತ್ತಡ ನಿವಾರಣೆಗೆ ಅವಕಾಶ ಕಲ್ಲಿಸುವ ಉದ್ದೇಶವಿದೆ. ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ,’’ ಎಂದರು. ಮಮತಾ ಮಾತನಾಡಿ, ‘‘ಇಂದು ಬಹಳಷ್ಟು ಮಂದಿ ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಸೇರಿಸಿದರೆ ತಮ್ಮ ಕೆಲಸ ಮುಗಿಯಿತು ಎಂದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ನಾಡು, ನುಡಿ, ಸಂಸ್ಕೃತಿಯ ಅರಿವು ಮೂಡಿಸುವ ಕೆಲಸವನ್ನು ತಮ್ಮ ಸಂಘ ಮಾಡುತ್ತಿದೆ. ಕನ್ನಡ ಜಾಗೃತಿ ಅಭಿಯಾನ ಸಹ ಹಮ್ಮಿಕೊಂಡಿದೆ. ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಅದರ ವಿರುದ್ಧ ಧ್ವನಿ ಎತ್ತುತ್ತಿದೆ,’’ ಎಂದರು. ಈ ಸಂದರ್ಭದಲ್ಲಿ ಗಣೇಶ್ ನಿಲುವಾಗಿಲು, ರಾಘವೇಂದ್ರ ಇದ್ದರು.